ಮೃತ್ಯು ದರ್ಶನ ಮಾಡಿಸಿದ ʻಏರ್‌ ಟರ್ಬ್ಯೂಲೆನ್ಸ್‌ʼ – ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಆಗಿದ್ದೇನು?

Public TV
5 Min Read
01 11

ಇತ್ತೀಚೆಗಷ್ಟೇ ಲಂಡನ್ನಿನಿಂದ ಸಿಂಗಾಪುರಕ್ಕೆ ಹೊರಟಿದ್ದ ಸಿಂಗಾಪುರ ಏರ್‌ಲೈನ್ಸ್‌ (Singapore Airlines) ಬೋಯಿಂಗ್‌ ವಿಮಾನವೊಂದು ತೀವ್ರ ಪ್ರಕ್ಷುಬ್ಧತೆಗೆ ಸಿಲುಕಿ ಅಲ್ಲಿದ್ದ ಪ್ರಯಾಣಿಕರಿಗೆ ಮೃತ್ಯು ದರ್ಶನ ಮಾಡಿಸಿತ್ತು. 211 ಪ್ರಯಾಣಿಕರು ಮತ್ತು 18 ಸಿಬ್ಬಂದಿಯಿದ್ದ ಬೋಯಿಂಗ್ 777-300 ಇಆರ್ ವಿಮಾನದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದರು, 30 ಮಂದಿ ಗಾಯಗೊಂಡಿದ್ದರು. ಈ ಸಮಯದಲ್ಲಿ ʻಹವಾಯಿʼ ವಿಮಾನದ ಸೇಫ್‌ ಲ್ಯಾಂಡಿಂಗ್‌ ಅನ್ನೂ ನಾವು ನೆನಪಿಸಿಕೊಳ್ಳಬಹುದಾಗಿದೆ.

022

ಹೌದು. 1988ರ ಏಪ್ರಿಲ್‌ 28ರ ಮಧ್ಯಾಹ್ನ 1.30ರ ಸುಮಾರಿಗೆ ಹೀಲೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೋಯಿಂಗ್‌ ಸರಣಿಯ ʻಅಲೋಹಾ ಏರ್‌ಲೈನ್ಸ್‌ʼ (Aloha Airlines) ವಿಮಾನವೂ ಹವಾಯಿ ರಾಜಧಾನಿಗೆ ಹೊರಟಿತ್ತು. 12 ಸಾವಿರ ಗಂಟೆಗಳ ಹಾರಾಟದ ಸಾಮರ್ಥ್ಯ ಹೊಂದಿದ್ದ ಈ ವಿಮಾನವೂ 95 ಪ್ರಯಾಣಕರನ್ನು ಹೊತ್ತು ಸಾಗಿತ್ತು. ವಿಮಾನವು ಸುಮಾರು 28,000 ಅಡಿಗಳ ಎತ್ತರಕ್ಕೆ ತಲುಪಿದ್ದಾಗ ಮಧ್ಯಾಹ್ನ 1.48ರ ವೇಳೆಗೆ ವಿಮಾನದ ಫ್ಲ್ಯೂಸೇಜ್‌ ಭಾಗವು ಮುರಿದು ಗಾಳಿಯಲ್ಲಿ ಹಾರಿಹೋಗಿತ್ತು. ಪ್ರಯಾಣಿಕರು ಅಷ್ಟು ಎತ್ತರದಿಂದ ಒಂದು ಇಣುಕು ನೋಡುವಷ್ಟರಲ್ಲೇ ಪೆಸಿಫಿಕ್‌ ಒಡಲು ಸೇರಿತ್ತು. ಅಂದಿನ ಆ ಭಯಾನಕ ಸ್ಥಿತಿಯಲ್ಲಿ ವಿಮಾನದಲ್ಲಿದ್ದ 95 ಪ್ರಯಾಣಿಕರ ಪೈಕಿ 94 ಮಂದಿ ಬದುಕುಳಿದಿದ್ದರು. ಕಾಕ್‌ ಪಿಟ್‌ ಬಾಗಿಲ ಬಳಿ ನಿಂತಿದ್ದ ಫ್ಲೇಟ್‌ ಅಡೆಂಡರ್‌ ಮಾತ್ರವೇ ಗಾಳಿಯ ರಭಸಕ್ಕೆ ಸಿಕ್ಕಿ ಪೆಸಿಫಿಕ್‌ ಸಾಗರದ ಒಡಲಿಗೆ ಬಿದ್ದು ಜೀವ ಬಿಟ್ಟಿದ್ದರು. ಉಳಿದ 94 ಪ್ರಯಾಣಿಕರು ಸೇಫ್‌ ಆಗಿ ಲ್ಯಾಂಡಿಂಗ್‌ ಆಗಿದ್ದರು. ವಿಮಾನ ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ಪರಸ್ಪರ ಅಪ್ಪಿಕೊಂಡು ಪುನರ್ಜನ್ಮವೇ ಸಿಕ್ಕಿತೆಂದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇದೀಗ ಸಿಂಗಾಪುರ ಏರ್‌ಲೈನ್ಸ್‌ ಸಹ ಆ ಹವಾಯಿ ಅದೃಷ್ಟದ ವಿಮಾನ ಲ್ಯಾಂಡಿಂಗ್‌ ಅನ್ನು ನೆನಪಿಸಿದೆ.

