ಬೆಂಗಳೂರು: ಬಿ.ಎಸ್ ಯಡಿಯೂರಪ್ಪ (BS Yediyurappa) ರನ್ನು ಸೈಡ್ ಲೈನ್ ಮಾಡಿದ್ರು. ಕಣ್ಣೀರು ಹಾಕಿ ರಾಜೀನಾಮೆ ಕೊಟ್ಟು ಬಂದಾಗಿನಿಂದ ಈ ಇಂಪ್ಯಾಕ್ಟ್ ಆಯ್ತು. ಪಾರ್ಟಿ ಸೂಚನೆ ಮೇರೆಗೆ ಯಡಿಯೂರಪ್ಪ ನನ್ನ ವಿರುದ್ಧ ಮಾತಾಡಿದ್ದಾರೆ. ಯಾರಿಗೆ ಲೀಡರ್ ಶಿಪ್ ಕೊಟ್ಟಿದ್ದೇವೆ ಅನ್ನೋದು ಮುಖ್ಯ. ಯಡಿಯೂರಪ್ಪರನ್ನ ಎರಡು ವರ್ಷ ಇಳಿಸಬಾರದಿತ್ತು. ಯಾಕೆ ಯಡಿಯೂರಪ್ಪ ಅವರನ್ನು ಇಳಿಸಿದ್ರು ಹೈಕಮಾಂಡ್ ಹೇಳಲಿ. ಇದನ್ನ ನಾನು ಕೇಂದ್ರ ನಾಯಕರಿಗೂ ಹೇಳಿದ್ದೆ ಎಂದು ಜಗದೀಶ್ ಶೆಟ್ಟರ್ (Jagadeesh Shettar) ಹೇಳಿದ್ರು.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಕಾಂಗ್ರೆಸ್ (Congress) ಗೆ ಬಂದ ಮೇಲೆ ದೊಡ್ಡ ಇಂಪ್ಯಾಕ್ಟ್ ಆಗಿದೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಬ್ಯಾಂಕ್ ಕಾಂಗ್ರೆಸ್ ಗೆ ಬೆಂಬಲ ಕೊಟ್ಟಿದೆ. ರಿಸಲ್ಟ್ ನೋಡಿದ್ರೆ ನಿಮಗೆ ಅದು ಗೊತ್ತಾಗುತ್ತೆ. ಬಿಜೆಪಿಯಲ್ಲಿನ ಬೆಳವಣಿಗೆಗೆ ಬಿಜೆಪಿಗೆ ಹೀಗೆ ಆಗಿದೆ. ಒಂದು ಶಾಸಕ ಸ್ಥಾನಕ್ಕೆ ನನಗೆ ಮಾಡಿದ್ದು ಸರಿಯಲ್ಲ. ಒಬ್ಬರ ಮಾತು ಕೇಳಿ ಲಿಂಗಾಯತರಿಗೆ ಕಿರಿಕಿರಿ ಕೊಟ್ಟರು. ಇದನ್ನ ಲಿಂಗಾಯತರು ಸಹಿಸಲಿಲ್ಲ ಎಂದು ಎಚ್ಚರಿಕೆ ನೀಡಿದರು.
