ನವದೆಹಲಿ: ಚೀನಾ ರಾಯಭಾರಿ ಲುವೋ ಝವೋಹುಯಿಯನ್ನು ದೆಹಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಶನಿವಾರ ರಾಹುಲ್ ಗಾಂಧಿ ಜೊತೆ `ಪ್ರಸಕ್ತ ಇಂಡೋ-ಚೀನಾ ಸಂಬಂಧ’ಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಚೀನಾ ರಾಯಭಾರಿ ಕಚೇರಿಯ ವೆಬ್‍ಸೈಟ್‍ನಲ್ಲಿ ಪ್ರಕಟವಾಗಿತ್ತು.
Advertisement
ಉಭಯ ರಾಷ್ಟ್ರಗಳ ನಡುವಿನ ಈಗಿನ ಸಂಬಂಧ ಹದಗೆಟ್ಟಿರೋ ಸಮಯದಲ್ಲಿ ರಾಹುಲ್ ಭೇಟಿಯನ್ನ ಬಿಜೆಪಿ ನಾಯಕರು ಉಗ್ರವಾಗಿ ಟೀಕಿಸಿದ್ದರು. ವಿವಾದ ಜಾಸ್ತಿ ಆಗುತ್ತಿದ್ದಂತೆ ಬೆನ್ನಲ್ಲೇ ರಾಹುಲ್ ಭೇಟಿಯಾಗಿದ್ದಾರೆ ಎನ್ನುವ ಹೇಳಿಕೆಯನ್ನು ಚೀನಾ ರಾಯಭಾರಿ ಕಚೇರಿ ವೆಬ್‍ಸೈಟ್ ಡಿಲೀಟ್ ಮಾಡಿತ್ತು.
Advertisement
ಬೆಳಗ್ಗೆ ರಾಹುಲ್ ಭೇಟಿಯ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ನಿರಾಕರಿಸಿ ಇದು ಸುಳ್ಳು ಸುದ್ದಿ ಎದ್ದಿದ್ದರು. ಆದರೆ @OfficeOfRG ಖಾತೆಯಿಂದ ರಾಹುಲ್ ಗಾಂಧಿ ಅವರು ಅವರೇ ಭೇಟಿಯಾಗಿದ್ದು ನಿಜ ಎಂದು ಟ್ವೀಟ್ ಪ್ರಕಟವಾಯಿತು.
Advertisement
ವಿವಾದ ತಣ್ಣಗಾಗಿಸುವ ಸಲುವಾಗಿ ಚೀನಾ ಮಾತ್ರವಲ್ಲ ಭೂತಾನ್ ರಾಯಭಾರಿಯನ್ನೂ ಭೇಟಿಯಾಗಿದ್ದಾಗಿ ಟ್ವಿಟ್ಟರ್‍ನಲ್ಲಿ ಹೇಳಿಕೆ ಬಂತು. ಇದರ ಬೆನ್ನಲ್ಲೇ ಎಐಸಿಸಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಹೊತ್ತಿರುವ ರಮ್ಯಾ ಅವರು ಚೀನಾ ಅತಿಕ್ರಮಣದ ಮಧ್ಯೆಯೂ ಮೋದಿ ಅವರು ಜಿನ್‍ಪಿಂಗ್ ಜೊತೆ ಹಸ್ತಲಾಘವ ಮಾಡಿದ್ದಾರೆ. ಅಂಥದರಲ್ಲಿ ರಾಹುಲ್ ಭೇಟಿಯಲ್ಲಿ ವಿವಾದ ಏನಿದೆ ಪ್ರಶ್ನಿಸಿ ಕಾಂಗ್ರೆಸ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
ಇದೆಲ್ಲದರ ಮಧ್ಯೆ ಪಾಕ್ ಬಯಸಿದರೆ ಪಿಓಕೆ ಮಾತ್ರವಲ್ಲ ಭಾರತ ಆಕ್ರಮಿತ ಕಾಶ್ಮೀರಕ್ಕೂ ಸೇನೆ ನುಗ್ಗಿಸ್ತೇವೆ ಅಂತ ಚೀನಾ ಮಿಲಿಟರಿ ತಜ್ಞರ ಹೇಳಿಕೆಯನ್ನ ಚೀನಾದ ಸರ್ಕಾರಿ `ಗ್ಲೋಬಲ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
It is my job to be informed on critical issues. I met the Chinese Ambassador, Ex-NSA, Congress leaders from NE & the Bhutanese Ambassador
— Rahul Gandhi (@RahulGandhi) July 10, 2017
If Govt is so concerned abt me meeting an Amb,they shld explain why 3Ministers are availing Chinese hospitality while the border issue is on pic.twitter.com/4FCuu9SiAe
— Rahul Gandhi (@RahulGandhi) July 10, 2017
And for the record I am not the guy sitting on the swing while a thousand Chinese troops had physically entered India pic.twitter.com/THG4sULJJC
— Rahul Gandhi (@RahulGandhi) July 10, 2017
Nothing wrong with Rahul Gandhi meeting ambassador of any country per protocol. But why deny it and then reluctantly accept, when cornered?
— Amit Malviya (@amitmalviya) July 10, 2017
Congress's clarification on Rahul Gandhi's meeting with the Chinese envoy is evasive and muddled. They should tell us if he met – YES or NO?
— Amit Malviya (@amitmalviya) July 10, 2017
Even if Congress VP had met the Chinese Ambassador I don't see it as an issue, but the PM not flagging it in private or public is an issue
— Ramya/Divya Spandana (@divyaspandana) July 10, 2017
https://twitter.com/praveen_bajpai/status/884331752587767808