ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಡುಪಿಯಿಂದ ಬೆಳ್ಳಿಯ ರಥ (Silver Chariot) ಹೊರಟಿದೆ. ಕುಂದಾಪುರ ತಾಲೂಕಿನ ಕೋಟೇಶ್ವರ ಶಿಲ್ಪಕಲಾ ಕೇಂದ್ರದಲ್ಲಿ ಬೆಳ್ಳಿ ರಥವನ್ನು ರಚಿಸಲಾಗಿದೆ.
ಸುಳ್ಯ ಕೆವಿಜಿ ವಿದ್ಯಾಸಂಸ್ಥೆ ಈ ರಥವನ್ನು ಕುಕ್ಕೆಗೆ ಸಮರ್ಪಣೆ ಮಾಡುತ್ತಿದೆ. 110 ಕೆ.ಜಿ ತೂಕದ ಬೆಳ್ಳಿಯಿಂದ 14 ಅಡಿ ಎತ್ತರದ ರಥದ ನಿರ್ಮಾಣವನ್ನು ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜ ಗೋಪಾಲಾಚಾರ್ಯರು ಮಾಡಿದ್ದಾರೆ. ಇಂದು ಮೆರವಣಿಗೆಯ ಮೂಲಕ ರಥವನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ (Kukke Subrahmanya) ತೆಗೆದುಕೊಂಡು ಹೋಗಲಾಯಿತು. ಇದನ್ನೂ ಓದಿ: ಮದುವೆಗಾಗಿ ಅಲ್ಲ, ಕ್ಷೇತ್ರದ ಕೆಲಸಕ್ಕೆ ಓಡಾಡಲು ಕಾರು ಬೇಕು ಅಂತ ಕೇಳಿದ್ದೆ: ಡಿಕೆಶಿಗೆ ತೇಜಸ್ವಿ ಸೂರ್ಯ ಟಾಂಗ್
ಪ್ರಮುಖ ಕ್ಷೇತ್ರಗಳು, ಜಂಕ್ಷನ್‌ಗಳಲ್ಲಿ ವಿಶೇಷ ಪೂಜೆ ಮೂಲಕ ರಥಕ್ಕೆ ಸ್ವಾಗತ ಮಾಡಲಾಯಿತು. ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬೆಳ್ಳಿ ರಥವನ್ನು ಬರಮಾಡಿಕೊಂಡು, ಪೂಜೆ ನೆರವೇರಿಸಲಾಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೇರಿದಂತೆ ನೂರಾರು ಭಕ್ತರು ರಥವನ್ನು ಮಂಗಳೂರಿಗೆ ಬೀಳ್ಕೊಟ್ಟರು.

