ಮನೆಯಲ್ಲಿ ಕೊಬ್ಬರಿ ಉಳಿದಿದೆಯಾ? ಅಯ್ಯೊ ಸುಮ್ನೆ ಕೊಬ್ಬರಿ ವೇಸ್ಟ್ ಆಗತ್ತಲ್ಲಾ ಅಂತಾ ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ಸಿಂಪಲ್ ಕೊಬ್ಬರಿ ಲಡ್ಡು ಮಾಡೊ ವಿಧಾನ.
ಬೇಕಾಗುವ ಸಾಮಗ್ರಿಗಳು:
ತುರಿದಿರುವ ಕೊಬ್ಬರಿ – 1 ಕಾಲು ಕಪ್
ಹಾಲು – ಮುಕ್ಕಾಲು ಲೀಟರ್
ಸಕ್ಕರೆ – 1/3 ಕಪ್
ತುಪ್ಪ – 2 ಚಮಚ
ಏಲಕ್ಕಿ ಪುಡಿ – ಎರಡು ಚಿಟಿಕೆ
ಬಾದಾಮಿ- ಸ್ವಲ್ಪ
ಮಾಡುವ ವಿಧಾನ:
1. ಮೊದಲು ಒಂದು ಪ್ಯಾನ್‍ನನ್ನು ಸ್ಟೌವ್ ಮೇಲಿಟ್ಟು, ಬಿಸಿಯಾದ ಬಳಿಕ 1 ಕಾಲು ಕಪ್ ತುರಿದ ಕೊಬ್ಬರಿಯನ್ನು ಹಾಕಿ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ.
2. ಬಳಿಕ ಫ್ರೈ ಮಾಡಿರುವ ಕೊಬ್ಬರಿ ತುರಿಗೆ ಮುಕ್ಕಾಲು ಲೀಟರ್ ಕಪ್ ಹಾಲು ಹಾಗೂ 1/3 ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಕಡಿಮೆ ಉರಿಯಲ್ಲಿ ಮಿಶ್ರಣವನ್ನು ಡ್ರೈ ಆಗಲು ಬಿಡಿ.
3. ಕೊಬ್ಬರಿ ಮಿಶ್ರಣಕ್ಕೆ 2 ಚಮಚ ತುಪ್ಪ ಹಾಗೂ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವು ಗಟ್ಟಿಯಾಗುವ ತನಕ ಅದನ್ನು ಸೌಟಿನಿಂದ ತಿರುಗಿಸುತ್ತಾ ಇರಿ.
4. ಮಿಶ್ರಣ ಗಟ್ಟಿಯಾದ ಮೇಲೆ ಸ್ಟೌವ್ ಆಫ್ ಮಾಡಿ, ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ನಿಧಾನವಾಗಿ ಮಿಶ್ರಣವನ್ನು ಒಂದೊಂದೆ ಉಂಡೆ ಆಕಾರದಲ್ಲಿ ಮಾಡಿ ಪ್ಲೇಟ್‍ನಲ್ಲಿ ಇಡಿ. ಕೊಬ್ಬರಿ ತುರಿಯಿಂದ ತಯಾರಿಸಿದ ಲಡ್ಡುಗಳನ್ನು ಒಂದೊಂದು ಬಾದಾಮಿ ಅಲಂಕರಿಸಿ ಸಿದ್ಧ ಪಡಿಸಿದರೆ ಕೊಬ್ಬರಿ ಲಡ್ಡು ಸವಿಯಲು ಸಿದ್ಧ.
ಮಕ್ಕಳಿಂದ ದೊಡ್ಡವರವರೆಗೂ ಸ್ವೀಟ್ ಅಂದ್ರೆ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಸ್ವೀಟ್ ಪ್ರಿಯರಿಗೆಂದೇ ಈ ರೆಸಿಪಿ ತಯಾರಾಗಿದೆ. ಸಿಂಪಲ್ ಕೊಬ್ಬರಿ ಲಾಡು ಎಲ್ಲರಿಗೂ ಸಖತ್ ಇಷ್ಟ ಅಗೊದ್ರಲ್ಲಿ ಎರಡು ಮಾತೇ ಇಲ್ಲ.