ಈ ದುರ್ಘಟನೆ ಸಂಭವಿಸಿದ್ದು ಹೇಗೆ, ಟರ್ಬ್ಯೂಲೆನ್ಸ್‌ (Air Turbulence) ಹೇಗೆ ಸಂಭವಿಸುತ್ತದೆ? ಗಾಳಿಯ ಪ್ರಕ್ಷುಬ್ಧತೆಯಿಂದ ವಿಮಾನ ಕೆಳಗೆ ಬೀಳುತ್ತಾ? ಹಿಂದೆ ಇಂತಹ ಘಟನೆಗಳು ಸಂಭವಿಸಿದೆಯಾ? ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಆಗಿದ್ದೇನು ಎಂಬುನ್ನು ತಿಳಿಯುವ ಮುನ್ನ ಘಟನೆ ನಂತರ ಏರ್‌ಲೈನ್ಸ್‌ ತೆಗೆದುಕೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಗಮನ ಹರಿಸೋಣ…

02 10

ಏರ್‌ಲೈನ್ಸ್‌ ಕೈಗೊಂಡ ಸುರಕ್ಷತಾ ಕ್ರಮಗಳೇನು?
ಸಿಂಗಾಪುರ ಏರ್‌ಲೈನ್ಸ್‌ ಘಟನೆ ಬಳಿಕ ವಿಮಾನಯಾನ ಸಂಸ್ಥೆಯು ಪ್ರಕ್ಷುಬ್ಧತೆಯ ವಾತಾವರಣ ಎದುರಿಸಲು ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಟೇಕ್-ಆಫ್ ಆದ ನಂತರ ಸೀಟ್‌ಬೆಲ್ಟ್ (Flight Seat Belt) ಅನ್ನು ಸ್ವಿಚ್ ಆಫ್ ಮಾಡಲಾಗುತ್ತದೆ. ಲ್ಯಾಂಡಿಂಗ್‌ ಮಾಡುವ ಕೆಲವೇ ಕ್ಷಣಗಳಿಗೂ ಮುನ್ನ ಮತ್ತೆ ಆನ್ ಮಾಡಲಾಗುತ್ತದೆ. ಈ ನಿಯಮವನ್ನು ಪಾಲನೆ ಮಾಡುತ್ತಿದ್ದಾರೆಯೇ ಎನ್ನುವ ಬಗ್ಗೆ ಗಗನ ಸಖಿಯರು ಪರಿಶೀಲಿಸಬೇಕು. ಅಲ್ಲದೇ ಸೀಟ್‌ಬೆಲ್ಟ್‌ ಚಿಹ್ನೆಯು ಚಾಲನೆಯಲ್ಲಿರುವಾಗ, ಬಿಸಿ ಪಾನೀಯ ಸೇವಿಸುವುದನ್ನ ನಿಷೇಧಿಸಲಾಗಿದೆ. ಜೊತೆಗೆ ಆ ಸಂದರ್ಭದಲ್ಲಿ ಊಟ ಸೇವನೆ ಮಾಡುವುದನ್ನೂ ನಿಷೇಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಪಾಕ್‌ ಪರಿಸ್ಥಿತಿ ಕೆಟ್ಟದ್ದಾಗಿದೆ, ಮೊದಲು ನಿಮ್ಮದನ್ನು ನೋಡಿಕೊಳ್ಳಿ – ಪಾಕ್‌ ಮಾಜಿ ಸಚಿವರ ಟ್ವೀಟ್‌ಗೆ ಕೇಜ್ರಿವಾಲ್‌ ತಿರುಗೇಟು

