ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಗೆ ಇನ್ನು 9 ದಿನ ಬಾಕಿ ಇರುವಂತೆಯೇ ಆರೋಪ-ಪ್ರತ್ಯಾರೋಪ ಜೋರಾಗಿದೆ. ನಿನ್ನೆ-ಮೊನ್ನೆಯೆಲ್ಲಾ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದ ಜನನಾಯಕರು ಇವತ್ತು ಇನ್ನೊಂದು ಮಜಲು ತಲುಪಿದ್ದಾರೆ.
Advertisement
ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ಸಿಗರು ಹಣ ಹಂಚಿಕೆಯ ಆರೋಪ ಹೊರಿಸಿದ್ದಾರೆ. ಸಿಂದಗಿ ಹಾಗೂ ಹಾಗನಲ್‍ನಲ್ಲಿ ಸೋಲೋ ಮುನ್ಸೂಚನೆ ಸಿಕ್ತಿದ್ದಂತೆಯೇ ಸಿಎಂ ದುಡ್ಡು ಹಂಚೋಕೆ ಹೇಳಿದ್ದಾರೆ. ಗೋಣಿಚೀಲದಲ್ಲಿ ತಂದು ಪ್ರತಿ ವೋಟ್‍ಗೆ 2 ಸಾವಿರ ಹಂಚ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮೇಲಿನ ಐಟಿ ದಾಳಿಗೆ ಬಿಗ್ ಟ್ವಿಸ್ಟ್ – 750 ಕೋಟಿಯಲ್ಲಿ 600 ಕೋಟಿ ಬೇನಾಮಿ
Advertisement
Advertisement
ಕೈ ನಾಯಕರ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಯಾರು ತಾನು ಕಳ್ಳನೋ; ಅವನು ಬೇರೆಯವರನ್ನು ನಂಬಲ್ಲ ಅಂತ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಇನ್ನೊಂದೆಡೆ, ಸಚಿವ ಮುನಿರತ್ನ, ದುಡ್ಡು ಎಲ್ಲಿಂದ ಬಂತು ಅನ್ನೋದ್ರ ಮಾಹಿತಿ ಕೊಡ್ಲಿ ಅಂತಾ ಸವಾಲಾಕಿದ್ರು. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ
Advertisement
ಅಷ್ಟೇ ಅಲ್ಲದೆ ದುಡ್ಡು ಹಂಚೋದನ್ನ ಚುನಾವಣೆ ಆಯೋಗದ ಗಮನಕ್ಕೆ ಯಾಕೆ ತಂದಿಲ್ಲ..? ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಹಣ ಪಡೆಯಿರಿ ಅನ್ನೋದು ಎಷ್ಟು ಸರಿ ಅಂತಾ ಕಿಡಿಕಾರಿದ್ರು.