ಸ್ಯಾಂಡಲ್‌ವುಡ್ ಬ್ಯೂಟಿ ಸಿಂಧು ಲೋಕನಾಥ್ ಪರಿಚಯ, ಡ್ರಾಮಾ, `ಲವ್ ಇನ್ ಮಂಡ್ಯ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಈಗ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಬೈಕ್‌ನಲ್ಲಿ ಒಬ್ಬರೇ ಟ್ರಾವೆಲ್ ಮಾಡುತ್ತಾ ಹೊಸ ಜಾಗಗಳಿಗೆ ಭೇಟಿ ಕೊಡ್ತಿದ್ದಾರೆ. ಈ ಫೋಟೋಗಳು ಸದ್ಯ ಸಖತ್ ವೈರಲ್ ಆಗುತ್ತಿದೆ.
View this post on Instagram
ಚಂದನವನದ `ಡ್ರಾಮಾ’ ಚೆಲುವೆ ಸಿಂಧು ಲೋಕನಾಥ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಶೂಟಿಂಗ್ ಮಧ್ಯೆ ಹೊಸ ಜಾಗಗಳಿಗೆ ಆಗಾಗ ಭೇಟಿ ಕೊಡ್ತಿರತ್ತಾರೆ. ಟ್ರಾವೆಲಿಂಗ್‌ನ ಅತೀ ಹೆಚ್ಚು ಇಷ್ಟ ಪಡುವ ನಟಿ ಸಿಂಧು ಇದೀಗ ಸಿಕ್ಕಿಂಗೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿಂದ ಸಿಕ್ಕಂಗೆ ಒಬ್ಬರೇ ಜರ್ನಿ ಮಾಡಿ ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಿಂಧು ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ
View this post on Instagram
ಇನ್ನು ಸಿಂಧು ಲೋಕನಾಥ್ ಕಡೆಯದಾಗಿ ಕಾಣಿಸಿಕೊಂಡ ಸಿನಿಮಾ, ಕಾಣದಂತೆ ಮಾಯವಾದನು, ಕೃಷ್ಣ ಟಾಕೀಸ್ ಚಿತ್ರದಲ್ಲಿ ನಟಿಸಿದ್ದರು. ಇದೀಗ `60 ಡೇಸ್’ ಎಂಬ ಸಿನಿಮಾಗೆ ಬಣ್ಣ ಹಚ್ಚಿದ್ದು, ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ಸಿಗಲಿದೆ.