03 10

ಏರ್‌ ಟರ್ಬ್ಯೂಲೆನ್ಸ್‌ ಅಂದ್ರ ಏನು?
ಆಗಸದಲ್ಲಿ ವಿಮಾನವು ಸರಾಗವಾಗಿ ಹಾರಾಡಲು ಮಾರುತದ ಹರಿವು ಅಡ್ಡಿಪಡಿಸಿದರೆ, ಅದನ್ನೇ ʻಗಾಳಿಯ ಪ್ರಕ್ಷುಬ್ಧತೆʼ (Air Turbulence) ಅಥವಾ ʻಏರ್ ಟರ್ಬ್ಯೂಲೆನ್ಸ್ʼ ಎಂದು ಕರೆಯುತ್ತಾರೆ. ಇಂತಹ ಸಮಯದಲ್ಲಿ ವಿಮಾನ ಅಲುಗಾಡಲು ಆರಂಭಿಸುತ್ತದೆ. ತನ್ನ ನಿಯಮಿತ ಮಾರ್ಗದಿಂದ ಪಥ ಬದಲಿಸುತ್ತದೆ. ಇದ್ದಕ್ಕಿದ್ದಂತೆ ಕೆಲ ಅಡಿಗಳಷ್ಟು ಕೆಳಕ್ಕೆ ಕುಸಿಯುತ್ತದೆ. ಈ ವೇಳೆ ಜೀವಹಾನಿ ಸಂಭವಿಸುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಇದನ್ನೂ ಓದಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

04 1

ಏರ್‌ ಟರ್ಬ್ಯೂಲೆನ್ಸ್‌ ವಿಧಾನಗಳು ಯಾವುವು:
ಮಾರುತದ ಪರಿಣಾಮದ ತೀವ್ರತೆ ಆಧರಿಸಿ 3 ರೀತಿಯ ಪ್ರಕ್ಷುಬ್ಧತೆಗಳನ್ನು ತಜ್ಞರು ಗುರುತಿಸುತ್ತಾರೆ. ಲಘು, ಮಧ್ಯಮ ಹಾಗೂ ತೀವ್ರ ಪ್ರಕ್ಷುಬ್ಧತೆಯನ್ನು ಗುರುತಿಸಲಾಗಿದೆ.
ಲಘು ಪ್ರಕ್ಷುಬ್ಧತೆ: ವಿಮಾನವು 1 ಮೀಟರ್‌ವರೆಗೆ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತದೆ. ಪ್ರಯಾಣಿಕರಿಗೆ ಇದು ಅನುಭವಕ್ಕೆ ಬರುವುದಿಲ್ಲ.
ಮಧ್ಯಮ ಪ್ರಕ್ಷುಬ್ಧತೆ: ಈ ಸಂದರ್ಭದಲ್ಲಿ ವಿಮಾನಗಳು 3-6 ಮೀಟರ್‌ಗಳಷ್ಟು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತವೆ. ಇದು ಪ್ರಯಾಣಿಕರ ಅನುಭವಕ್ಕೆ ಬರುತ್ತದೆ. ವಿಮಾನ ಕೊಂಚ ಅಲುಗಾಡುವ ಅನುಭವವಾಗುತ್ತದೆ ಆಗ ಪ್ರಯಾಣಿಕರು ಸೀಟಿನ ಕೈಗಳನ್ನು ಗಟ್ಟಿಯಾಗಿ ಹಿಡಿದು ತಮ್ಮನ್ನು ನಿಯಂತ್ರಿಸಿಕೊಳ್ಳಲು ಸಾಧ್ಯ.
ತೀವ್ರ ಪ್ರಕ್ಷುಬ್ಧತೆ: ಈ ವೇಳೆ ವಿಮಾನಗಳು 30 ಮೀಟರ್‌ವರೆಗೆ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತವೆ. ಸೀಟ್‌ ಬೆಲ್ಟ್‌ ಧರಿಸದಿದ್ದರೆ, ಪ್ರಯಾಣಿಕರು ಮೇಲಕ್ಕೆ ಜಿಗಿದು ತಲೆಯನ್ನು ಚಾವಣಿಗೆ ಬಡಿಸಿಕೊಳ್ಳುತ್ತಾರೆ, ಒಂದು ವೇಳೆ ವಿಮಾನದ ಮೇಲ್ಚಾವಣಿ ಹಾರಿ ಹೋದ್ರೆ, ಗಾಳಿ ರಭಸಕ್ಕೆ ಸಿಕ್ಕಿ ಜೀವ ಬಿಡುವ ಸಾಧ್ಯತೆಗಳೂ ಇರುತ್ತವೆ. ಸಿಂಗಾಪುರ ಏರ್‌ಲೈಸ್ಸ್‌ನಲ್ಲಿ ಆಗಿದ್ದು ಇದೇ ತೀವ್ರ ಪ್ರಕ್ಷುಬ್ಧತೆ.

