ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಫ್ಲೈಓವರ್‌ನಲ್ಲಿ ಇಂದು ಮುಂಜಾನೆಯೇ ಬೈಕ್ ಸವಾರ ಮೃತಪಟ್ಟಿದ್ದಾನೆ.
ಬೆಂಗಳೂರಿನ ಜಕ್ಕೂರು ಏರೊಡ್ರಮ್ ಬಳಿ ಘಟನೆ ನಡೆದಿದ್ದು, ಏರ್‌ಪೋರ್ಟ್ ಫ್ಲೈಓವರ್ ಮೇಲೆ ಬೈಕ್‍ನಲ್ಲಿ 45 ವರ್ಷದ ಸವಾರ ಮತ್ತು ಹಿಂಬದಿಯಲ್ಲಿ 12 ವರ್ಷದ ಬಾಲಕ ಕುಳಿತುಕೊಂಡಿದ್ದ. ಬೈಕ್ ಎಡಬದಿಯಲ್ಲಿ ಹೋಗುತ್ತಿದ್ದರೂ ಕಾರೊಂದು ರಭಸವಾಗಿ ಬಂದು ಗುದ್ದಿದೆ. ಪರಿಣಾಮ ವಾಹನ ಸವಾರ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಕೊನೆಯುಸಿರೆಳೆದಿದ್ದಾನೆ. ಬಾಲಕನಿಗೆ ಗಂಭೀರ ಗಾಯವಾಗಿದೆ.
Advertisement
ಆಕ್ಸಿಡೆಂಟ್ ಆದ ಸ್ಥಳದಿಂದ 200 ಮೀಟರ್ ದೂರದಲ್ಲಿ ಬೈಕ್ ಬಿದ್ದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಪಘಾತಕ್ಕೆ ಒಳಗಾದವರ ಗುರುತು ಪತ್ತೆ ಮಾಡುತ್ತಿದ್ದಾರೆ. ಕೆ.ಆರ್.ಪುರಂ ಬಳಿ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಾರೊಳಗೆ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ!
Advertisement
Advertisement
ನಡೆದಿದ್ದೇನು?
ಮೃತ ವ್ಯಕ್ತಿ ಗೋವಿಂದಪ್ಪ(44) ಎಂದು ಗುರುತಿಸಲಾಗಿದ್ದು, ಅವರು ಜಕ್ಕೂರು ಲೇಔಟ್ ನಿವಾಸಿಯಾಗಿದ್ದರು. ಗೋವಿಂದಪ್ಪ ಅವರು ಸಂಬಂಧಿಕರ ಮಗ ಸಂಜಯ್ ಜಕ್ಕೂರು ಏರೋಡ್ರಮ್ ತೋರಿಸಲು ಏರ್‌ಪೋರ್ಟ್ ಫ್ಲೈಓವರ್ ಬಳಿ ಬಂದಿದ್ದರು. ಈ ವೇಳೆ ಗೋವಿಂದಪ್ಪ ಫ್ಲೈಓವರ್ ಮೇಲೆ ಮೊಪೆಡ್ ಬೈಕ್ ನಿಲ್ಲಿಸಿ ಸಂಜಯ್‍ಗೆ ಏರೋಡ್ರಮ್ ತೋರಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಮೊಪೆಡ್‍ಗೆ ಡಿಕ್ಕಿ ಹೊಡೆದಿದೆ.
Advertisement
ಡಿಕ್ಕಿ ಹೊಡೆದ ರಭಸಕ್ಕೆ ಗೋವಿಂದಪ್ಪ ಫ್ಲೈಓವರ್ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಸಂಜಯ್‍ಗೆ ಗಂಭೀರ ಗಾಯವಾಗಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ವರುಣ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ಐವರು ಸ್ನೇಹಿತರ ಜೊತೆ ವರುಣ್ ಬರುತ್ತಿದ್ದರು. ಇವರು ಜೆಸಿ ನಗರದ ಮೆಡಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಿಮಾಚಲ ಉಪಸಭಾಧ್ಯಕ್ಷರಿಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಆರೋಪ