ಸಿಂಗಾಪುರ: ಶ್ರೀಲಂಕಾವನ್ನು ಆರ್ಥಿಕವಾಗಿ ಮುಳುಗಿಸಿ ಜನರ ಆಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಸಿಂಗಾಪುರಕ್ಕೆ ಓಡಿ ಹೋದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆಗೆ ಸಿಂಗಾಪುರ ಆಡಳಿತ ಬಿಗ್ ಶಾಕ್ ನೀಡಿದೆ.
ಸಿಂಗಾಪುರ ಬಿಟ್ಟು ತೆರಳುವಂತೆ ಗೊಟಬಯಗೆ ಸೂಚಿಸಿದೆ. `ನೀವು ಪ್ರವಾಸಿ ವೀಸಾ ಮೇಲೆ ಬಂದಿದ್ದೀರಿ. ಅದನ್ನು ವಿಸ್ತರಿಸಲು ನಾವು ಸಿದ್ಧರಿಲ್ಲ. ನೀವಿನ್ನು ನಮ್ಮ ದೇಶದಿಂದ ಹೊರಡಬಹುದು’ ಎಂದು ಗೊಟಬಯಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ
Advertisement
Advertisement
ಈ ಮಧ್ಯೆ ಶ್ರೀಲಂಕಾದಲ್ಲಿ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಶಾಂತಿ-ಭದ್ರತೆಯ ಕಾರಣ ನೀಡಿ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಹೇರಿದ್ದಾರೆ.
Advertisement
ಅಂದಹಾಗೆ ರನಿಲ್ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಆಡಳಿತಾರೂಢ ಪಕ್ಷ ಪೊಡುಜನ ಪೆರಮುನ ಚಿಂತನೆ ನಡೆಸಿದೆ. ಇದು ರಾಜಪಕ್ಸೆ ಕುಟುಂಬಕ್ಕೆ ಸೇರಿದ ಪಕ್ಷ. ಹೀಗಾಗಿ ರನಿಲ್ ಗೆಲುವು ಖಚಿತ ಎನ್ನಲಾಗುತ್ತಿದೆ. ಇದನ್ನೂ ಓದಿ: ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ಸೂಚನೆ
Advertisement
ಇದೇ ನಡೆದಲ್ಲಿ ಶ್ರೀಲಂಕಾದಲ್ಲಿ ಮತ್ತೆ ಬರೋದು ರಾಜಪಕ್ಸೆ ಸರ್ಕಾರವೇ ಆಗಿರಲಿದೆ. ನಮಗೆ ನ್ಯಾಯ ಸಿಗಲ್ಲ. ದೇಶವೂ ಉದ್ಧಾರ ಆಗಲ್ಲ ಎಂದು ಹೋರಾಟಗಾರರು ನೋವು ವ್ಯಕ್ತಪಡಿಸ್ತಿದ್ದಾರೆ.