‘ಸಿಂಹರೂಪಿಣಿ’ಯ ಯಶಸ್ವಿ 25ರ ಹೆಜ್ಜೆ

Public TV
2 Min Read
simharoopini film

‘ಕೆಜಿಎಫ್’ (KGF) ಖ್ಯಾತಿಯ ಸಾಹಿತಿ ಕಿನ್ನಾಳ್ ರಾಜ್ (Kinnal Raj) ನಿರ್ದೇಶನದ ‘ಸಿಂಹರೂಪಿಣಿ’ ಸಿನಿಮಾ ಅ.17ರಂದು ರಿಲೀಸ್‌ ಆಗಿತ್ತು. ಇದೀಗ ಈ ಚಿತ್ರ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ದೇವರ ಚಿತ್ರವನ್ನು ಕಮರ್ಷಿಯಲ್ ಅಂಶದೊಂದಿಗೆ ಮಾಸ್ ಆಗಿ ತೋರಿಸಿ ‘ಸಿಂಹರೂಪಿಣಿ’ ಚಿತ್ರ ಗೆದ್ದು ಬೀಗಿದೆ. ಇದನ್ನೂ ಓದಿ:ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್‌ ಬಾಸ್‌’ ಎಲಿಮಿನೇಷನ್‌ ಬಳಿಕ ಧರ್ಮ ರಿಯಾಕ್ಷನ್

simharoopini film 1

ಇದೇ ಖುಷಿಯಲ್ಲಿ ಈ ಚಿತ್ರಕ್ಕಾಗಿ ಶ್ರಮಿಸಿದ ಕಲಾವಿದರಿಗೆ, ತಂತ್ರಜ್ಞರಿಗೆ ಪಾರಿತೋಷಕ ವಿತರಿಸುವ ಕಾರ್ಯಕ್ರಮವನ್ನು ಸ್ವಪ್ನ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಕೆಜಿಎಫ್’, ‘ಸಲಾರ್’, ‘ಭೈರತಿ ರಣಗಲ್’ ಮುಂತಾದ ಹಿಟ್ ಸಿನಿಮಾಗಳಿಗೆ ಹಾಡುಗಳನ್ನು ಬರೆದಿರುವ ಕಿನ್ನಾಳ್ ರಾಜ್ ಚಿತ್ರ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.

simharoopini film 2

ಡೈರೆಕ್ಟರ್ ಕಿನ್ನಾಳ್ ರಾಜ್ (Kinnal Raj) ಮಾತನಾಡಿ, ಚಿತ್ರ ಮಾಡಲು ಯೋಗ, ಯೋಗ್ಯತೆ ಅದಕ್ಕಿಂತ ಹೆಚ್ಚಾಗಿ ಅದೃಷ್ಟ ಕೂಡಿ ಬರಬೇಕು. ಇವೆಲ್ಲವೂ ನಮಗೆ ಸಿಕ್ಕಿದೆ. ಎಲ್ಲಾ ಕಲಾವಿದರು ಕಥೆ ಕೇಳಿದೊಡನೆ ಯಾವಾಗ ಬರಲಿ ಅಂತ ಹೇಳುತ್ತಿದ್ದರು. ಎಲ್ಲರೂ ಭಕ್ತಿಯಿಂದ, ಇಷ್ಟದಿಂದ ಸಿನಿಮಾ ಮಾಡಿದ್ದಾರೆ. ವ್ಯವಹಾರಿಕವಾಗಿ ನಿರ್ಮಾಪಕರು ಸೇಫ್ ಆಗಿದ್ದಾರೆ. ಈ ವೇಳೆ, ಮಾಧ್ಯಮದ ಸಹಕಾರ ಎಂದೂ ಮರೆಯುವಂತಿಲ್ಲ. ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಕೋಣ ಏಕೆ ಕಡಿಯುತ್ತಾರೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದೀರಾ ಎಂದರು.

simharoopini film 3

ಸಿನಿಮಾದ ಸೆಕೆಂಡ್ ಆಫ್ ‘ಕಾಂತಾರ’ ಚಿತ್ರ ಮೀರಿಸುವಂತಿತ್ತು. ಭಕ್ತಿ ಕಥೆಗೆ ‘ಸಿಂಹರೂಪಿಣಿ’ ಸಾಕ್ಷಿಯಾಗಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. 9 ತಿಂಗಳ ಶ್ರಮ ಸಾರ್ಥಕ ಅನಿಸಿದೆ. ಇದೇ ವೇಳೆ, ಬ್ಯಾಂಕಾಕ್ ಫಿಲಂ ಫೆಸ್ಟಿವಲ್‌ದಲ್ಲಿ ಪ್ರಶಸ್ತಿ ಲಭಿಸಿದ್ದು ಖುಷಿಯಾಗಿದೆ. ಈ ಚಿತ್ರದ ಪಾರ್ಟ್ 2 ಮಾಡುವ ಯೋಜನೆ ಇದೆ  ಎಂದಿದ್ದಾರೆ.

simharoopini film 4ಈ ಸಮಾರಂಭದಲ್ಲಿ ಯಶಸ್ವಿನಿ, ಅಂಕಿತಾ ಗೌಡ, ಯಶ್ ಶೆಟ್ಟಿ, ಪುನೀತ್ ರುದ್ರನಾಗ್, ಆರವ್ ಲೋಹಿತ್, ಸಾಗರ್, ವಿಜಯ್ ಚೆಂಡೂರು, ಸಂಗೀತ ಸಂಯೋಜಕ ಆಕಾಶ್ ಪರ್ವ, ಛಾಯಾಗ್ರಾಹಕ ಕಿರಣ್ ಕುಮಾರ್, ಸಂಕಲನಕಾರ ಯುಡಿವಿ. ವೆಂಕಿ, ವಿತರಕ ರಮೇಶ್ ಮುಂತಾದವರು ಭಾಗಿಯಾಗಿ ಸಿನಿಮಾದ ಸಕ್ಸಸ್ ಸಂಭ್ರಮಿಸಿದ್ದಾರೆ.

Share This Article