ನವದೆಹಲಿ: ವಿಮಾನಯಾನ ಭದ್ರತಾ ನಿಯಂತ್ರಕ ಬಿಸಿಎಎಸ್(ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ) ಸಿಖ್ ವಾಯುಯಾನ ವಲಯದ ಉದ್ಯೋಗಿಗಳಿಗೆ ವಿಮಾನ ನಿಲ್ದಾಣದ ಆವರಣದೊಳಗೆ ಸಿಖ್‍ನ ಕಿರ್ಪನ್ ತೆಗೆದುಕೊಂಡು ಹೋಗಬಹುದು ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ.
ಬಿಸಿಎಎಸ್ ಮಾರ್ಚ್ 4 ರಂದು, ವಿಮಾನ ನಿಲ್ದಾಣದೊಳಗೆ ಸಿಖ್ ಧರ್ಮದವರು ಕಿರ್ಪನ್ ತರಲು ನಿಷೇಧವನ್ನು ಹೇರಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಾರ್ಚ್ 12 ರಂದು, ಬಿಸಿಎಎಸ್ ಈ ಬಗ್ಗೆ ನಿಷೇಧವನ್ನು ತೆಗೆದುಹಾಕಿತು. ಕಿರ್ಪಾನ್ ಸಿಖ್ ಧರ್ಮದ ಒಂದು ಆಚರಣೆ ಮತ್ತು ಸಂಪ್ರದಾಯವಾಗಿದೆ. ಈ ಹಿನ್ನೆಲೆ ಕಿರ್ಪಾನ್‍ನನ್ನು ಸಿಖ್ ಪ್ರಯಾಣಿಕರು ಮಾತ್ರ ಸಾಗಿಸಬಹುದು. ಆದರೆ ಬ್ಲೇಡ್‍ನ ಉದ್ದವು ಆರು ಇಂಚುಗಳನ್ನು ಮೀರಬಾರದು ಮತ್ತು ಒಟ್ಟು ಉದ್ದವು ಒಂಬತ್ತು ಇಂಚುಗಳನ್ನು ಮೀರಬಾರದು ಎಂದು ಆದೇಶವನ್ನು ಹೊರಡಿಸಲಾಗಿತ್ತು. ಇದನ್ನೂ ಓದಿ: ದಿಢೀರ್ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ಕೊಟ್ಟು ಕುತೂಹಲ ಕೆರಳಿಸಿದ ವಿಜಯೇಂದ್ರ
Advertisement
Advertisement
ಭಾರತದೊಳಗೆ ಭಾರತೀಯ ವಿಮಾನದಲ್ಲಿ ಪ್ರಯಾಣಿಸುವಾಗ ಕಿರ್ಪನ್‍ಗೆ ಅನುಮತಿಸಲಾಗಿದೆ. ಈ ವಿನಾಯಿತಿಯು ಸಿಖ್ ಪ್ರಯಾಣಿಕರಿಗೆ ಮಾತ್ರ. ವಿಮಾನ ನಿಲ್ದಾಣದಲ್ಲಿ(ಸಿಖ್ ಸೇರಿದಂತೆ) ಮತ್ತು ಯಾವುದೇ ಟರ್ಮಿನಲ್, ದೇಶೀಯ ಅಥವಾ ಅಂತರಾಷ್ಟ್ರೀಯ ಟರ್ಮಿನಲ್‍ನಲ್ಲಿ ಕೆಲಸ ಮಾಡುವ ಯಾವುದೇ ಉದ್ಯೋಗಿಗಳಿಗೆ ಕಿರ್ಪನ್ ವೈಯಕ್ತಿಕವಾಗಿ ಸಾಗಿಸಲು ಅನುಮತಿಸಲಾಗುವುದಿಲ್ಲ ಎಂದು ದಾಖಲೆಗಳಲ್ಲಿ ತಿಳಿಸಲಾಗಿದೆ.
Advertisement
Advertisement
ಮಾರ್ಚ್ 9 ರಂದು, ಎಸ್‍ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಅವರು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದು, ಮಾರ್ಚ್ 4 ರ ಆದೇಶವು ಸಿಖ್ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಿವಾಲ್ವರ್ ಬಳಸಿ ನಾಲ್ಕು ತಿಂಗಳ ಗರ್ಭಿಣಿ ಪತ್ನಿಗೆ ಗುಂಡು ಹಾರಿಸಿದ ಕಾನ್‍ಸ್ಟೆಬಲ್
ಕಿರ್ಪನ್ ಅಂದರೆ ಏನು?
ಕಿರ್ಪನ್ ಎಂಬುದು ಒಂದು ಧಾರ್ಮಿಕ ಚಾಕುವಾಗಿದೆ. ಇದು ವಿಧ್ಯುಕ್ತ ಚಾಕುವಾಗಿದ್ದು, ಪ್ರಪಂಚದಾದ್ಯಂತದ ಸಿಖ್ಖರ ಸಾಂಪ್ರದಾಯಿಕ ದೈನಂದಿನ ಉಡುಪಿನ ಭಾಗವಾಗಿದೆ. ಇದನ್ನು ಸಿಖ್ ಧಾರ್ಮಿಕ ಗ್ರಂಥದಲ್ಲಿಯೂ ಬರೆದಿದ್ದು, ಸಿಖ್‍ರ ಅವಿಭಾಜ್ಯ ಅಂಗವಾಗಿದೆ.