ನವದೆಹಲಿ: ಆಧಾರ್‌ನಿಂದ ಪಡೆದ ಸಿಮ್ ಕಾರ್ಡ್‌ಗಳು ಸುಪ್ರಿಂ ಕೋರ್ಟ್ ತೀರ್ಪಿನಿಂದ ನಿಷ್ಕ್ರಿಯಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಆಧಾರ್ ಕಾರ್ಡ್ ಅನ್ನು ಸಿಮ್ ಕಾರ್ಡ್‌ಗಳಿಗೆ ಜೋಡನೆ ಮಾಡುವುದರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ಆಗುತ್ತಿರುವುದನ್ನ ತಡೆಯಲು ಸುಪ್ರಿಂ ಕೋರ್ಟ್ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಲು(ಕೆವೈಸಿ) ಆಧಾರ್ ಜೋಡನೆಯನ್ನು ನಿಲ್ಲಿಸಲು ಹೇಳಿತ್ತು. ಇದರಿಂದಾಗಿ ಗ್ರಾಹಕರಿಗೆ ಈ ಹಿಂದೆ ಆಧಾರ್ ನಿಂದ ಪಡೆದ ಸಿಮ್ ಕಾರ್ಡ್‌ಗಳ ಸೇವೆಯನ್ನ ನಿಷ್ಕ್ರಿಯಗೊಳಿಸುವ ಭಯ ಎದುರಾಗಿತ್ತು.
Advertisement
ಟಿಲಿಕಾಂ ಸಚಿವಾಲಯ ಮತ್ತು ಆಧಾರ್ ಪ್ರಾಧಿಕಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಸುಪ್ರಿಂ ಕೋರ್ಟ್ ಆಧಾರ್ ಮೂಲಕ ಹೊಸ ಸಿಮ್ ಕಾರ್ಡ್‌ಗಳನ್ನ ಪಡೆಯುವುದನ್ನ ನಿಷೇಧಿಸಿದೆ. ಆದರೆ ಈ ಹಿಂದೆ ಆಧಾರ್ ಮೂಲಕ ಪಡೆದ ಸಿಮ್ ಕಾರ್ಡ್‌ಗಳನ್ನ ನಿಷ್ಕ್ರಿಯಗೊಳಿಸಿಲು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement
Advertisement
ಗ್ರಾಹಕರು ತಮ್ಮ ಆಧಾರ್ ದಾಖಲೆಗಳನ್ನ ಬದಲಾಯಿಸಲು ಇಚ್ಛಿಸುವವರು ಸರ್ಕಾರಿಂದ ಗುರುತಿಸ್ಪಟ್ಟ ಗುರುತಿನ ಚೀಟಿ ಅಥವಾ ವಿಳಾಸವನ್ನ ಸ್ವಯಂಪ್ರೇರಿತವಾಗಿ ಸಲ್ಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದೆ.
Advertisement
ಆಧಾರ್ ಮೇಲೆ ನಿರ್ಬಂಧ ಹೇರಿದೆಯೇ ಹೊರತು ಟೆಲಿಕಾಂ ಕಂಪನಿಗಳ ಮೇಲೆ ಹೇರಿಲ್ಲ. ಹೀಗಾಗಿ ಟೆಲಿಕಾಂ ಕಂಪನಿಗಳು ಆಧಾರ್ ಮೂಲಕ ಸಂಗ್ರಹಿಸಿಕೊಂಡಿರುವ ಗ್ರಾಹಕರ ಮಾಹಿತಿಗಳನ್ನು ಡಿಲೀಟ್ ಮಾಡುವ ಅಗತ್ಯವಿಲ್ಲ ಎನ್ನುವ ವಿಚಾರ ಹೇಳಿಕೆಯಲ್ಲಿದೆ.
