ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ.
Advertisement
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದ್ದು, ಮಧ್ಯಾಹ್ನದ ಸಮಯದಲ್ಲಿ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಹಾನಗಲ್ ಕ್ಷೇತ್ರದ ಮತ ಎಣಿಕೆಗಾಗಿ ಹಾವೇರಿ ಸರ್ಕಾರಿ ಎಂಜಿನಿರಿಂಗ್ ಕಾಲೇಜ್ ಮತ್ತು ಸಿಂದಗಿ ಕ್ಷೇತ್ರದ ಮತ ಎಣಿಕೆಗಾಗಿ ವಿಜಯಪುರದ ಸೈನಿಕ ಶಾಲೆಯಲ್ಲಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಎಲ್ಲರ ಚಿತ್ತ ಉಪಚುನಾವಣೆ ಫಲಿತಾಂಶದತ್ತ – ಮತ ಎಣಿಕೆಗೆ ಸರ್ವ ಸಿದ್ಧತೆ
Advertisement
Advertisement
ಅಕ್ಟೋಬರ್ 30 ರಂದು ನಡೆದ ಉಪ ಚುನಾವಣೆಯಲ್ಲಿ ಹಾನಗಲ್‍ನಲ್ಲಿ ಶೇ. 83ರಷ್ಟು, ಸಿಂದಗಿಯಲ್ಲಿ ಶೇ.69.41ರಷ್ಟು ಮತದಾನ ನಡೆದಿತ್ತು. ಹಾನಗಲ್‍ನಲ್ಲಿ ಬಿಜೆಪಿಯ ಶಿವರಾಜ್ ಸಜ್ಜನರ್ ಮತ್ತು ಕಾಂಗ್ರೆಸ್‍ನ ಶ್ರೀನಿವಾಸ ಮಾನೆ ನಡುವೆ ನೆಕ್ ಟು ನೆಕ್ ಫೈಟ್ ಇದ್ರೆ, ಸಿಂದಗಿಯಲ್ಲಿ ಕಾಂಗ್ರೆಸ್‍ನ ಅಶೋಕ್ ಮನಗೂಳಿ, ಬಿಜೆಪಿಯ ರಮೇಶ್ ಭೂಸನೂರ, ಜೆಡಿಎಸ್ ನ ನಾಜಿಯಾ ನಡುವೆ ತ್ರಿಕೋನ ಪೈಪೋಟಿ ಕಂಡುಬಂದಿತ್ತು. ಮೂರು ಪಕ್ಷಗಳು ನಮ್ಮದೇ ಗೆಲುವು ಎನ್ನುತ್ತಿವೆ. ಆದರೆ ಮತಪ್ರಭುಗಳ ನಿರ್ಣಯ ಏನು ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.