ಪ್ರೆಷರ್ ಕುಕ್ಕರ್‌ನಲ್ಲಿ ಸುಲಭವಾಗಿ ಮಾಡಬಹುದಾದ ಚಿಕನ್ ಕರಿ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಪಂಜಾಬಿ ಚಿಕನ್ ಕರಿಯನ್ನು ಪಂಜಾಬ್‌ನ ಮನೆಗಳಲ್ಲಿ ಯಾವಾಗಲೂ ತಯಾರಿಸಲಾಗುತ್ತದೆ. ಈ ರೆಸಿಪಿಯಲ್ಲಿ ಹೆಚ್ಚಿನ ಆಡಂಬರತೆ ಏನೂ ಇಲ್ಲ. ಆದರೆ ಇದರ ರುಚಿ ಅದ್ಭುತ ಎನ್ನದೇ ಇರಲು ಸಾಧ್ಯವಿಲ್ಲ. ತಂದೂರಿ ರೊಟ್ಟಿ, ಕುಲ್ಚಾ, ಜೀರಾ ರೈಸ್ ಅಥವಾ ಯಾವುದೇ ಪಂಜಾಬಿ ಅಡುಗೆಗಳೊಂದಿಗೆ ಇದು ಸೂಪರ್ ಎನಿಸುತ್ತದೆ. ಈ ಸಿಂಪಲ್ ಚಿಕನ್ ಕರಿ ರೆಸಿಪಿ ನೀವೂ ಮಾಡಿ ಆಸ್ವಾದಿಸಿ.
Advertisement
ಬೇಕಾಗುವ ಪದಾರ್ಥಗಳು:
ಕತ್ತರಿಸಿದ ಚಿಕನ್ – ಅರ್ಧ ಕೆಜಿ
ಹೆಚ್ಚಿದ ಈರುಳ್ಳಿ – 2
ಸಣ್ಣಗೆ ಹೆಚ್ಚಿದ ಟೊಮೆಟೊ – 2
ಶುಂಠಿ ಪೇಸ್ಟ್ – 1 ಟೀಸ್ಪೂನ್
ತುರಿದ ಬೆಳ್ಳುಳ್ಳಿ – 5
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಸೀಳಿದ ಹಸಿರು ಮೆಣಸಿನಕಾಯಿ – 2
ಮೊಸರು – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ದಾಲ್ಚಿನಿ ಎಲೆ – 1
Advertisement
Advertisement
Advertisement
ಲವಂಗ – 2
ದಾಲ್ಚಿನಿ – 2
ಏಲಕ್ಕಿ – 1
ಕಾಶ್ಮೀರಿ ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಗರಂ ಮಸಾಲೆ ಪುಡಿ – 1 ಟೀಸ್ಪೂನ್
ಕಸೂರಿ ಮೇಥಿ ಪುಡಿ – ಅರ್ಧ ಟೀಸ್ಪೂನ್
ನಿಂಬೆ ರಸ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 2 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್ ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಚಿಕನ್ ಚೌ ಮಿನ್ ರೆಸಿಪಿ
ಮಾಡುವ ವಿಧಾನ:
* ಮೊದಲಿಗೆ ಚಿಕನ್ ಅನ್ನು ಉಪ್ಪು, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ರಸದೊಂದಿಗೆ ಮ್ಯಾರಿನೇಟ್ ಮಾಡಿ, ಅದನ್ನು ಮುಚ್ಚಿ ಮತ್ತು 1 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ.
* ಪ್ರೆಷರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ದಾಲ್ಚಿನಿ ಎಲೆ, ಏಲಕ್ಕಿ, ಲವಂಗ ಮತ್ತು ದಾಲ್ಚಿನಿ ಸೇರಿಸಿ, ಹುರಿಯಿರಿ.
* ನಂತರ ಜೀರಿಗೆ ಸೇರಿಸಿ, ಪರಿಮಳವನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದಾಗ, ಉರಿಯನ್ನು ಕಡಿಮೆ ಮಾಡಿ ಈರುಳ್ಳಿ ಸೇರಿಸಿ. ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಈಗ ಶುಂಠಿ ಪೇಸ್ಟ್ ಹಾಗೂ ತುರಿದ ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ.
* ಬಳಿಕ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಹಾಗೂ ಟೊಮೆಟೊ ಹಾಕಿ ಎಣ್ಣೆ ಬಿಡುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
* ಈಗ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಸೇರಿಸಿ. ಎಲ್ಲವನನ್ನೂ 1 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
* ಚಿಕನ್ ನೀರು ಬಿಡಲು ಪ್ರಾರಂಭಿಸಿದಾಗ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಸೇರಿಸಿ.
* ಈಗ ಸ್ಥಿರತೆ ನೋಡಿಕೊಂಡು 1-2 ಕಪ್ ಬೆಚ್ಚಗಿನ ನೀರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಪ್ರೆಷರ್ ಕುಕ್ಕರ್‌ನ ಮುಚ್ಚಳ ಹಾಕಿ 2 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಒತ್ತಡ ಕಡಿಮೆಯಾದ ಬಳಿಕ ಮುಚ್ಚಳ ತೆರೆದು, ಅದಕ್ಕೆ ಕಸೂರಿ ಮೇಥಿ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
* ಇದೀಗ ಪಂಜಾಬಿ ಚಿಕನ್ ಕರಿ ತಯಾರಾಗಿದ್ದು, ತಂದೂರಿ ರೋಟಿ ಅಥವಾ ಜೀರಾ ರೈಸ್ ಜೊತೆ ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ಗ್ರೀಕ್ ಲೆಮನ್ ಚಿಕನ್