ನವದೆಹಲಿ: ಭಾರತ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿ ಪಿವಿ ಸಿಂಧು ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವ ಮಹಿಳಾ ಕ್ರೀಡಾಪಟುಗಳಲ್ಲಿ ಅತೀ ಹೆಚ್ಚು ಆದಾಯ ಪಡೆಯುವ ಆಟಗಾರ್ತಿಯರ ಪಟ್ಟಿಯಲ್ಲಿ 7ನೇ ಸ್ಥಾನಗಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಫೋರ್ಬ್ಸ್ ಪಟ್ಟಿಯ ಅನ್ವಯ 23 ವರ್ಷದ ಪಿವಿ ಸಿಂಧು ವಾರ್ಷಿಕ 8.5 ದಶಲಕ್ಷ ಡಾಲರ್ (ಸುಮಾರು 60 ಕೋಟಿ ರೂ.) ಆದಾಯ ಪಡೆಯುತ್ತಿದ್ದಾರೆ.
Advertisement
Advertisement
ಅಂದಹಾಗೇ ಸಿಂಧು ಒಬ್ಬರೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಬ್ಯಾಡ್ಮಿಟನ್ ಆಟಗಾರ್ತಿಯೂ ಆಗಿದ್ದಾರೆ. ಉಳಿದಂತೆ 8 ಟೆನ್ನಿಸ್ ಸ್ಟಾರ್ ಆಟಗಾರ್ತಿಯರು ಪಟ್ಟಿಯ ಟಾಪ್ 10 ನಲ್ಲಿ ಸ್ಥಾನ ಪಡೆದಿದ್ದಾರೆ. 23 ಬಾರಿ ಟೆನ್ನಿಸ್ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದಿರುವ ಸೆರೆನಾ ವಿಲಿಯಮ್ಸ್ 126 ದಶಲಕ್ಷ ಡಾಲರ್(ಅಂದಾಜು 126 ಕೋಟಿ ರೂ.) ವಾರ್ಷಿಕ ಆದಾಯ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
Advertisement
2016 ರಲ್ಲಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ತಂದಿದ್ದ ಸಿಂಧು ಸಿಂಧು ಬ್ರಿಡ್ಜ್ ಸ್ಟೋನ್, ಗೇಟರೇಡ್, ನೋಕಿಯಾ, ಪ್ಯಾನಾಸಾನಿಕ್, ರೆಕಿಟ್ ಬೆಂಕಿಸರ್ ಸೇರಿದಂತೆ ವಿವಿಧ ಕಂಪೆನಿಗಳ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
Advertisement
ಇದುವರೆಗೂ ಸಿಂಧು ರಿಯೋ ಒಲಿಂಪಿಕ್ಸ್ (ಬೆಳ್ಳಿ ಪದಕ), 2018 ಕಾಮನ್ ವೆಲ್ತ್ ಗೇಮ್ಸ್ (ಬೆಳ್ಳಿ ಪದಕ), 2017 ಮತ್ತು 2018 ರ ವರ್ಲ್ಡ್ ಬಿಎಂಎಫ್ ಚಾಂಪಿಯನ್ ಶಿಪ್ ಗೆದ್ದ ಹೆಗ್ಗಳಿಕೆ ಪಡೆದಿದ್ದಾರೆ. ವಿಶೇಷವೆಂದರೆ ಕಳೆದ ಬಾರಿ ಫೋರ್ಬ್ಸ್ ಪಟ್ಟಿ ಬಿಡುಗಡೆ ಮಾಡಿದ್ದ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಯಾವುದೇ ಮಹಿಳಾ ಆಟಗಾರ್ತಿ ಸ್ಥಾನ ಪಡೆದಿರಲಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
These are the highest-paid female athletes of 2018:https://t.co/1agQUd5hk1 pic.twitter.com/3zVYneadWO
— Forbes (@Forbes) August 22, 2018