ಸಾಂಬಾರ್ ಪಾಕವಿಧಾನಗಳು ದಕ್ಷಿಣ ಭಾರತೀಯರಿಗೆ ಪ್ರಧಾನ ಮತ್ತು ಹೆಚ್ಚು ಆದ್ಯತೆಯ ಪಾಕವಿಧಾನವಾಗಿದೆ. ಸಾಂಬಾರ್ ಅನ್ನ, ಇಡ್ಲಿ ಜೊತೆ ತಿನ್ನುವುದರಿಂದ ಸವಿಯಲು ಸಖತ್ ಟೇಸ್ಟಿಯಾಗಿರುತ್ತೆ. ಅದರಲ್ಲಿಯೂ ಅನ್ನಕ್ಕೆ ನುಗ್ಗೆಕಾಯಿ ಸಾಂಬಾರ್ ಸಖತ್ ಕಾಂಬಿನೇಷನ್. ನುಗ್ಗೆಕಾಯಿಯಲ್ಲಿ ಮಾಡುವ ಸಾಂಬಾರ್ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಈ ಸಾಂಬಾರ್ ಮಾಡುವ ವಿಧಾನ ತುಂಬಾ ಸುಲಭವಾಗಿದ್ದು, ರೆಸಿಪಿ ಇಲ್ಲಿದೆ.
Advertisement
ಬೇಕಾಗಿರುವ ಪದಾರ್ಥಗಳು
* ನುಗ್ಗೆಕಾಯಿ – 20 ತುಂಡುಗಳು
* ಸಾಂಬಾರ್ ಪೌಡರ್ – 2 ಟೀಸ್ಪೂನ್
* ಎಣ್ಣೆ – 3 ಟೀಸ್ಪೂನ್
* ಸಾಸಿವೆ – 1 ಟೀಸ್ಪೂನ್
* ಒಣಗಿದ ಕೆಂಪು ಮೆಣಸಿನಕಾಯಿ – 3
Advertisement
Advertisement
* ಚಿಕ್ಕ ಈರುಳ್ಳಿ – 1 ಕಪ್
* ಕರಿಬೇವು – 10 ಎಲೆಗಳು
* ಕಟ್ ಮಾಡಿದ ಟೊಮೆಟೊ – 1
* ಅರಿಶಿನ – ಅರ್ಧ ಟೀಸ್ಪೂನ್
* ಉಪ್ಪು – 1 ಟೀಸ್ಪೂನ್
* ನೀರು – 2 ಕಪ್
* ತೊಗರಿ ಬೇಳೆ – 2 ಕಪ್
* ಹುಣಸೆಹಣ್ಣಿನ ಸಾರ – ಅರ್ಧ ಕಪ್
* ಕೊತ್ತಂಬರಿ – 2 ಟೇಬಲ್ಸ್ಪೂನ್
* ಬೆಳ್ಳುಳ್ಳಿ – 2
Advertisement
ಮಾಡುವ ವಿಧಾನ
* ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.
* ಈ ಮಿಶ್ರಣಕ್ಕೆ ಚಿಕ್ಕ ಈರುಳ್ಳಿಗಳನ್ನು ಸೇರಿಸಿ, 2 ನಿಮಿಷ ಬೇಯಿಸಿ. ನಂತರ ಅದಕ್ಕೆ ಟೊಮೆಟೊ ಸೇರಿಸಿ ಫ್ರೈ ಮಾಡಿ.
* ಅದಕ್ಕೆ ಅರಿಶಿನ, ಸಾಂಬಾರ್ ಪೌಡರ್ ಮತ್ತು ಉಪ್ಪು ಸೇರಿಸಿ ಒಂದು ನಿಮಿಷ ಬೇಯಿಸಿ.
* ಆ ಮಸಾಲೆಗೆ ನುಗ್ಗೆಕಾಯಿ ತುಂಡುಗಳನ್ನು ಸೇರಿಸಿ 1 ಕಪ್ ನೀರು ಸೇರಿಸಿ. 10 ನಿಮಿಷಗಳ ಕಾಲ ಮುಚ್ಚಿಡಿ. ಅದಕ್ಕೆ ತೊಗರಿ ಬೇಳೆ ಮತ್ತು ನೀರು ಸೇರಿಸಿ ಬೇಯಿಸಿ.
* ಈ ಮಿಶ್ರಣಕ್ಕೆ ಹುಣಸೆಹಣ್ಣಿನ ಸಾರವನ್ನು ಸೇರಿಸಿ, ಚೆನ್ನಾಗಿ ಬೆರೆಸಿ ಪರಿಮಳ ಬರುವವರೆಗೂ ಕುದಿಸಿ.-
– ಅಂತಿಮವಾಗಿ, ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಬಿಸಿ ಬಿಸಿ ಅನ್ನದೊಂದಿಗೆ ನುಗ್ಗೆಕಾಯಿ ಸಾಂಬಾರ್ ಜೊತೆ ಆನಂದಿಸಿ.