ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮೂಲದ ಸೋಷಿಯಲ್ ಮೀಡಿಯಾ ಸ್ಟಾರ್ (Social Media Star) ಹಾಗೂ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ (25) ಗುರುಗ್ರಾಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಸುಮಾರು 7 ಲಕ್ಷ ಅಭಿಮಾನಿಗಳನ್ನು ಒಳಗೊಂಡಿದ್ದ ಸಿಮ್ರಾನ್, ಇದೇ ತಿಂಗಳ ಡಿಸೆಂಬರ್ 13ರಂದು ಕೊನೆಯದ್ದಾಗಿ ರೀಲ್ಸ್‌ವೊಂದನ್ನ ಪೋಸ್ಟ್ ಮಾಡಿದ್ದರು. ಬಳಿಕ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚಾಕು ಇರಿದು ಗೆಳತಿಯ ಹತ್ಯೆ – ಕೊಲೆ ಬಳಿಕ ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ
Advertisement
Advertisement
ಮಾಹಿತಿ ಪ್ರಕಾರ, ಸಿಮ್ರಾನ್ ಗುರುಗ್ರಾಮ್ ಸೆಕ್ಟರ್-47ರಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಆಕೆಯ ಸ್ನೇಹಿತನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಆಕೆಯ ಮೃತದೇಹವನ್ನ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಇನ್ಮುಂದೆ 5, 8ನೇ ತರಗತಿ ವಿದ್ಯಾರ್ಥಿಗಳು ಫೇಲ್ ಆಗ್ತಾರಾ?; ಏನಿದು ‘ನೋ-ಡಿಟೆನ್ಷನ್ ಪಾಲಿಸಿ’?
Advertisement
Advertisement
ಜಮ್ಮು ಪ್ರದೇಶದ ನಿವಾಸಿಯಾಗಿರುವ ಆಕೆಯನ್ನ ಅವರ ಅಭಿಮಾನಿಗಳು ʻಜಮ್ಮು ಕಿ ಧಡ್ಕನ್ (ಜಮ್ಮುವಿನ ಹೃದಯ ಬಡಿತ)ʼ ಎಂದು ಕರೆಯುತ್ತಿದ್ದರು. ಇದನ್ನೂ ಓದಿ: ಅತ್ಯಾಚಾರಕ್ಕೆ ವಿರೋಧಿಸಿದ ಬಾಲಕಿಯ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ – ಕಾಮುಕನಿಗೆ ಗುಂಡೇಟು ನೀಡಿ ಬಂಧಿಸಿದ ಪೊಲೀಸರು