ಬೆಂಗಳೂರು: ಇದು ಸರ್ಕಾರದ ಸಾಧನೆಯ ತೀರ್ಪಲ್ಲ. ಈ ಚುನಾವಣೆಯಲ್ಲಿ ಹಲವಾರು ರೀತಿಯ ಅಕ್ರಮ ನಡೆದಿದೆ. ಇದು ಮುಂದಿನ ಚುನಾವಣೆಯಲ್ಲಿ ನಡೆಯೋದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರೋ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಹೆಚ್‍ಡಿಕೆ, ಈ ಒಂದು ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿಯಲ್ಲ. ಸಿಎಂ ಸಿದ್ದರಾಮಯ್ಯ ಈಗ ಭ್ರಮಾಲೋಕದಲ್ಲಿ ತಿರುಗುತ್ತಿದ್ದಾರೆ ಅಂದ್ರು.
Advertisement
ಇಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನಿಲ್ಲುಸುತ್ತೇವೆ. ಇಲ್ಲಿ ನಾವು ಯಾರಿಗೂ ಬೆಂಬಲ ನೀಡಿಲ್ಲ. ನಾವು ಅಭ್ಯರ್ಥಿಗಳನ್ನು ಹಾಕದೇ ಇರುವುದು ಕಾಂಗ್ರೆಸ್‍ಗೆ ವರವಾಗಿದೆ ಅಂತ ಹೇಳಿದ್ರು.
Advertisement
ಇದೇ ವೇಳೆ ವಿದ್ಯುತ್ ಬೆಲೆ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಹೆಚ್‍ಡಿಕೆ, 4 ವರ್ಷದಿಂದ ಒಂದೇ ಒಂದು ಯುನಿಟ್ ಉತ್ಪಾದನೆ ಆಗಿಲ್ಲ. ಆದ್ರೆ ಇವರು ವಿದ್ಯುತ್ ಬೆಲೆ ಹೆಚ್ಚಳ ಮಾಡ್ತಾಯಿದ್ದಾರೆ. ವಿದ್ಯುತ್ ಖರೀದಿಯಲ್ಲಿ ಡಿ.ಕೆ.ಶಿವುಕುಮಾರ್ ಕಮಿಷನ್ ಪಡೆಯುತ್ತಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ರು.
Advertisement
ಎಸ್‍ಎಂಕೆ, ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದ್ರಿಂದ ಕಾಂಗ್ರೆಸ್‍ಗೆ ಗೆಲುವು: ದಿನೇಶ್ ಗುಂಡೂರಾವ್ https://t.co/Q6BWFFJEOA @dineshgrao #Gundlupet #Najanagud pic.twitter.com/IG2NjsgY5w
— PublicTV (@publictvnews) April 13, 2017
Advertisement
ಉಪ ಚುನಾವಣೆಯಲ್ಲಿ ಗೆದ್ದ ತಕ್ಷಣ ರಾಜ್ಯದ ಜನ ಕಾಂಗ್ರೆಸ್ ಪರ ಇದ್ದಾರೆ ಅಂತೇನಲ್ಲ: ಬಿಎಸ್‍ವೈhttps://t.co/xARxMbokWO#Bengaluru @BSYBJP @KPCCofficial pic.twitter.com/gGYYKkv1Ld
— PublicTV (@publictvnews) April 13, 2017