ಬೆಂಗಳೂರು: ಭಾರೀ ಮಳೆಯಿಂದಾಗಿ ಕೆರೆ ಕೋಡಿ ಒಡೆದು ನಗರದ ಸಿಂಗಾಪುರ ಬಡಾವಣೆ ಜಲಾವೃತಗೊಂಡಿದೆ. ಅಪಾರ್ಟ್‌ಮೆಂಟ್‌ಗಳಿಗೆಲ್ಲ ನೀರು ನುಗ್ಗುತ್ತಿದ್ದು, ನಿವಾಸಿಗಳಿಗೆ ಹಾವುಗಳ ಕಾಟ ಶುರುವಾಗಿದೆ.
ನಿನ್ನೆ ರಾತ್ರಿ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಯಿತು. ಪರಿಣಾಮವಾಗಿ ಎಲ್ಲೆಡೆ ನೀರು ಹರಿದಿದೆ. ಯಲಹಂಕದ ಬಡಾವಣೆಯಲ್ಲಿ ಕೆರೆ ಕೋಡಿ ಒಡೆದ ಪರಿಣಾಮ ಸುಮಾರು 700 ಮನೆಗಳಿರುವ ಇರುವ ಅಪಾರ್ಟ್‌ಮೆಂಟ್ ಜಲಾವೃತಗೊಂಡಿದೆ. ಈ ವೇಳೆ ಹಾವುಗಳನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ನೀರು ನುಗ್ಗುತ್ತಿರುವ ಸಂದರ್ಭದಲ್ಲಿ ಹಾವೊಂದು ಮೀನನ್ನು ನುಂಗುತ್ತಿರುವ ದೃಶ್ಯವನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ
ಸಿಂಗಾಪುರ ಲೇಔಟ್ ಪಕ್ಕದ ವಾರ್ಡ್ 11 ಕುವೆಂಪುನಗರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ಮಳೆ ಹೊಡೆತಕ್ಕೆ ಲ್ಯಾಂಡ್ ಮಾರ್ಕ್ ಡ್ರೀಮ್ಸ್ ಅಪಾರ್ಟ್‌ಮೆಂಟ್ ಕಾಂಪೌಂಡ್ ಗೋಡೆ ಕುಸಿದಿದೆ. ಅಲ್ಲದೇ ಅಪಾರ್ಟ್‌ಮೆಂಟ್‌ನ ಪಾರ್ಕ್ ಪ್ಲಾಟ್ ಸಂಪೂರ್ಣ ಕೆಸರು ಮಯವಾಗಿದೆ. ಪಾರ್ಕಿಂಗ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ನೀರಿನಲ್ಲಿ ಮುಳುಗಿವೆ. ಇದನ್ನೂ ಓದಿ: 159 ಕೋಟಿ ವೆಚ್ಚ – ಈ ವರ್ಷವೇ ರಾಯಣ್ಣ ಸೈನಿಕ ಶಾಲೆ ಪ್ರಾರಂಭ