ಬೆಂಗಳೂರು: ನಗರದ ಯಶವಂತಪುರ ಸಿಗ್ನಲ್ ಬಳಿ ನಟಿ ಸಿಂಧೂ ಮೆನನ್ ಅವರ ತಾಯಿ ಶ್ರೀದೇವಿ ಅವರಿದ್ದ ಆಟೋಗೆ ಹಿಂಬದಿಯಿಂದ ಬಂದ ಕ್ಯಾಬ್ ಡಿಕ್ಕಿ ಹೊಡೆದಿದೆ.
ಮಧ್ಯಾಹ್ನ ಶ್ರೀದೇವಿ ಅವರು ಮತ್ತಿಕೇರಿಯಿಂದ ಮಲ್ಲೇಶ್ವರಂ ನಲ್ಲಿರುವ ತಮ್ಮ ನಿವಾಸಕ್ಕೆ ಆಟೋದಲ್ಲಿ ಹೊರಟ್ಟಿದ್ದರು. ಈ ವೇಳೆ ಆಟೋ ಸಿಗ್ನಲ್ ನಲ್ಲಿ ನಿಂತಾಗ ಹಿಂದಿನಿಂದ ಕ್ಯಾಬ್ ಚಾಲಕ ನೇರವಾಗಿ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಆಟೋದಲ್ಲಿದ್ದ ಶ್ರೀದೇವಿ ಅವರ ಎದೆಭಾಗಕ್ಕೆ ಗಾಯವಾಗಿದೆ.
Advertisement
ಆಟೋದಲ್ಲಿದ್ದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸದೇ ಚಾಲಕರಿಬ್ಬರು ಸುಮಾರು ಒಂದು ಗಂಟೆಗಳ ಕಾಲ ಜಗಳ ಮಾಡಿದ್ದಾರೆ. ಕೊನೆಗೆ ಶ್ರೀದೇವಿ ಅವರು ತಮ್ಮ ಪುತ್ರ ಮನೋಜ್ ಗೆ ಕರೆ ಮಾಡಿ ಅಪಘಾತದ ವಿಷಯ ತಿಳಿಸಿದ್ದಾರೆ. ಸ್ಥಳಾಕ್ಕಾಗಮಿಸಿದ ಮನೋಜ್ ತಾಯಿಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
Advertisement