05

ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಆಗಿದ್ದೇನು?
ಇದೇ ಮೇ 21ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2.45ರ ವೇಳೆಗೆ ಸಿಂಗಾಪುರ್‌ ಏರ್‌ಲೈನ್ಸ್‌ನ ಬೋಯಿಂಗ್‌ 777-300ಇಆರ್‌ ವಿಮಾನವು ಲಂಡನ್‌ನಿಂದ ಹೊರಟಿತ್ತು. ಟೇಕ್‌ ಆಫ್‌ ಆಗಿ 10 ಗಂಟೆಗಳ ನಂತರ ಮ್ಯಾನ್ಮಾರ್‌ನ ವಾಯುಪ್ರದೇಶ ಪ್ರವೇಶಿಸಿತ್ತು. 37 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಪ್ರಕ್ಷುಬ್ಧತೆಗೆ (ಏರ್‌ ಟಬ್ರ್ಯೂಲೆಸ್ಸ್‌) ಸಿಲುಕಿದ ವಿಮಾನ ಇದ್ದಕ್ಕಿದ್ದಂತೆ ಅಲುಗಾಡತೊಡಗಿತು. ಪೈಲಟ್‌ನ ನಿಯಂತ್ರಣ ತಪ್ಪಿದ ವಿಮಾನ ಕೇವಲ 3 ನಿಮಿಷದೊಳಗೆ 37 ಸಾವಿರ ಅಡಿ ಎತ್ತರದಿಂದ 31 ಸಾವಿರ ಅಡಿಗಳಿಗೆ ಇಳಿದಿತ್ತು. ಆದರೆ, ಈ ಅವಧಿಯಲ್ಲಿ ಪ್ರಯಾಣಿಕರ ಜೀವವೇ ತಲ್ಲಣಿಸಿಹೋಗಿತ್ತು. ಸಾಮಾನ್ಯವಾಗಿ ಟೇಕ್‌ ಆಫ್‌ ಆದ 4-5 ನಿಮಿಷಗಳ ಬಳಿಕ ಸೀಟ್‌ ಬೆಲ್ಟ, ಹಾಕಿಕೊಳ್ಳುವುದು ಕಡ್ಡಾಯವಾಗಿರುವುದಿಲ್ಲ (ನಂತರ ಧರಿಸಬೇಕು). ಹೀಗಾಗಿ ಯಾವ ಪ್ರಯಾಣಿಕರೂ ಸೀಟ್‌ ಬೆಲ್ಟ್ ಧರಿಸಲಿಲ್ಲ, ಧರಿಸಲು ಸೂಚನೆಯನ್ನೂ ಗಗನಸಖಿಯರು ನೀಡಿರಲಿಲ್ಲ. ವಿಮಾನ ಜೋರು ತೋಯ್ದಾಡುತ್ತಿದ್ದಂತೆ ಆಸನಗಳಲ್ಲಿ ಆರಾಮವಾಗಿ ಕುಳಿತಿದ್ದ ಪ್ರಯಾಣಿಕರೆಲ್ಲ ಮೇಲಕ್ಕೆ ಹಾರಿದರು. ಕೆಲವರ ತಲೆ ಲಗ್ಗೇಜ್‌ ಕಂಟೈನರ್‌ಗೆ ಬಡಿಯಿತು, ಹಲವರು ಗಾಯಗೊಂಡರು. ಒಬ್ಬ ಪ್ರಯಾಣಿಕರು ಜೀವವನ್ನೇ ಬಿಟ್ಟರು. ಪರಿಸ್ಥಿತಿ ಕೈಮೀರಿದಾಗ ಪೈಲಟ್‌ ವಿಮಾನವನ್ನು ವಿಧಿಯಿಲ್ಲದೇ ಬ್ಯಾಂಕಾಕ್‌ನತ್ತ ತಿರುಗಿಸಿದ. ಸಿಂಗಾಪುರದಲ್ಲಿ ಇಳಿಯಬೇಕಿದ್ದ ವಿಮಾನವು ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಕಂಡಿತು. ವಿಮಾನದಲ್ಲಿ 3 ಭಾರತೀಯರು ಸೇರಿ 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು. ಪ್ರಯಾಣಿಕರಲ್ಲಿ ಗರಿಷ್ಠ 56 ಮಂದಿ ಆಸ್ಪ್ರೇಲಿಯನ್ನರೇ ಇದ್ದರು.

