ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯದಲ್ಲಿ ಏರಿಳಿತವಾಗುವುದು ಸರ್ವೆ ಸಾಮಾನ್ಯವಾಗಿದೆ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹ ತೂಕ ಹೆಚ್ಚಾಗುವುದರ ಜೊತೆಗೆ ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಯಾವ ಆಹಾರವನ್ನು ಸೇವಿಸಬೇಕು, ನಮ್ಮ ಆಹಾರ ಕ್ರಮ ಹೇಗಿದ್ದರೆ ಒಳ್ಳೆಯದು ಎನ್ನುವ ಗೊಂದಲಗಳಿರುತ್ತವೆ.
ದೇಹದ ತೂಕ ಹೆಚ್ಚಾಗಿದ್ದರೆ ಅದಕ್ಕೆ ಖಂಡಿತವಾಗಿಯೂ ಬೊಜ್ಜು ಕಾರಣವಾಗುವುದು. ಬೊಜ್ಜು ಕರಗಿಸಲು ಹೆಚ್ಚಿನವರು ತುಂಬಾ ಶ್ರಮ ಪಡುತ್ತಾರೆ. ಅಂತಹವರು ಯಾವ ಆಹಾರ ಸೇವಿಸಬೇಕು ಎನ್ನುವ ಮಾಹಿತಿ ಈ ಕೆಳಗಿನಂತಿದೆ.
* ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ಪ್ರತಿದಿನ ಸೇವಿಸುವ ಸಿಹಿ ಪದಾರ್ಥಗಳಾಗಿವೆ. ಹೀಗಾಗಿ ಸಕ್ಕರೆ ಮಿಶ್ರಿತ ತಿನಿಸುಗಳಾದ ಬೇಕರಿ ತಿನಿಸುಗಳು, ಕೆಲವೊಂದು ಬಗೆಯೆ ಐಸ್‍ಕ್ರೀಮ್‍ಗಳು ಮತ್ತು ಸಿಹಿ ತಿಂಡಿಗಳಿಂದ ದೂರವಿರಿ.
* ಒಂದೆರಡು ಟೀ ಚಮಚ ಜೀರಿಗೆಯನ್ನು ನೀರಿನೊಂದಿಗೆ ಚೆನ್ನಾಗಿ ಕುದಿಸಿ, ಉಗುರು ಬೆಚ್ಚಗಿರುವಾಗಲೇ ಪ್ರತಿದಿನ ಒಂದೊಂದು ಲೋಟ ಕುಡಿಯುತ್ತಾ ಬಂದರೆ ಕಿಬ್ಬೊಟ್ಟೆ ಹಾಗೂ ಸೊಂಟದ ಸುತ್ತಲೂ ಶೇಖರಣೆ ಗೊಂಡ ಕೊಬ್ಬು ಸುಲಭವಾಗಿ ಕರಗಿಸುತ್ತದೆ.
* ಹಸಿ ಶುಂಠಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಇದನ್ನೂ ಓದಿ: ಒಡೆದ ಹಿಮ್ಮಡಿಯ ಆರೈಕೆಗೆ ಏನು ಮಾಡಬೇಕು ಗೊತ್ತಾ?
* ಪ್ರತಿ ದಿನ ಎರಡು ಗ್ಲಾಸ್ ಹಾಲಿಲ್ಲದ ಗ್ರೀನ್ ಟೀ ಸೇವಿಸಿದರೆ, ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಕೊಬ್ಬನ್ನು ಕರಗಿಸಲೂ ಸಾಧ್ಯವಾಗುತ್ತದೆ.
* ಹೊಟ್ಟೆಯ ಬೊಜ್ಜು ಕರಗಿಸಲು ಇವುಗಳ ಬದಲಿಗೆ ರುಚಿಕರವಾದ ನೀರನ್ನು ಕುಡಿಯಿರಿ. ಇದಕ್ಕಾಗಿ ನೀವು ಒಂದು ಜಗ್ ನೀರಿನಲ್ಲಿ ಸ್ವಲ್ಪ ಸ್ಟ್ರಾಬೆರಿ, ತುಳಸಿ, ಹುಳಿ ಅಥವಾ ಲಿಂಬೆ ಹಾಕಿಕೊಂಡು ಇಡಬೇಕು. ಇದು ಕುಡಿಯಲು ತುಂಬಾ ರುಚಿಕರವಾಗಿರುವುದು ಮತ್ತು ಇದರಲ್ಲಿ ಕ್ಯಾಲರಿ ಕೂಡ ತುಂಬಾ ಕಡಿಮೆ ಇರುವುದು. ಇದರಿಂದ ನೀವು ಮತ್ತಷ್ಟು ನೀರು ಕುಡಿಯಲು ಪ್ರೇರಣೆ ಕೂಡ ಸಿಗುವುದು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
* ಹಣ್ಣು, ಮೊಸರಿನಿಂದ ತಯಾರಿಸಿದ ಸ್ಮೂತಿ ಅಥವಾ ಸಲಾಡ್ ತಯಾರಿಸಿ ಸೇವಿಸಬಹುದಾಗಿದೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