ರಾಯಚೂರು: ಬಿಸಿಲನಾಡು ಎಂದು ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿರುವುದರಿಂದ ಈ ಬಾರಿ ದಸರಾವನ್ನು ಸರಳವಾಗಿ ಆಚರಣೆ ಮಾಡಿದ್ದಾರೆ.
ನಗರದ ಗಾಂಧಿ ವೃತ್ತದ ಬಳಿಯ ಆಂಜನೇಯ ದೇವಾಲಯದಲ್ಲಿ ಎನ್.ಎಸ್.ಬೋಸರಾಜು ಫೌಂಡೇಶನ್ ನೇತೃತ್ವದಲ್ಲಿ ದಸರಾ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ನಿರ್ಮಾಣವಾಗಿದ್ದು, ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಬಾರಿ ಕೇವಲ ಹೋಮ-ಹವನ ಮಾಡುವ ಮೂಲಕ ದಸರಾವನ್ನು ಸರಳವಾಗಿ ಆಚರಿಸಿಲಾಗಿದೆ.
Advertisement
Advertisement
ಕಳೆದ ವರ್ಷ ಇದೇ ದಸರಾ ಮಹೋತ್ಸವದಲ್ಲಿ ರಾವಣ ಸಂಹಾರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ವಿಶೇಷವಾಗಿ ಮಳೆಗಾಗಿ ಈ ಬಾರಿಯ ದಸರಾದಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
Advertisement
ಈ ಕಾರ್ಯಕ್ರಮಕ್ಕೆ ಸಂಸದ ಬಿ.ವಿ.ನಾಯಕ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಎಂಎಲ್‍ಸಿ ಅನುದಾನದಲ್ಲಿ 29 ಜನ ವಿಕಲಚೇತನರಿಗೆ ತ್ರಿ-ಚಕ್ರ ವಾಹನವನ್ನು ಸಹ ವಿತರಿಸಲಾಯಿತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv