ಸಿಂಗಾಪುರ: ದಕ್ಷಿಣ ಆಫ್ರಿಕಾದಿಂದ ಸಿಂಗಾಪುರಕ್ಕೆ ಪ್ರಯಾಣ ಮಾಡಿದ್ದ ಇಬ್ಬರಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ. ಸಿಂಗಾಪುರದಲ್ಲೂ ಓಮಿಕ್ರಾನ್ ಮೊದಲ ಬಾರಿಗೆ ತನ್ನ ಖಾತೆ ತೆರೆದಿದೆ.
Advertisement
ಜೋಹನ್ಸ್‌ಬರ್ಗ್‌ನಿಂದ ಪ್ರಯಾಣಿಸಿದ್ದ ಇಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿರುವುದು ಪ್ರಾಥಮಿಕ ಪರೀಕ್ಷೆಯಿಂದ ದೃಢಪಟ್ಟಿದೆ. ಅವರನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೇರಿಕ್ಕೆ?
Advertisement
Advertisement
ಸೋಂಕಿತರು ಪ್ರಯಾಣಿಸಿದ್ದ ವಿಮಾನದಲ್ಲೇ 19 ಮಂದಿ ಪ್ರಯಾಣ ಬೆಳೆಸಿದ್ದರು. ಅವರನ್ನೂ ಪರೀಕ್ಷೆ ಒಳಪಡಿಸಲಾಗಿದ್ದು, ಕೋವಿಡ್ ನೆಗೆಟಿವ್ ಬಂದಿದೆ. ಆದಾಗ್ಯೂ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಓಮಿಕ್ರಾನ್ ಸೋಂಕಿತರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಕೆಮ್ಮು ಮತ್ತು ಗಂಟಲು ಕೆರೆತದ ಸೌಮ್ಯ ಲಕ್ಷಣಗಳು ಇದ್ದ ಕಾರಣ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.
Advertisement
ಸೋಂಕಿತರಲ್ಲಿ ಒಬ್ಬರು 44 ವಯಸ್ಸಿನ (ಪುರುಷ) ಸಿಂಗಾಪುರ ಮೂಲದವರೇ ಆಗಿದ್ದಾರೆ. ಅವರು ಮೊಜಾಂಬಿಕ್ ಮೂಲಕ ಜೋಹಾನ್ಸ್‌ಬರ್ಗ್‌ಗೆ ತೆರಳಿದ್ದರು. ನ.29ರಂದು ಅವರು ಮೆಜಾಂಬಿಕ್‌ನಿಂದ ತೆರಳುವಾಗ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಬಂದಿತ್ತು. ಮತ್ತೊಬ್ಬರು 41 ವಯಸ್ಸಿನ ಮಹಿಳೆ ಸಿಂಗಾಪುರದವರೇ ಆಗಿದ್ದು, ದಕ್ಷಿಣ ಆಫ್ರಿಕಾದಿಂದ ನೇರವಾಗಿ ಆಗಮಿಸಿದ್ದರು ಎಂದು ಸಚಿವಾಲಯವು ಮಾಹಿತಿ ನೀಡಿದೆ. ಇದನ್ನೂ ಓದಿ: ಕೊರೊನಾಗೆ ಮೃತಪಟ್ಟ BPL ಕುಟುಂಬಕ್ಕೆ 1 ಲಕ್ಷ ಪರಿಹಾರ – ಸರ್ಕಾರದಿಂದ ಆದೇಶ ಪರಿಷ್ಕರಣೆ
ಸಿಂಗಾಪುರ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಲಸಿಕೆ ನೀಡಿರುವ ದೇಶವಾಗಿದೆ. ದೇಶದಲ್ಲಿ ಒಟ್ಟು ಜನಸಂಖ್ಯೆ ಶೇ. 96 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.