ದೇಶದ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸುಪ್ರಿಂ ಕೋರ್ಟ್ ಅಕ್ಟೋಬರ್ 15 ಒಳಗೆ ಆಧಾರ್ ವೆರಿಫಿಕೇಶನ್ ಅನ್ನು ನಿಲ್ಲಿಸಲು ಹೇಳಿತ್ತು. ಆದರೆ ಗ್ರಾಹಕರಿಗೆ ತಾವು ಈ ಹಿಂದೆ ಆಧಾರ್ ನಿಂದ ಪಡೆದ ಸಿಮ್ ಕಾರ್ಡ್‌ಗಳ ಸೇವೆಯನ್ನ ಕಡಿತಗೊಳಿಸಲಾಗುವುದು ಎಂಬ ಆತಂಕ ಮೂಡಿತ್ತು. ಆದರೆ ಈಗ ಆ ಎಲ್ಲಾ ಅನುಮಾನ ಮತ್ತು ಆತಂಕಗಳಿಗೆ ಬ್ರೇಕ್ ಸಿಕ್ಕಂತೆ ಆಗಿದೆ.
ಆಧಾರ್ ಮೇಲಿನ ದಾಳಿ ಸಂವಿಧಾನದ ಮೇಲೆ ದಾಳಿ ನಡೆಸಿದಂತೆ ಆಗುತ್ತದೆ. ಆಧಾರ್ ವಿಶಿಷ್ಟವಾಗಿರುವುದೇ ಉತ್ತಮವಾಗಿದ್ದು, ಈಗಾಗಲೇ ಆಧಾರ್ ಜನ ಸಾಮನ್ಯ ಬಳಿ ತಲುಪಿದ್ದು, ಅದು ದೇಶದ ಗುರುತಿನ ಪತ್ರವಾಗಿದೆ. ಈಗ ಆಧಾರ್ ವಿರೋಧಿಸಿದರೆ ಕೈಯಲ್ಲಿರುವ ಮಗುವನ್ನ ಎಸೆದಂತೆ. ಆಧಾರ್ ವಿರೋಧಿಸಿದ್ರೆ ಸಂವಿಧಾನ ವಿರೋಧಿಸಿದಂತೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಆಧಾರ್‌ಗೆ ಸಾಂವಿಧಾನಿಕಾ ಮಾನ್ಯತೆಯನ್ನು ಕೋರ್ಟ್ ನೀಡಿದ್ದರೂ ಸಿಮ್ ಖರೀದಿಗೆ ಕಡ್ಡಾಯ ಮಾಡಕೂಡದು ಎಂದು ಹೇಳಿತ್ತು.
ಆಧಾರ್ ಯಾವುದಕ್ಕೆ ಬೇಕು?
ಸರ್ಕಾರಿ ಸೌಲಭ್ಯ, ಪ್ಯಾನ್, ಆದಾಯ ತೆರಿಗೆ (ಐಟಿ ರಿಟನ್ರ್ಸ್), ಆಸ್ತಿ ಖರೀದಿ, ಪ್ಯಾನ್ ನಂಬರ್, ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ.
ಆಧಾರ್ ಯಾವುದಕ್ಕೆ ಬೇಡ?
1. ಖಾಸಗಿ ಸಂಸ್ಥೆಗಳು ಆಧಾರ್ ಕೇಳುವಂತಿಲ್ಲ
2. ಆಧಾರ್ ಮಾಹಿತಿ ಅಥವಾ ದತ್ತಾಂಶವನ್ನು 6 ತಿಂಗಳಕ್ಕೂ ಹೆಚ್ಚಿನ ಕಾಲ ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ.
3. ಎಲ್ಲ ಬ್ಯಾಂಕ್‍ಗಳಿಗೆ ಆಧಾರ್ ಮಾಹಿತಿ ಕೊಡುವಂತಿಲ್ಲ.
4. ಸೆಕ್ಷನ್ 7ರ ಪ್ರಕಾರ ಶಾಲೆಗಳ ಪ್ರವೇಶಾತಿ ವೇಳೆ ಆಧಾರ್ ಕೊಡುವ ಅಗತ್ಯವಿಲ್ಲ.
5. ಸಿಬಿಎಸ್‍ಸಿ, ಯುಜಿಸಿ, ನೀಟ್ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ.
6. ಸಿಮ್ ಖರೀದಿ, ಪೇಟಿಎಂ, ಫೋನ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಆ್ಯಯಪ್ ಗಳಿಗೆ ಕಡ್ಡಾಯವಲ್ಲ.
7. ಸೆಕ್ಷನ್ 2(ಬಿ) ಅಕ್ರಮ ವಲಸಿಗರಿಗೆ ಆಧಾರ್ ಕೊಡುವಂತಿಲ್ಲ.
8. ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆಯಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv