ಸುಲಭವಾದ ಜರ್ಮನ್ ಆಲೂಗಡ್ಡೆ ಸಲಾಡ್ ಬಾರ್ಬೆಕ್ಯೂ ಸೈಡ್ ಡಿಶ್ ಆಗಿದ್ದು, ಇದನ್ನು ಫಟಾಫಟ್ ಅಂತ ತಯಾರಿಸಬಹುದು. ಬಿಸಿ ಅಥವಾ ತಣ್ಣಗಾಗಿಸಿಯೂ ಇದನ್ನು ತಿನ್ನಬಹುದು. ಸಿಂಪಲ್ ಆಗಿರೋ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಚೌಕಾಕಾರವಾಗಿ ಕತ್ತರಿಸಿದ ಕೆಂಪು ಆಲೂಗಡ್ಡೆ – 1 ಕೆಜಿ
ಕತ್ತರಿಸಿದ ಬೇಕನ್ – 250 ಗ್ರಾಂ
ಹೆಚ್ಚಿದ ಈರುಳ್ಳಿ – 1
ಆಪಲ್ ಸೈಡರ್ ವಿನೆಗರ್ – ಅರ್ಧ ಕಪ್
ಡಿಜಾನ್ ಸಾಸಿವೆ – 1 ಟೀಸ್ಪೂನ್
ಆಲಿವ್ ಎಣ್ಣೆ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 6
ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್ ಇದನ್ನೂ ಓದಿ: ಪಾರ್ಟಿಗೆ ಸ್ಟಾರ್ಟರ್ – ಮಟನ್ ಶಮಿ ಕಬಾಬ್ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯನ್ನು ಮಧ್ಯಮ ಗಾತ್ರದ ಪಾತ್ರೆಯಲ್ಲಿ ಇರಿಸಿ ಮುಳುಗುವಷ್ಟು ನೀರು ಹಾಕಿ, ಮುಚ್ಚಿ, ಕುದಿಸಿ.
* ಆಲೂಗಡ್ಡೆ ಮೃದುವಾಗುವವರೆಗೆ ಸುಮಾರು 10 ನಿಮಿಷ ಬೇಯಿಸಿಕೊಳ್ಳಿ. ನಂತರ ನೀರನ್ನು ಹರಿಸಿ, ದೊಡ್ಡ ಬಟ್ಟಲಿನಲ್ಲಿ ಇರಿಸಿ.
* ಈ ನಡುವೆ ಬೇಕನ್ ಅನ್ನು ಫ್ರೈ ಪ್ಯಾನ್‌ನಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ನಂತರ ಬೇಕನ್ ಅನ್ನು ಚಮಚದಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿಕೊಳ್ಳಿ.
* ಬೇಕನ್ ಅನ್ನು ಹುರಿದುಕೊಂಡ ಎಣ್ಣೆಗೆ ಈರುಳ್ಳಿ ಸೇರಿಸಿ 3 ನಿಮಿಷ ಹುರಿಯಿರಿ.
* ವಿನೆಗರ್ ಮತ್ತು ಡಿಜಾನ್ ಸಾಸಿವೆ ಸೇರಿಸಿ 2 ನಿಮಿಷ ಬೇಯಿಸಿ.
* ನಂತರ ಉರಿಯನ್ನು ಆಫ್ ಮಾಡಿ, ಅದಕ್ಕೆ ಬೆಚ್ಚಗಿನ ಆಲೂಗಡ್ಡೆಯನ್ನು ಸೇರಿಸಿ.
* ಉಪ್ಪು, ಕರಿಮೆಣಸಿನಪುಡಿ, ಸ್ಪ್ರಿಂಗ್ ಆನಿಯನ್, ಕೊತ್ತಂಬರಿ ಸೊಪ್ಪು, ಮತ್ತು ಹುರಿದ ಬೇಕನ್ ಸೇರಿಸಿ.
* ಎಲ್ಲವನ್ನೂ ಒಟ್ಟಿಗೆ ಟಾಸ್ ಮಾಡಿ, ಬೌಲ್‌ಗೆ ಬಡಿಸಿ.
* ಇದೀಗ ಜರ್ಮನ್ ಆಲೂಗಡ್ಡೆ ಸಲಾಡ್ ತಯಾರಾಗಿದ್ದು, ಬಿಸಿ ಅಥವಾ ತಣ್ಣಗಾದಮೇಲೂ ಸವಿಯಬಹುದು. ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ
Advertisement
Web Stories