ಪ್ರತಿಯೊಬ್ಬರೂ ಮನೆಯಲ್ಲಿ ತಕ್ಷಣ ತಯಾರಿಸೋ ಅಡುಗೆಯಾಗಿ ಆರೋಗ್ಯಕರ, ತೃಪ್ತಿದಾಯಕ ಉಪಹಾರ ಅಥವಾ ಲಘು ಆಹಾರವಾಗಿ ಆವಕಾಡೋ ಟೋಸ್ಟ್ ಮಾಡೋದು ಹೇಗೆ ಎಂಬುದು ತಿಳಿದುಕೊಳ್ಳೋದು ಅಗತ್ಯವಿದೆ. ಗಾರ್ಲಿಕ್ ಬ್ರೆಡ್‌ನೊಂದಿಗೆ ಈ ಆವಕಾಡೋ ಟೋಸ್ಟ್ ಬೆಸ್ಟ್ ಕಾಂಬೋ ಆಗಬಲ್ಲದು. ಕೇವಲ 15 ನಿಮಿಷಗಳಲ್ಲಿ ಇದನ್ನು ಸಿಂಪಲ್ ಆಗಿ ಮಾಡಬಹುದು. ಆರೋಗ್ಯಕರವಾದ ಈ ರೆಸಿಪಿಯನ್ನು ನೀವೂ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಗಾರ್ಲಿಕ್ ಬ್ರೆಡ್ – 8-10 ಸ್ಲೈಸ್
ಆಲಿವ್ ಎಣ್ಣೆ – 1 ಟೀಸ್ಪೂನ್
ಆವಕಾಡೋ – 1
ಹೆಚ್ಚಿದ ಬೆಳ್ಳುಳ್ಳಿ – 1
ಓರಿಗಾನೋ – ಅರ್ಧ ಟೀಸ್ಪೂನ್
ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
ನಿಂಬೆ ರಸ – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಗಾರ್ಲಿಕ್ ಬ್ರೆಡ್ ಮನೆಯಲ್ಲೇ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆವಕಾಡೋವನ್ನು ತೆಗೆದುಕೊಂಡು, ಚಾಕು ಸಹಾಯದಿಂದ ಸುತ್ತಲೂ ಅರ್ಧ ಭಾಗಕ್ಕೆ ಸೀಳಿ, 2 ಭಾಗ ಮಾಡಿಕೊಳ್ಳಿ. ಅದರ ಬೀಜವನ್ನು ಬೇರ್ಪಡಿಸಿಕೊಳ್ಳಿ.
* ಸ್ಪೂನ್ ಸಹಾಯದಿಂದ ಆವಕಾಡೋ ಒಳಭಾಗವನ್ನು ಸ್ಕೂಪ್ ಮಾಡುವ ಮೂಲಕ ಸಿಪ್ಪೆಯಿಂದ ಬೇರ್ಪಡಿಸಿಕೊಳ್ಳಿ.
* ಈಗ ಆವಕಾಡೋ ತಿರುಳನ್ನು ಮಧ್ಯಮ ಗಾತ್ರದಲ್ಲಿ ಚಾಕು ಸಹಾಯದಿಂದ ಕತ್ತರಿಸಿಕೊಳ್ಳಿ.
* ಈಗ ಮಿಕ್ಸರ್ ಜಾರ್‌ನಲ್ಲಿ ಆವಕಾಡೋ ತಿರುಳು, ಬೆಳ್ಳುಳ್ಳಿ ಸೇರಿಸಿ ರುಬ್ಬಿಕೊಳ್ಳಿ.
* ಬಳಿಕ ಆವಕಾಡೋ ಮಿಶ್ರಣಕ್ಕೆ ಓರಿಗಾನೋ, ಕರಿಮೆಣಸಿನ ಪುಡಿ, ಉಪ್ಪು ಹಾಗೂ ನಿಂಬೆ ರಸ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕಿಡಿ.
* ಈಗ ತವಾವನ್ನು ಬಿಸಿ ಮಾಡಿ, ಆಲಿವ್ ಎಣ್ಣೆ ಹಾಕಿ, ಬ್ರೆಡ್ ಸ್ಲೈಸ್‌ಗಳನ್ನು ಮಧ್ಯಮ ಉರಿಯಲ್ಲಿ ಎರಡೂ ಕಡೆ ಟೋಸ್ಟ್ ಮಾಡಿಕೊಳ್ಳಿ.
* ಈಗ ಆವಕಾಡೋ ಮಿಶ್ರಣವನ್ನು ಬ್ರೆಡ್ ಸ್ಲೈಸ್‌ಗಳ ಮೇಲೆ ಹರಡಿಕೊಳ್ಳಿ.
* ಇದೀಗ ಸಿಂಪಲ್ ಹಾಗೂ ಆರೋಗ್ಯಕರ ಆವಕಾಡೋ ಟೋಸ್ಟ್ ತಯಾರಾಗಿದ್ದು ತಕ್ಷಣವೇ ಇದನ್ನು ಸವಿಯಿರಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಮಶ್ರೂಮ್ ಸ್ಯಾಂಡ್‌ವಿಚ್
Advertisement
Web Stories