Advertisement
ಬಣಕಾರ್, ತಮ್ಮಯ್ಯ, ಸವದಿ, ಓಖ ಸಂತೋಷ್ ಹೀಗೆ ಅನೇಕ ಲಿಂಗಾಯತರು ಬಿಟ್ಟರು. ಯಾರು ಸಮಾಧಾನ ಮಾಡುವ ಕೆಲಸ ಯಾರಿಗೂ ಮಾಡಿಲ್ಲ. ಹೀಗಾಗಿ ಲಿಂಗಾಯತ ನಾಯಕರು ಕಾಂಗ್ರೆಸ್ ಗೆ ಸೆರಿದ್ರು. ನಾನು ಮಾಜಿ ಸಿಎಂ ನನಗೂ ಅಪಮಾನ ಮಾಡಿದ್ರು. ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿತ್ತು. ಬಿಜೆಪಿ (BJP) ಮೇಲೆ ಲಿಂಗಾಯತರಿಗೆ ಇದ್ದ ನಂಬಿಕೆ ಹೋಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೇವೇಗೌಡ್ರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ, ಮತ್ತೆ ಪಾರ್ಲಿಮೆಂಟ್‍ಗೆ ಕರೆದೊಯ್ತೇವೆ: ರೇವಣ್ಣ
Advertisement
Advertisement
ಯಡಿಯೂರಪ್ಪರನ್ನ ಯಾಕೆ ಎರಡು ವರ್ಷ ಇಳಿಸಿದ್ರು ಹೈಕಮಾಂಡ್ ಹೇಳಲಿ. ಅಲ್ಲಿಂದ ಪ್ರಾರಂಭ ಆಗಿ ಈ ರಿಸಲ್ಟ್ ಬಂದಿದೆ. ಯಡಿಯೂರಪ್ಪ ಕಣ್ಣೀರು ಹಾಕಿದ್ರು. ನನಗೆ ಹೀಗೆ ಮಾಡಿದ್ರು. ಇದೆಲ್ಲ ಒಂದೊಂದು ಸೇರಿ ಹೀಗೆ ಆಯ್ತು. ಸಂತೋಷ್ ಅಂತಹವರು ಪಕ್ಷವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ನೋಡಿದರು. ನನ್ನನ್ನ ಟಾರ್ಗೆಟ್ ಮಾಡಿದ್ರು. ಯಾಕೆ ನನ್ನ ಒಬ್ಬರನ್ನ ಟಾರ್ಗೆಟ್ ಮಾಡಿದ್ರು. ನಮ್ಮ ಕಡೆ ಬಂದವರು ಜಗದೀಶ್ ಶೆಟ್ಟರ್ ಸೋಲಿಸಿ ಅಂತ ಬಿಜೆಪಿ ಅವರು ಪ್ರಚಾರ ಮಾಡಿದ್ರು. ನನ್ನನ್ನ ಟಾರ್ಗೆಟ್ ಮಾಡಿ ಬಿಜೆಪಿಯನ್ನ ಸೋಲಿಸಿದ್ರು. ಸಂತೋಷ ವಿರುದ್ದ ಮತ್ತೆ ಆಕ್ರೋಶ ಹೊರಹಾಕಿದರು.
ಸಚಿವ ಸ್ಥಾನ ನೀಡೋ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಿಮ್ಮಿಂದ ಕಾಂಗ್ರೆಸ್ ಗೆ ಅನುಕೂಲ ಆಗಿದೆ. ಖರ್ಗೆ ಕೂಡಾ ಮಾತಾಡಿದ್ದಾರೆ. ಗೌರವವಾಗಿ ನಡೆಸಿಕೊಳ್ತೀವಿ ಅಂತ ಹೇಳಿದ್ದಾರೆ. ಪಕ್ಷ ನಿಮ್ಮ ಜೊತೆ ಇರುತ್ತೆ ಅಂತ ಹೇಳಿದೆ. ಈಗ ಸಿಎಂ ವಿಚಾರ ನಡೆಯುತ್ತಿದೆ. ಅದು ಮುಗಿದ ಮೇಲೆ ನೋಡೊಣ. ಸಚಿವ ಸ್ಥಾನದ ಬಗ್ಗೆ ಇನ್ನು ಯಾರು ಮಾತಾಡೊಲ್ಲ. ಒಂದು ಸಾರಿ ಸ್ವಾಭಿಮಾನಕ್ಕೆ ಧಕ್ಕೆ ಆಗಿ ಬಿಜೆಪಿ ಬಿಟ್ಟಿದ್ದೇನೆ. ಮತ್ತೆ ಬಿಜೆಪಿಗೆ ವಾಪಸ್ ಹೋಗಲ್ಲ. ಕಾಂಗ್ರೆಸ್ ನಲ್ಲೆ ಇರುತ್ತೇನೆ. ಬಿಜೆಪಿಯಲ್ಲಿ ನನಗೆ ಗೌರವ ಕೊಟ್ಟಿಲ್ಲ. ಹೀಗಾಗಿ ಬಿಟ್ಟಿ. ಮತ್ತೆ ಬಿಜೆಪಿಗೆ ಹೋಗೊಲ್ಲ. ಕಾಂಗ್ರೆಸ್ ನಲ್ಲೆ ಇರುತ್ತೇನೆ ಎಂದರು.