ಸಿಂಗಾಪುರ: ಸಿಂಗಾಪುರ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಗೆಲುವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.
Advertisement
32 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 21-15 21-7 ಸೆಟ್‍ಗಳಿಂದ ಜಪಾನಿನ ಸೈನಾ ಕವಾಕಮಿ ಅವರನ್ನು ಸೋಲಿಸುವ ಮೂಲಕ ಸಿಂಧು ಮೇಲುಗೈ ಸಾಧಿಸಿದರು. ಈ ಮೂಲಕ ವಿಶ್ವದ 38ನೇ ಶ್ರೇಯಾಂಕದ ಸೈನಾ ಕವಾಕಮಿ ವಿರುದ್ಧ ಸಂಪೂರ್ಣ ಹಿಡಿತ ತೋರಿ ಫೈನಲ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ 2022ನೇ ವರ್ಷದಲ್ಲಿ ತನ್ನ ಮೊದಲ ಸೂಪರ್ 500 ಪ್ರಶಸ್ತಿಯ ಗೆಲುವಿಗೆ ಇನ್ನೊಂದು ಮೆಟ್ಟಿಲು ಬಾಕಿ ಇದೆ. ಇದನ್ನೂ ಓದಿ: ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್
Advertisement
Happy!!!@Pvsindhu1 into the #SingaporeOpenSuper500 Finals ????????????????!!
Waiting for Tomorrow's Final⌛#pvsindhu#SingaporeOpen
Winning moment ???????????? pic.twitter.com/0WPu2p2WS9
— Kamalesh joy (@kamaleshjoy) July 16, 2022
Advertisement
ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಈ ವರ್ಷ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್‍ನಲ್ಲಿ ಎರಡು ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದರು. ಈ ಹಿಂದೆ 2018ರ ಚೀನಾ ಓಪನ್‍ನಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಸಿಂಧು 2-0 ದಾಖಲೆ ಬರೆದಿದ್ದರು. ಇದನ್ನೂ ಓದಿ: ನಟಿ ಸುಶ್ಮಿತಾ ಸೇನ್ ಜೊತೆಗೆ ಲಲಿತ್ ಮೋದಿ ಲವ್ವಿ-ಡವ್ವಿ