ಸಾಂದರ್ಭಿಕ ಚಿತ್ರ
ಬೆಂಗಳೂರು: ಮದ್ರಾಸ್ ಐ, ರೆಡ್ ಐ ಅಂತೆಲ್ಲ ಕಣ್ಣಿನ ಸಮಸ್ಯೆ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಆದರೆ ಈಗ ಬೆಂಗಳೂರಿಗೆ ಹೊಸ ಕಣ್ಣಿನ ಕಾಯಿಲೆ ಬಂದಿದೆ.
Advertisement
ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವಾಗ ಕಣ್ಣು ಉರಿ, ಮಧ್ಯಾಹ್ನ ಹಾಗೂ ಇಳಿಸಂಜೆ ಹೊತ್ತಿನಲ್ಲಿ ಕೆಲವೊಮ್ಮೆ ಕಣ್ಣು ಕೆಂಪಾಗಾಗೋದು, ಉರಿಯೋದು ಸುಮ್ ಸುಮ್ನೆ ಕಣ್ಣಲ್ಲಿ ನೀರು ಬರುತ್ತಿದ್ದರೆ ಇದು ಬೆಂಗಳೂರು ಐ ಎಫೆಕ್ಟ್ ಆಗಿರುತ್ತದೆ.
Advertisement
Advertisement
ಸಿಲಿಕಾನ್ ಸಿಟಿ ಜನರಿಗೆ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು ಇದಕ್ಕೆ ಕಣ್ಣಿನ ಡಾಕ್ಟರ್‍ಗಳೇ ಬೆಂಗಳೂರು ಐ ಎನ್ನುವ ಹೆಸರಿಟ್ಟಿದ್ದಾರೆ. ವಯಸ್ಸಿನ ವ್ಯತ್ಯಾಸವಿಲ್ಲದೇ ಈ ಸಮಸ್ಯೆ ಎಲ್ಲರಿಗೆ ಕಾಡಲು ಶುರುವಾಗಿದೆ. ಅತಿಯಾದ ವಾಯುಮಾಲಿನ್ಯದ ಕಾರಣ ಬೆಂಗಳೂರಿನಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಳ್ಳಂಬೆಳಗ್ಗೆ ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿರುತ್ತೆ. ಹೀಗಾಗಿ ವಾಕಿಂಗ್ ಹೋಗುವಾಗ ಯಾವುದಕ್ಕೂ ಹುಷಾರಾಗಿರಿ. ಪಾರ್ಕ್, ಗಿಡಮರಗಳು ಹೆಚ್ಚಾಗಿರೋ ಕಡೆ ವಾಕಿಂಗ್ ಹೋದರೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಇನ್ನು ಮುಂದೆ ಹೊರಗಡೆ ಕಾಲಿಡುವಾಗ ಕಣ್ಣಿಗೊಂದು ಕನ್ನಡಕ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರು ಐಗೆ ಬಲಿಯಾಗುವ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಳ್ಳಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv