ಗ್ಯಾಂಗ್ಟಾಕ್: ಲೋಕಸಭಾ ಚುನಾವಣೆ ಫಲಿತಾಂಶ ಬರುವ ಮುನ್ನವೇ ಇಂದು ಸಿಕ್ಕಿಂ (Sikkim) ಮತ್ತು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result 2024) ಹೊರಬಿದ್ದಿದೆ.
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) ಕ್ಲೀನ್ ಸ್ವೀಪ್ ಮಾಡಿದೆ. 32 ಸ್ಥಾನಗಳ ಪೈಕಿ ಬರೋಬ್ಬರಿ 31ರಲ್ಲಿ ಗೆದ್ದು ದಿಗ್ವಿಜಯ ಸಾಧಿಸಿದೆ. ಎಸ್‌ಡಿಎಫ್ ಪಕ್ಷ ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿದೆ. ಸಿಕ್ಕಿಂನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು ಆದರೆ ಈ ಎರಡೂ ಪಕ್ಷಗಳು ಖಾತೆಯನ್ನೇ ತೆರೆದಿಲ್ಲ.
Advertisement
Advertisement
ಸಿಕ್ಕಿಂನಲ್ಲಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‍ಕೆಎಂ ಮತ್ತು ಮಾಜಿ ಸಿಎಂ ಪವನ್ ಕುಮಾರ್ ಚಾಮ್ಲಿಂಗ್ (Pawan Kumar Chamling) ನೇತೃತ್ವದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ನಡುವೆ ಸ್ಪರ್ಧೆ ಏರ್ಪಟ್ಟಿತ್ತು. 146 ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಅವರ ಪತ್ನಿ ಕೃಷ್ಣ ಕುಮಾರಿ ರೈ, ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ಮಾಜಿ ಭಾರತೀಯ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಮತ್ತು ಬಿಜೆಪಿಯ ನರೇಂದ್ರ ಕುಮಾರ್ ಸುಬ್ಬಾ ಪ್ರಮುಖ ಅಭ್ಯರ್ಥಿಗಳಾಗಿದ್ದರು. ಬೈಚುಂಗ್ ಭುಟಿಯಾ ಚುನಾವಣೆಯಲ್ಲಿ ಸೋತಿದ್ದಾರೆ. 2019 ರಲ್ಲಿ ಪ್ರೇಮ್ ಸಿಂಗ್ ತಮಾಂಗ್ (Prem Singh Tamang) ನೇತೃತ್ವದ ಎಸ್‍ಕೆಎಂ 17 ಸ್ಥಾನಗಳನ್ನು ಗೆದ್ದರೆ, ಎಸ್‍ಡಿಎಫ್ 15 ಸ್ಥಾನಗಳನ್ನು ಗೆದ್ದಿತ್ತು. ಇದನ್ನೂ ಓದಿ: ವಿಧಾನಸಭಾ ಚುನಾವಣೆ 2024- ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ
Advertisement
Arunachal Pradesh CM Pema Khandu called on Arunachal Pradesh Governor Lt. General KT Parnaik (Retd.) at Raj Bhavan, Itanagar and tendered his resignation. The Governor has accepted the resignation and requested Pema Khandu and the Council of Ministers to continue until the new… pic.twitter.com/5LBqXaLwb8
— ANI (@ANI) June 2, 2024
Advertisement
ಇತ್ತ ಅರುಣಾಚಲದಲ್ಲಿ (Arunachalpradesh) ಬಿಜೆಪಿ ಮತ್ತದರ ಮಿತ್ರಪಕ್ಷ ಕಾನ್ರಡ್ ಸಂಗ್ಮಾ ನೇತೃತ್ವದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ 42ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯ ಪೆಮಾಖಂಡು ಮೂರನೇ ಬಾರಿ ಸಿಎಂ ಆಗೋದು ಖಚಿತವಾಗಿದೆ. 60 ಸ್ಥಾನಗಳ ಸದಸ್ಯ ಬಲದ ಅರುಣಾಚಲದಲ್ಲಿ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ರು.