ಮಡಿಕೇರಿ: ಕೇಂದ್ರದಲ್ಲಿ ಬಿಜೆಪಿ (BJP) ಇರುವುದರಿಂದ ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.
ಕೊಡಗಿನ ಕುಶಾಲನಗರದಲ್ಲಿ ಮಾತಾನಾಡುತ್ತಾ ಸಂಸತ್‍ನಲ್ಲಿ ಸ್ಮೋಕ್ ಬಾಂಬ್ (Security breach in Lok Sabha) ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡುವ ತಂತ್ರ ಎಂಬ ಲೇಹರ್ ಸಿಂಗ್ (Lehar Singh) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಲೇಹರ್ ಸಿಂಗ್ ಅವರು ಸ್ವಲ್ಪ ಜವಬ್ದಾರಿಯುತವಾಗಿ ಮಾತನಾಡಬೇಕು. ರಾಜ್ಯಸಭೆಗೆ ಕಳುಹಿಸಿರುವುದು ಹುಚ್ಚು ಹುಚ್ಚಾಗಿ ಮಾಡನಾಡಲು ಅಲ್ಲ. ಪ್ರತಾಪ್ ಸಿಂಹ ಜಾಗದಲ್ಲಿ ಕಾಂಗ್ರೆಸ್ ಸಂಸದ ಇದ್ದಿದ್ದರೆ ಉಚ್ಛಾಟಿಸುತ್ತಿದ್ದರು ಎಂದು ಅರೋಗ್ಯ ಸಚಿವರು ಕಿಡಿಕಾರಿದರು.
Advertisement
Advertisement
ಸಂಸತ್‍ನಲ್ಲಿ ಸ್ಮೋಕ್ ಬಾಂಬ್‍ನ (Smoke Bomb in Parliament) ಬಗ್ಗೆ ತನಿಖೆಗೆ ಒಳಪಡಿಸುತ್ತಿದ್ದರು. ದೇಶಾದ್ಯಂತ ಪ್ರತಿಭಟನೆ ಮಾಡಿಬಿಡುತ್ತಿದ್ದರು. ಆದರೆ ಇದೀಗ ಬಿಜೆಪಿಯವರೇ ಇರುವುದರಿಂದ ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ಪ್ರತಾಪ್ ಸಿಂಹ ಅವರ ರಕ್ಷಣೆ ಮಾಡಲು ಬಿಜೆಪಿ ನಿಂತುಕೊಂಡಿದೆ. ಕಾಂಗ್ರೆಸ್‍ನವರ ಶಿಫಾರಸ್ಸಿನಲ್ಲಿ ಹೋಗ್ತಿದ್ರೆ ಪ್ರತಾಪ್ ಸಿಂಹ ಹೇಗೆ ಮಾತಾಡ್ತಿದ್ರು..?. ಅವರು ಹೇಗೆ ಮಾತಾಡ್ತಿದ್ರೋ ಅದನ್ನೇ ಅವರ ಮೇಲೆ ನಾವು ಮಾತಾಡುತ್ತಿದ್ದೀವಿ. ಇದು ಗಂಭೀರ ಪ್ರಕರಣ ಪ್ರತಾಪ್ ಸಿಂಹ ಮೇಲೆ ಕ್ರಮ ತೆಗೆದುಕೊಳ್ಳಬೇಕು ಲೇಹರ್ ಸಿಂಗ್, ಸಿಟಿ ರವಿ ಇಂತಹ ಹೇಳಿಕೆ ಕೊಡ್ಕೊಂಡೇ ರಾಜಕಾರಣ ಮಾಡೋದು ಎಂದು ದಿನೇಶ್ ಗುಂಡೂರಾವ್ (Dinesh GunduRao) ವಾಗ್ದಾಳಿ ನಡೆಸಿದರು.
Advertisement
Advertisement
ಪ್ರಧಾನಿಯೇ ಗಂಭೀರ ಎಂದ ಮೇಲೆ ಯಾಕೆ ಕ್ರಮ ತೆಗೆದುಕೊಳ್ತಿಲ್ಲ? ಈ ವಿಚಾರದ ಬಗ್ಗೆ ಹೋರಾಟ ಮಾಡಿದ್ರೆ ಕಾಂಗ್ರೆಸ್ (Congress) ಎಂಪಿಗಳನ್ನು ಸಸ್ಪೆಂಡ್ ಮಾಡ್ತಾರೆ. ಆದರೆ ಅದಕ್ಕೆ ಕಾರಣಕರ್ತರಾದವರನ್ನು ರಕ್ಷಣೆ ಮಾಡುವ ಕೆಲಸ ಮಾಡ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು, ಲೆಹರ್ ಸಿಂಗ್ ಬರದ ಬಗ್ಗೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ಮಾತಾಡಲ್ಲ. ಅವರ ಮಾತುಗಳನ್ನು ಸಾಮಾನ್ಯ ಜ್ಞಾನ ಇರುವ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಕ್ರೋಶ ಹೋರಹಾಕಿದ್ರು.