ರಾಯಚೂರು: 2020ರಲ್ಲಿ ರಾಯಚೂರು (Raichur) ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದ ಐವರ ಕೊಲೆ ಪ್ರಕರಣದ (Sindhanur Murder Case) ತೀರ್ಪು ಇಂದು ಪ್ರಕಟವಾಗಿದೆ.
ಐವರ ಕೊಲೆ ಹಾಗೂ ಇಬ್ಬರ ಕೊಲೆ ಯತ್ನ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ, 9 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಸಿಂಧನೂರಿನ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ ಕೋರ್ಟ್ (Sindhanur District and Sessions Court) ಪೀಠ ತೀರ್ಪು ನೀಡಿದೆ. ಇದನ್ನೂ ಓದಿ: ಚಲಿಸುತ್ತಿದ್ದಾಗಲೇ ಎರಡು ತುಂಡಾದ ಫಲಕ್‌ನುಮಾ ಎಕ್ಸ್‌ಪ್ರೆಸ್ ರೈಲು – ನೂರಾರು ಪ್ರಯಾಣಿಕರು ಗ್ರೇಟ್ ಎಸ್ಕೇಪ್
ಪ್ರೇಮ ಪ್ರಕರಣ (Love Case) ಹಿನ್ನೆಲೆ ಮದುವೆಗೆ ಒಪ್ಪಿಗೆಯಿಲ್ಲದ ಹಿನ್ನೆಲೆ ನಡೆದಿದ್ದ ಗಲಾಟೆ ಕೊಲೆಗಳಲ್ಲಿ ಅಂತ್ಯವಾಗಿತ್ತು. 1ನೇ ಆರೋಪಿ ಸಣ್ಣಫಕೀರಪ್ಪನ ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಹುಡುಗನ ಮನೆಯವರ ಮೇಲೆ ಹಲ್ಲೆ ನಡೆಸಿ ನಡುರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಸಿಂಧನೂರು ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 12 ಜನ ಆರೋಪಿಗಳಿಗೆ ಈಗ ಶಿಕ್ಷೆ ಪ್ರಕಟವಾಗಿದೆ. ಇದನ್ನೂ ಓದಿ: ಕೊನೆಯುಸಿರು ಇರೋವರೆಗೂ ಸುದೀಪ್ ಸರ್ ಋಣ ಮರೆಯೋದಿಲ್ಲ: ಲಾಂಗ್ ವಿವಾದದ ಬಗ್ಗೆ ವಿನಯ್ ಮಾತು
ಸುಕಾಲಪೇಟೆಯ ಈರಪ್ಪ, ಆತನ ಪತ್ನಿ ಸುಮಿತ್ರಮ್ಮ, ಮಕ್ಕಳಾದ ನಾಗರಾಜ್, ಶ್ರೀದೇವಿ, ಹನುಮೇಶ್ ಕೊಲೆಯಾದವರು. ಸೊಸೆ ರೇವತಿ, ಮಗಳು ತಾಯಮ್ಮ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮೊದಲ ಮೂವರು ಆರೋಪಿಗಳಾದ ಸಣ್ಣಫಕೀರಪ್ಪ, ಅಮ್ಮಣ್ಣ, ಸೋಮಶೇಖರ್‌ಗೆ ಮರಣದಂಡನೆ ಹಾಗೂ ತಲಾ 47 ಸಾವಿರ ರೂ. ದಂಡ, 4 ರಿಂದ 12ನೇ ಆರೋಪಿತರಿಗೆ ಜೀವಾವಧಿ ಹಾಗೂ ತಲಾ 97,500 ರೂ. ದಂಡ ವಿಧಿಸಿ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ ಕೋರ್ಟ್ ಸಿಂಧನೂರು ಪೀಠ ತೀರ್ಪು ನೀಡಿದೆ. ಇದನ್ನೂ ಓದಿ: Raichur | ಗ್ರಾನೈಟ್ ಕ್ವಾರಿಯಲ್ಲಿ ಸಿಡಿಮದ್ದು ಸ್ಫೋಟ – ಓರ್ವ ಸಾವು, ಇನ್ನೋರ್ವ ಗಂಭೀರ