ಬೆಂಗಳೂರು: ಸಮನ್ವಯ ಹೆಲ್ತ್‌ಕೇರ್‌ನ (Samanvay Healthcare) ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಶಾಸ್ತ್ರಿ (Raghavendra Shastry) ಅವರಿಗೆ ಸಿಂಗಾಪುರ ಸರ್ಕಾರವು (Government of Singapore) ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರ ಅತ್ಯುತ್ತಮ ಕೆಲಸವನ್ನು ಗುರುತಿಸಿ ಪ್ರೆಸಿಡೆನ್ಶ್ಯಿಯಲ್ ರೆಸಿಲಿಯನ್ಸ್ ಪದಕ (Presidential Resilience Medal) ನೀಡಿ ಗೌರವಿಸಿದೆ.
ಮೂಲತಃ ಬೆಂಗಳೂರಿನವರಾದ (Bengaluru) ರಾಘವೇಂದ್ರ ಶಾಸ್ತ್ರಿ ಅವರು ಕೋವಿಡ್ (Covid) ಸಮಯದಲ್ಲಿ 2 ತಿಂಗಳ ಕಾಲ ಪ್ರತಿದಿನ ಹಣ್ಣುಗಳು, ಬಿಸಿ ತಿಂಡಿಗಳು, ಪಾನೀಯಗಳ ಪೂರೈಕೆ ಮಾಡುವುದರೊಂದಿಗೆ ಎಲ್ಲಾ ಆಸ್ಪತ್ರೆಗಳ ವೈದ್ಯಕೀಯ ವಿಭಾಗ ಮತ್ತು ಆರೋಗ್ಯ ರಕ್ಷಣೆಗೆ ಸಹಕಾರ ನೀಡಿದ್ದರು. ಅಷ್ಟೇ ಅಲ್ಲದೇ ವಿವಿಧ ನೈಸರ್ಗಿಕ ಪದಾರ್ಥಗಳಾದ ಶುಂಠಿ, ಅರಶಿಣ ವಿವಿಧ ತೈಲ ಸಾರದ ಬಳಕೆ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಮುಂದಿನ ವರ್ಷದಿಂದ್ಲೇ ಶಾಲಾ ಮಕ್ಕಳಿಗೆ ಉಚಿತ ʻಸೈಕಲ್ ಭಾಗ್ಯʼ – ಮಧು ಬಂಗಾರಪ್ಪ ಭರವಸೆ
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ಶಾಸ್ತ್ರಿ ಅವರು, ಕೋವಿಡ್ ಸಮಯದಲ್ಲಿ ವೈದ್ಯರ ಕಠಿಣ ಪರಿಶ್ರಮ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಹಕಾರ ನೀಡಲು ಇದು ಉತ್ತಮ ಸಮಯ ಎಂದು ಭಾವಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ‘ವಿಕ್ಷಿತ್ ಭಾರತ್ @2047: ಯುವಜನತೆಯ ಧ್ವನಿ’ ಚಾಲನೆ: ಸಾಕ್ಷಿಯಾದ ರಾಜ್ಯಪಾಲರು
Advertisement
Advertisement
ಸಂಸ್ಕೃತಿ, ಸಮುದಾಯ ಮತ್ತು ಯುವಕರ ಸಂಸದೀಯ ಕಾರ್ಯದರ್ಶಿ ಎರಿಕ್ ಚುವಾ (Eric Chua) ಅವರು ರಾಘವೇಂದ್ರ ಶಾಸ್ತ್ರಿ ಅವರ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದು ಬಣ್ಣಿಸಿದರು. ಇದನ್ನೂ ಓದಿ: ಲೋಕ ಸಮರ ಗೆಲ್ಲಲು ಕಾಂಗ್ರೆಸ್ ತಯಾರಿ – 4 ಕ್ಷೇತ್ರದಲ್ಲಿ ನಿಲ್ತಾರಾ ಸೆಲೆಬ್ರಿಟಿ ಅಭ್ಯರ್ಥಿಗಳು?