ಮಾಂಸ ಅಥವಾ ಯಾವುದೇ ರೀತಿಯ ಮುಖ್ಯ ತರಕಾರಿಗಳನ್ನು ಬಳಸದೇ ಮಾಡುವ ಬಿರಿಯಾನಿಗೆ ಕುಶ್ಕಾ ಎನ್ನಲಾಗುತ್ತದೆ. ಎಂದಾದರೂ ಬಿರಿಯಾನಿ ತಿನ್ನಬೇಕು ಎನಿಸಿದಾಗಿ ಸರಳವಾಗಿ ಮಾಡಬಹುದು ಈ ಕುಶ್ಕಾ ರೈಸ್ (Kushka Rice). ಕೇವಲ ಮಸಾಲೆ ಪದಾರ್ಥಗಳನ್ನು ಬಳಸಿ ಮಾಡುವ ರುಚಿಕರವಾದ ಕುಶ್ಕಾವನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ತುಪ್ಪ – 2 ಟೀಸ್ಪೂನ್
ಕರಿಬೇವಿನ ಎಲೆ – ಸ್ವಲ್ಪ
ದಾಲ್ಚಿನ್ನಿ – 1 ಇಂಚು
ಏಲಕ್ಕಿ – 3
ಸ್ಟಾರ್ ಅನಿಸ್ – 1
ಲವಂಗ – 5
ಸೋಂಪು – ಅರ್ಧ ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
Advertisement
Advertisement
ಮೊಸರು – ಕಾಲು ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಸೀಳಿದ ಹಸಿರು ಮೆಣಸಿನಕಾಯಿ – 1
ಅರಿಶಿನ – ಕಾಲು ಟೀಸ್ಪೂನ್
ಸಣ್ಣಗೆ ಹೆಚ್ಚಿದ ಟೊಮೆಟೊ – 1
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಬಿರಿಯಾನಿ ಮಸಾಲಾ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಪುದಿನಾ – 2 ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಬಾಸ್ಮತಿ ರೈಸ್ – 1 ಕಪ್ (20 ನಿಮಿಷ ನೆನೆಸಿಡಿ)
ನೀರು – 2 ಕಪ್ ಇದನ್ನೂ ಓದಿ: ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ
Advertisement
ಮಾಡುವ ವಿಧಾನ:
* ಮೊದಲಿಗೆ ಪ್ರೆಷರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಕರಿಬೇವಿನ ಎಲೆ, ದಾಲ್ಚಿನ್ನಿ, ಸ್ಟಾರ್ ಅನಿಸ್, ಏಲಕ್ಕಿ, ಲವಂಗ, ಸೋಂಪು ಮತ್ತು ಜೀರಿಗೆ ಹಾಕಿ ಫ್ರೈ ಮಾಡಿ.
* ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿಯನ್ನು ಸೇರಿಸಿ, ಬಳಿಕ ಟೊಮೆಟೊ ಸೇರಿಸಿ ಅದು ಮೃದು ಆಗುವ ತನಕ ಕೈಯಾಡಿಸಿ.
* ಈಗ ಉರಿಯನ್ನು ಕಡಿಮೆ ಇಟ್ಟುಕೊಂಡು, ವಿಸ್ಕ್ ಮಾಡಿದ ಮೊಸರು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
* ಬಳಿಕ ಅರಿಶಿನ, ಕೆಂಪು ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಮತ್ತು ಉಪ್ಪು ಸೇರಿಸಿ, ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
* ಈಗ ಪುದಿನಾ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿ.
* 20 ನಿಮಿಷ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಬಸಿದು ಹಾಕಿ, ಒಂದು ನಿಮಿಷ ಹುರಿಯಿರಿ.
* ಈಗ 2 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಮಧ್ಯಮ ಉರಿಯನ್ನು ಇಟ್ಟುಕೊಂಡು, ಕುಕ್ಕರ್ ಮುಚ್ಚಳ ಮುಚ್ಚಿ, 2 ಸೀಟಿ ಬರುವವರೆಗೆ ಬೇಯಿಸಿ.
* ಇದೀಗ ರುಚಿಕರವಾದ ಕುಶ್ಕಾ ರೈಸ್ ತಯಾರಾಗಿದ್ದು, ರಾಯಿತದೊಂದಿಗೆ ಸವಿಯಿರಿ. ಇದನ್ನೂ ಓದಿ: ಸಖತ್ ಟೇಸ್ಟಿ ಆಗಿರುತ್ತೆ ಚಿಕನ್ ಸ್ಟೀಮ್ಡ್ ಮೊಮೊಸ್ – ಒಮ್ಮೆ ಮಾಡಿ ನೋಡಿ