ಗ್ಯಾಂಗ್ಟಾಕ್: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) ಭಾನುವಾರ ಹಿಮಾಲಯ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ.
ಸಿಕ್ಕಿಂ ವಿಧಾನಸಭಾ ಚುನಾವಣೆ (Sikkim Assembly Election Results 2024) ಮತ ಎಣಿಕೆ ಭಾನುವಾರ ನಡೆಯಿತು. 32 ಸದಸ್ಯ ಬಲದ ವಿಧಾನಸಭೆಯಲ್ಲಿ 26 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸುವ ಮೂಲಕ ಎಸ್‌ಕೆಎಂ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ: ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ – 60ರ ಪೈಕಿ 47 ಸ್ಥಾನಗಳಲ್ಲಿ ಮುನ್ನಡೆ
ಮತ ಎಣಿಕೆ ಇನ್ನೂ ನಡೆಯುತ್ತಿದೆ. ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ (Prem Singh Tamang) ನೇತೃತ್ವದ ಎಸ್‌ಕೆಎಂ ಇತರ 10 ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದೆ. ಸಿಎಂ ತಮಾಂಗ್ ಅವರು ರೆನಾಕ್ ಕ್ಷೇತ್ರದಿಂದ 7,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಸೋರೆಂಗ್ ಚಕುಂಗ್ ಕ್ಷೇತ್ರದಲ್ಲೂ ಅವರು ಮುನ್ನಡೆ ಸಾಧಿಸಿದ್ದಾರೆ.
32 ಸ್ಥಾನಗಳ ಪೈಕಿ ಎಸ್‌ಕೆಎಂ 26ರಲ್ಲಿ ಗೆದ್ದು ಇನ್ನೂ ಐದರಲ್ಲಿ ಮುನ್ನಡೆ ಸಾಧಿಸಿದೆ. ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಕೇವಲ ಒಂದು ಸ್ಥಾನವನ್ನು ಗೆದ್ದಿದೆ. ಹಾಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ನಾನು ಸಿಕ್ಕಿಂ ಜನರಿಗೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ನಾವು ಜನರಿಗಾಗಿ ಕೆಲಸ ಮಾಡಿದ್ದೇವೆ. ಅದಕ್ಕಾಗಿಯೇ ನಾವು ಗೆದ್ದಿದ್ದೇವೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಇದು ಎಕ್ಸಿಟ್ ಪೋಲ್ ಅಲ್ಲ, ಮೋದಿ ಫ್ಯಾಂಟಸಿ ಪೋಲ್ – ʻಇಂಡಿಯಾʼ ಒಕ್ಕೂಟಕ್ಕೆ 295 ಸೀಟ್ ಪಕ್ಕಾ: ರಾಗಾ ವಿಶ್ವಾಸ
ಎಸ್‌ಡಿಎಫ್ ನಾಯಕ ಪವನ್ ಚಾಮ್ಲಿಂಗ್ ಅವರು ದೇಶದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದು, ಅವರು ಸ್ಪರ್ಧಿಸಿದ ಎರಡೂ ಸ್ಥಾನಗಳಲ್ಲಿ ಸೋತಿದ್ದಾರೆ.