ಮೈಸೂರು: ರಾಜ್ಯದ ಮಹಿಳೆಯರಿಗೆ ವರಮಹಾಲಕ್ಷೀ ಹಬ್ಬಕ್ಕೆ ರೇಷ್ಮೆ ಇಲಾಖೆ ಬಂಪರ್ ಕೊಡುಗೆ ನೀಡುತ್ತಿದೆ. 10 ಸಾವಿರ ರೂ. ಬೆಲೆ ಬಾಳುವ ಮೈಸೂರು ಸಿಲ್ಕ್ ಸೀರೆಯನ್ನು ಹಬ್ಬದ ಕೊಡುಗೆ ಆಗಿ 4,500 ರೂ.ಗೆ ಮಾರಾಟ ಮಾಡಲು ಮುಂದಾಗಿದೆ.
ಮೈಸೂರಿನಲ್ಲಿ ಮಾತನಾಡಿದ ರೇಷ್ಮೆ ಮತ್ತು ಪ್ರವಾಸ್ಯೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ಸಿಲ್ಕ್ ಸೀರೆ ಮಧ್ಯಮ ವರ್ಗದವರಿಗೆ ಸಿಗುವುದಿಲ್ಲ ಎಂಬ ಆರೋಪ ಇದೆ. ಈ ಕಾರಣದಿಂದ ರಾಜ್ಯ ಸರ್ಕಾರದಿಂದ ಹೊಸ ಕೊಡುಗೆ ನೀಡುತ್ತಿದ್ದೇವೆ. ರಾಜ್ಯಾದ್ಯಂತ ಇರುವ ನಮ್ಮ ಮಳಿಗೆಗಳಲ್ಲಿ 4,500 ರೂ.ಗೆ ಮೈಸೂರು ಸಿಲ್ಕ್ ಸೀರೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ಸದ್ಯಕ್ಕೆ ವರ ಮಹಾಲಕ್ಷ್ಮಿ ಹಬ್ಬಕ್ಕೆ ಈ ಕೊಡುಗೆ ನೀಡಿದ್ದು, ನಂತರ ಮುಂದುವರೆಸುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ರಾಜ್ಯಾದ್ಯಂತ ಮೈಸೂರು ಸಿಲ್ಕ್ ಅಂಗಡಿ ತೆರೆಯುವ ಭರವಸೆ ನೀಡಿ, ಪ್ರವಾಸಿ ತಾಣಗಳಲ್ಲಿ ಅಂಗಡಿ ಇದ್ದರೆ ಅಭಿವೃದ್ಧಿ ಪಡಿಸುತ್ತೇವೆ ಎಂದರು.
Advertisement
ಉಸ್ತುವಾರಿ ಸಚಿವ ಸ್ಥಾನ ಆಕ್ಷಾಂಕ್ಷಿ ಅಲ್ಲ: ಇದೇ ವೇಳೆ ನಾನು ಮೈಸೂರು ಉಸ್ತುವಾರಿ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸಾರಾ ಮಹೇಶ್ ಸ್ಪಷ್ಟಪಡಿಸಿದ್ದು, ನಾನಂತೂ ಉಸ್ತುವಾರಿ ಸಚಿವ ಸ್ಥಾನದ ಆಕಾಂಕ್ಷಿ ರೇಸ್‍ನಲ್ಲಿ ಇಲ್ಲ. ಯಾರಿಗೆ ಉಸ್ತುವಾರಿ ಕೊಟ್ಟರೂ ನನಗೆ ಅಭ್ಯಂತರ ಇಲ್ಲ. ಸಿಎಂ ಕುಮಾರಸ್ವಾಮಿ ಯಾರನ್ನು ಮೈಸೂರು ಉಸ್ತುವಾರಿ ಮಾಡುತ್ತಾರೆ ಎಂದು ಕಾದು ನೋಡುತ್ತೇನೆ. ಒಂದು ವೇಳೆ ಸರ್ಕಾರ ನನಗೆ ಉಸ್ತುವಾರಿ ಕೊಟ್ಟರೆ ಆಗ ಯೋಚನೆ ಮಾಡುತ್ತೇನೆ ಎಂದರು.