ಬೆಂಗಳೂರು: ಸಂಗೀತ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ್ ಎರ್.ಆರ್ ರೆಹಮಾನ್ ಅವರನ್ನು ಕೊಪ್ಪಳದ ಗಂಗಮ್ಮ ಭೇಟಿ ಮಾಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಮೂಲಕ ಎಲ್ಲರ ಗಮನ ಸೆಳೆದಿದ್ದ ಗಂಗಮ್ಮನ ಬಗ್ಗೆ ಎ.ಆರ್ ರೆಹಮಾನ್ ತಿಳಿದುಕೊಂಡಿದ್ದಾರೆ. 500 ರೂಪಾಯಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಗಾಯಕಿ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಷಯ ಕೇಳಿ ಎ.ಆರ್ ರೆಹಮಾನ್ ಸಂತಸ ವ್ಯಕ್ತಪಡಿಸಿದ್ದರು.
Advertisement
ಇದೇ ತಿಂಗಳು 22ಕ್ಕೆ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ಧತೆಗಾಗಿ ಎ.ಆರ್ ರೆಹಮಾನ್ ಬೆಂಗಳೂರಿಗೆ ಆಗಮಿಸಿದ್ದರು. ಇದೇ ವೇಳೆ ಗಂಗಮ್ಮರನ್ನು ಎ.ಆರ್ ರೆಹಮಾನ್ ಭೇಟಿ ಮಾಡಿ ಶುಭ ಹಾರೈಸಿದ್ದಾರೆ.
Advertisement
Advertisement
ಗಂಗಮ್ಮ 20 ವರ್ಷದಿಂದಲೂ ಹಾಡುತ್ತಿದ್ದು, ಫೇಸ್‍ಬುಕ್ ವಿಡಿಯೋದಿಂದಾಗಿ ಎಲ್ಲೆಡೆ ಫೇಮಸ್ ಆಗಿದ್ದರು. ಇವರು ಹಾಡುತ್ತಿದ್ದ ವಿಡಿಯೋವನ್ನು ಸ್ಟುಡಿಯೋ ಮಾಲೀಕ ಶಿವಪ್ರಸಾದ್ ಲೈವ್ ಮಾಡಿದ್ದರು. ಆ ವಿಡಿಯೋ 24 ಗಂಟೆಯಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಜನ ಹಾಡು ಕೇಳಿದ್ದರು.
Advertisement
ನಾನು ಚಿಕ್ಕವಯಸ್ಸಿನಿಂದಲೂ ಹಾಡನ್ನು ಹಾಡಲು ಶುರು ಮಾಡಿದೆ. ಆದರೆ ಆಗ ಆರ್ಕೆಸ್ಟ್ರಾ ಇರಲಿಲ್ಲ. ನಂತರ ಕೊಪ್ಪಳದಲ್ಲಿ ಆರ್ಕೆಸ್ಟ್ರಾ ಶುರುವಾದಾಗ 20 ವರ್ಷದಿಂದ ಹಾಡಲು ಶುರು ಮಾಡಿದ್ದೇನೆ. ಈಗ ನಾನು ಗುರುತಿಸಿಕೊಳ್ಳುತ್ತಿದ್ದೇನೆ. ವಿಡಿಯೋ ವೈರಲ್ ಆಗಿದ್ದಕ್ಕೆ ನನ್ನ ಕುಟುಂಬದವರು ಸಂತೋಷವಾಗಿದ್ದಾರೆ ಎಂದು ಗಂಗಮ್ಮ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv