ಬೆಳಗ್ಗೆ ಅಥವಾ ಸಂಜೆ, ತಿಂಡಿ ಅಥವಾ ಸ್ನ್ಯಾಕ್ಸ್ ಹೊತ್ತಲ್ಲಿ ರೈಸ್ ಐಟಮ್ ಏನಾದ್ರೂ ಮಾಡೋದು ಎಂದರೆ ಅಲ್ಲಿ ಬಹಳಷ್ಟು ಆಯ್ಕೆಗಳಿವೆ. ಚಿತ್ರಾನ್ನದಿಂದ ಹಿಡಿದು ಫ್ರೈಡ್ ರೈಸ್ ವರೆಗೂ ವಿವಿಧ ರೆಸಿಪಿಗಳಿವೆ. ಆದರೆ ಕೆಲವೊಂದು ಬೋರಿಂಗ್ ರೆಸಿಪಿ ಎನಿಸಿದರೆ ಕೆಲವೊಂದು ಟೇಸ್ಟಿಯಾಗಿಯೂ ಇರುತ್ತದೆ. ನಾವಿಂದು ಸಖತ್ ಟೇಸ್ಟಿ ಮೆಕ್ಸಿಕನ್ ರೈಸ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ರೈಸ್ ಐಟಮ್‌ನಲ್ಲಿ ಹೊಸದೇನಾದ್ರೂ ಟ್ರೈ ಮಾಡ್ಬೇಕು ಎಂದುಕೊಂಡವರಿಗೆ ಈ ರೆಸಿಪಿ ಬೆಸ್ಟ್ ಆಫ್ಶನ್.
Advertisement
ಬೇಕಾಗುವ ಪದಾರ್ಥಗಳು:
ಅಕ್ಕಿ – ಒಂದೂವರೆ ಕಪ್
ಎಣ್ಣೆ – ಕಾಲು ಕಪ್
ಕೊಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಭಾಗ
ಟೊಮೆಟೋ ಸಾಸ್ – ಕಾಲು ಕಪ್
ಟೊಮೆಟೋ ಬೌಲನ್ – 2 ಟೀಸ್ಪೂನ್
ಉಪ್ಪು – ರಚಿಗೆ ತಕ್ಕಷ್ಟು
ಹೆಚ್ಚಿದ ಕ್ಯಾರೆಟ್ – 1
ತಾಜಾ ಬಟಾಣಿ – ಅರ್ಧ ಕಪ್
ನೀರು – 3 ಕಪ್
ಹಸಿರು ಮೆಣಸಿನಕಾಯಿ -2 (ಐಚ್ಛಿಕ) ಇದನ್ನೂ ಓದಿ: ಆರೋಗ್ಯಕರ ಪಾಲಕ್ ದಾಲ್ ಕಿಚಡಿ ರೆಸಿಪಿ ನಿಮಗಾಗಿ..
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಪಕ್ಕಕ್ಕಿಡಿ.
* ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಅಕ್ಕಿ ಸೇರಿಸಿ ಮಿಶ್ರಣ ಮಾಡಿ.
* ಮಧ್ಯಮ ಉರಿಯಲ್ಲಿ ಆಗಾಗ ಬೆರೆಸುತ್ತಾ ಅಕ್ಕಿ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 10 ನಿಮಿಷ ಹುರಿದುಕೊಳ್ಳಿ.
* ಬಳಿಕ ಅದಕ್ಕೆ ಟೊಮೆಟೊ ಸಾಸ್, ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಬೆರೆಸಿಕೊಳ್ಳಿ.
* ಟೊಮೆಟೋ ಬೌಲನ್, ಉಪ್ಪು, ಕ್ಯಾರೆಟ್, ಬಟಾಣಿ, ಮೆಣಸಿನಕಾಯಿ ಹಾಗೂ ನೀರು ಸೇರಿಸಿ ಕುದಿಸಿಕೊಳ್ಳಿ.
* ಕುದಿ ಬಂದ ಬಳಿಕ ಪಾತ್ರೆಗೆ ಮುಚ್ಚಳ ಹಾಕಿ, ಉರಿಯನ್ನು ಕಡಿಮೆ ಮಾಡಿ, ಸುಮಾರು 20 ನಿಮಿಷಗಳವರೆಗೆ ಅಥವಾ ನೀರು ಸಂಪೂರ್ಣವಾಗಿ ಹೀರಿಕೊಳ್ಳುವವರೆಗೆ ಬೇಯಿಸಿಕೊಳ್ಳಿ.
* ಬಳಿಕ ಉರಿಯನ್ನು ಆಫ್ ಮಾಡಿ, 5 ನಿಮಿಷ ಆರಲು ಬಿಟ್ಟು ಬಳಿಕ ಮಿಶ್ರಣ ಮಾಡಿ.
* ಇದೀಗ ಸಿಂಪಲ್ ಹಾಗೂ ಟೇಸ್ಟಿ ಮೆಕ್ಸಿಕನ್ ರೈಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಡಿಫರೆಂಟ್ ಸ್ವಾದದ ಹೆಲ್ತಿ ರೆಸಿಪಿ – ಕೊಕೊನಟ್, ಮಿಂಟ್ ರೈಸ್ ಮಾಡಿ
Advertisement
Web Stories