ಲಂಡನ್: 12 ವರ್ಷಗಳ ವರ್ಷಗಳ ಹಿಂದೆ ಬೆರಳಿಗೆ ತೊಡಿಸಿದ್ದ ಉಂಗುರ ಕಳೆದು ಹೋಗಿದ್ದು, ಈಗ ಯುವತಿ ಸೀನಿದಾಗ ಮೂಗಿನಲ್ಲಿ ಪತ್ತೆಯಾಗಿರುವ ವಿಲಕ್ಷಣ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ.
ಬ್ಯೂಟಿಷಿಯನ್ ಅಬಿಗೈಲ್ ಥಾಂಪ್ಸನ್ ಎಂಬಾಕೆ ತನ್ನ ಎಂಟನೇ ವಯಸ್ಸಿನಲ್ಲಿ ಬೆಳ್ಳಿಯ ರಿಂಗ್ ಕಳೆದುಕೊಂಡಿದ್ದಳು. ಉಂಗುರ ಕಳೆದು ಹೋದ ಬಳಿಕ ಮನೆಯಲ್ಲಿ ಹುಡುಕಾಡಿದ್ದಾರೆ. ಆದರೆ ಉಂಗುರ ಸಿಕ್ಕಿರಲಿಲ್ಲ. ಕೊನೆಗೆ ಯಾರೋ ಕಳ್ಳತನ ಮಾಡಿದ್ದಾರೆ ಎಂದು ಸುಮ್ಮನಾಗಿದ್ದರು. ಬಹುಕಾಲ ನಂತರ ಅಂದರೆ ಬರೋಬ್ಬರಿ 12 ವರ್ಷಗಳ ಬಳಿಕ ಥಮ್ಸ್ಪಾನ್ ಸೀನಿದಾಗ ಮೂಗಿನಿಂದ ಏನೋ ಹೊರಗೆ ಬಂದಿದೆ. ಆಗ ಅದನ್ನು ಎತ್ತಿಕೊಂಡು ನೋಡಿದಾಗ ಕಳೆದು ಹೋಗಿದ್ದ ಬೆಳ್ಳಿ ಉಂಗುರ ಅಚ್ಚರಿಯ ರೀತಿಯಲ್ಲಿ ಮರಳಿ ಸಿಕ್ಕಿದೆ.
Advertisement
Advertisement
2017 ರಲ್ಲಿ ಎಂಟನೇ ವರ್ಷದ ಹುಟ್ಟುಹಬ್ಬಕ್ಕೆ ನನ್ನ ತಾಯಿ ಉಡುಗೊರೆಯಾಗಿ ಬೆಳ್ಳಿ ಉಂಗುರ ಕೊಟ್ಟಿದ್ದರು. ಆದರೆ ಬಾಲ್ಯದಲ್ಲಿಯೇ ಕೆಲವು ತಿಂಗಳ ಬಳಿಕ ಅದು ಕಳೆದು ಹೋಗಿತ್ತು. ಆದರೆ ಅದು ನನ್ನ ಮೂಗಿನಲ್ಲಿ ಸಿಕ್ಕಿಕೊಂಡಿರುತ್ತದೆ ಅಂತ ನಾನು ಎಂದಿಗೂ ಅಂದುಕೊಂಡಿರಲಿಲ್ಲ ಎಂದು ಅಬಿಗೈಲ್ ಥಾಂಪ್ಸನ್ ಹೇಳಿದ್ದಾರೆ.
Advertisement
ನಾನು ಯಾವಾಗಲೂ ಕೆಲವು ಸ್ನೇಹಿತರ ಜೊತೆ ನನ್ನ ಹಾಸಿಗೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದೆ. ಆಗ ಅವರಲ್ಲಿ ಒಬ್ಬರು ನನ್ನ ಉಂಗುರವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಭಾವಿಸಿದ್ದೆ. ನಾನು ಎಂದಿನಂತೆ ಸೋಪಾ ಮೇಲೆ ಕುಳಿತ್ತಿದ್ದೆ. ಆಗ ನನಗೆ ತೀವ್ರ ಶೀತವಾಗಿದ್ದ ಕಾರಣ ಜೋರಾಗಿ ಸೀನಿದೆ. ಆಗ ಮೂಗಿನಿಂದ ಯಾವುದೋ ವಸ್ತು ಬಂದಂತೆ ಅನ್ನಿಸಿತು. ಬಳಿಕ ಅದನ್ನು ಎತ್ತಿಕೊಂಡು ನಾನು ಸೂಕ್ಷ್ಮವಾಗಿ ಗಮನಿಸಿದೆ. ಆದರೆ ಅದೇನೆಂಬುದು ನನಗೆ ತಿಳಿಯಲಿಲ್ಲ. ಬಳಿಕ ನಾನು ನನ್ನ ತಾಯಿಯನ್ನು ಕರೆದು ತೋರಿಸಿದೆ. ಆಗ ಅವರು ಅದನ್ನು ಪರಿಶೀಲನೆ ಮಾಡಿ 12 ವರ್ಷಗಳ ಹಿಂದೆ ಕಳೆದು ಹೋಗಿದ್ದ ನಿನ್ನ ಉಂಗುರ ಮತ್ತೆ ಸಿಕ್ಕಿದೆ ಎಂದರು. ನಿಜಕ್ಕೂ ನನಗೆ ಅಚ್ಚರಿಯಾಯಿತು ಎಂದು ಥಾಂಪ್ಸನ್ ತಿಳಿಸಿದ್ದಾರೆ.
Advertisement
ಬಾಲಕಿಯಾಗಿದ್ದ ಸಮಯದಲ್ಲಿ ಅಬಿಗೈಲ್ ಥಾಂಪ್ಸನ್ ಮೂಗಿನಲ್ಲಿ ಬೆರಳಿಟ್ಟುಕೊಂಡಿದ್ದ ವೇಳೆ ಉಂಗುರ ಒಳಗೆ ಸಿಕ್ಕಿ ಹಾಕಿಕೊಂಡಿರಬಹುದೆಂದು ಎಂದು ಹೇಳಲಾಗುತ್ತಿದೆ. ಅಚ್ಚರಿಯ ಎಂದರೆ 2007 ರಿಂದ ಇಲ್ಲಿವರೆಗೂ ಉಂಗುರ ಮೂಗಿನಲ್ಲೇ ಇದ್ದರೂ ಥಾಂಪ್ಸನ್ ಗೆ ಯಾವುದೇ ನೋವು ಮತ್ತು ಉಸಿರಾಟದ ತೊಂದರೆಯಾಗಿರಲಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv