ಬ್ಲೂಬೆರಿ ಕಾಫಿ ಕೇಕ್ ಸಿಂಪಲ್ ಹಾಗೂ ಟೇಸ್ಟಿ ತಿನಿಸಾಗಿದ್ದು, ಇದನ್ನು ಬ್ರೇಕ್‌ಫಾಸ್ಟ್ ಆಗಿಯೂ ಸವಿಯಬಹುದು. ರಸಭರಿತ ಬ್ಲೂಬೆರಿ ಹಣ್ಣುಗಳನ್ನು ಬಳಸಿ ಕಾಫಿ ಕೇಕ್ ಅನ್ನು ಮಾಡಿದರೆ ಮಕ್ಕಳು ಮಿಸ್ ಮಾಡದೇ ಪ್ರತಿ ಬಾರಿ ಮನೆಯಲ್ಲಿ ತಯಾರಿಸಲು ಹೇಳುತ್ತಾರೆ. ಸಿಂಪಲ್ ಹಾಗೂ ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಸಕ್ಕರೆ ಪುಡಿ – ಕಾಲು ಕಪ್
ಕಂದು ಸಕ್ಕರೆ – ಕಾಲು ಕಪ್
ದಾಲ್ಚಿನ್ನಿ ಪುಡಿ – 1 ಟೀಸ್ಪೂನ್
ಏಲಕ್ಕಿ ಪುಡಿ – ಚಿಟಿಕೆ
ಕರಗಿದ ಬೆಣ್ಣೆ – 8 ಟೀಸ್ಪೂನ್
ಮೈದಾ ಹಿಟ್ಟು – ಒಂದೂವರೆ ಕಪ್
Advertisement
ಕಾಫಿ ಕೇಕ್ ತಯಾರಿಸಲು:
ಮೈದಾ ಹಿಟ್ಟು – ಎರಡೂವರೆ ಕಪ್
ದಾಲ್ಚಿನ್ನಿ ಪುಡಿ – 1 ಟೀಸ್ಪೂನ್
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ಅಡುಗೆ ಸೋಡಾ – 1 ಟೀಸ್ಪೂನ್
ಬೇಕಿಂಗ್ ಪೌಡರ್ – ಮುಕ್ಕಾಲು ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಬೆಣ್ಣೆ – 8 ಟೀಸ್ಪೂನ್
ಸಕ್ಕರೆ ಪುಡಿ – ಮುಕ್ಕಾಲು ಕಪ್
ಕಂದು ಸಕ್ಕರೆ – ಅರ್ಧ ಕಪ್
ಮೊಟ್ಟೆ – 2
ಮೊಸರು – 1 ಕಪ್
ವೆನಿಲ್ಲಾ ಸಾರ – 1 ಟೀಸ್ಪೂನ್
ತಾಜಾ ಬೆರಿ ಹಣ್ಣುಗಳು – ಒಂದೂವರೆ ಕಪ್ ಇದನ್ನೂ ಓದಿ: ಮಕ್ಕಳಿಗಾಗಿ ಚೋಕೋ ಚಿಪ್ ಕುಕ್ಕೀಸ್..!
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 175 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
* ಒಂದು ಬೌಲ್‌ನಲ್ಲಿ ಸಕ್ಕರೆ, ಮಸಾಲೆ ಪದಾರ್ಥಗಳು, ಬೆಣ್ಣೆ ಹಾಗೂ ಮೈದಾ ಹಿಟ್ಟು ಸೇರಿಸಿ ಮಿಶ್ರಣ ಮಾಡಿ, ಪಕ್ಕಕ್ಕಿಡಿ.
* ಈಗ ಇನ್ನೊಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಅಡುಗೆ ಸೋಡಾ, ಬೇಕಿಂಗ್ ಪೌಡರ್, ದಾಲ್ಚಿನ್ನಿ ಪುಡಿ, ಏಲಕ್ಕಿ ಪುಡಿ, ಉಪ್ಪು, ಬೆಣ್ಣೆ ಹಾಗೂ ಸಕ್ಕರೆ ಸೇರಿಸಿ ನಯವಾಗುವಂತೆ ಬೀಟ್ ಮಾಡಿಕೊಳ್ಳಿ.
* ನಂತರ ಮೊಸರು ಹಾಗೂ ವೆನಿಲ್ಲಾ ಸಾರ ಸೇರಿಸಿ, ಬೌಲ್‌ನಲ್ಲಿ ಮಿಶ್ರಣ ಮಾಡಿಟ್ಟಿದ್ದ ಒಣ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಸಂಯೋಜಿಸುವಂತೆ ಮಿಕ್ಸ್ ಮಾಡಿ.
* ಬ್ಯಾಟರ್ ಅನ್ನು ಬೇಕಿಂಗ್ ಪ್ಯಾನ್‌ಗೆ ಹಾಕಿ, ಮೇಲ್ಮೈಯನ್ನು ಸಮತಟ್ಟುಗೊಳಿಸಿ. ಅದರ ಮೇಲೆ ಬ್ಲೂಬೆರಿ ಹಣ್ಣುಗಳನ್ನು ಹರಡಿ.
* ಈಗ ಕೇಕ್ ಅನ್ನು ಸುಮಾರು 40-45 ನಿಮಿಷಗಳ ಕಾಲ ಓವನ್‌ನಲ್ಲಿ ಇರಿಸಿ, ಬೇಯಿಸಿಕೊಳ್ಳಿ.
* ಇದೀಗ ಬ್ಲೂಬೆರಿ ಕಾಫಿ ಕೇಕ್ ತಯಾರಾಗಿದ್ದು ಮಕ್ಕಳಿಗೆ ಸವಿಯಲು ನೀಡಿ. ಇದನ್ನೂ ಓದಿ: 30 ನಿಮಿಷ ಸಾಕು – ಫ್ರೆಂಚ್ ಬ್ರೆಡ್ ಪಿಜ್ಜಾ ಸುಲಭವಾಗಿ ಮಾಡಿ
Web Stories