06

ಗಾಳಿಯ ಪ್ರಕ್ಷುಬ್ಧತೆಯಿಂದ ವಿಮಾನ ಬೀಳುತ್ತಾ?
ಆಧುನಿಕ ವಿಮಾನಗಳನ್ನು ಎಲ್ಲಾ ರೀತಿಯ ಪ್ರಕ್ಷುಬ್ಧತೆ ತಡೆದುಕೊಳ್ಳುವ ರೀತಿಯಲ್ಲಿ ತಯಾರಿಸಲಾಗುತ್ತಿದೆ. ಇಂಥ ತುರ್ತು ಪರಿಸ್ಥಿತಿ ಎದುರಿಸಲು ಪೈಲಟ್‌ಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಇದನ್ನೂ ಓದಿ: ತೀವ್ರ ಪ್ರಕ್ಷುಬ್ಧತೆಯಿಂದ ಕುಸಿದ ಸಿಂಗಾಪುರ್ ಏರ್‌ಲೈನ್ಸ್‌ನಲ್ಲಿದ್ದ 22 ಮಂದಿಯ ಬೆನ್ನುಮೂಳೆಗೆ ಗಾಯ!

07

ಹಿಂದೆಯೂ ಇಂತಹ ದುರಂತಗಳು ಸಂಭವಿಸಿವೆಯೇ?
* 1994 ರಲ್ಲಿ ಅಮೆರಿಕದ ಏರ್‌ಫ್ಲೈಟ್‌-1016 ಚಂಡಮಾರುತದಿಂದ ಉಂಟಾದ ಪ್ರಕ್ಷುಬ್ಧತೆಯಿಂದಾಗಿ ಲ್ಯಾಂಡಿಂಗ್‌ ಸಮಯದಲ್ಲಿ ಅಪಘಾತಕ್ಕೀಡಾಗಿತ್ತು. 37 ಪ್ರಯಾಣಿಕರು ಸಾವನ್ನಪ್ಪಿದ್ದರು.
* ಸೈಕ್ಲೋನ್‌ ಸೃಷ್ಟಿಸಿದ ಪ್ರಕ್ಷುಬ್ಧತೆಯಿಂದಾಗಿ 1999ರಲ್ಲಿ ಅಮೆರಿಕದ ಏರ್‌ಲೈನ್ಸ್‌ ಫ್ಲೈಟ್‌-1420 ವಿಮಾನವು ಲ್ಯಾಂಡಿಂಗ್‌ ಸಮಯದಲ್ಲಿ ಅಪಘಾತಕ್ಕೀಡಾಯಿತು. 145 ಪ್ರಯಾಣಿಕರ ಪೈಕಿ 11 ಮಂದಿ ಸಾವನ್ನಪ್ಪಿದ್ದರು.
* 2001ರಲ್ಲಿ ಅಮೆರಿಕದ ಏರ್‌ಲೈನ್ಸ್‌ ಫ್ಲೈಟ್‌- 587 ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಪ್ರಕ್ಷುಬ್ಧತೆಗೆ ಗುರಿಯಾಯಿತು. ವಿಮಾನದಲ್ಲಿದ್ದ ಎಲ್ಲಾ 260 ಪ್ರಯಾಣಿಕರೂ ಸಾವನ್ನಪ್ಪಿದರು.

Share This Article