ರಾಮನಗರ್: ಸಿಖ್ ಪೊಲೀಸ್ ಅಧಿಕಾರಿಯೊಬ್ಬರು ಉದ್ರಿಕ್ತ ಜನರು ಗುಂಪೊಂದು ಮುಸ್ಲಿಂ ಯುವಕನಿಗೆ ಥಳಿಸುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಅತನನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಗಗನ್ ದೀಪ್ ಸಿಂಗ್ ಯುವಕನ ಜೀವ ಉಳಿಸಿದ ಪೊಲೀಸ್ ಅಧಿಕಾರಿ. ಉತ್ತರಾಖಂಡದ ರಾಮನಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ಕರ್ತವ್ಯದ ವೇಳೆ ಠಾಣೆಗೆ ಕರೆ ಬಂದ ತಕ್ಷಣ ಪ್ರತಿಕ್ರಿಯಿಸಿದ ಗಗನದೀಪ್ ಸಿಂಗ್ ಯವಕನನ್ನು ರಕ್ಷಿಸಿದ್ದಾರೆ.
Advertisement
It was heartening to see on Youtube the videos of a brave young Sikh police officer, Gagandeep Singh, saving the life of a Muslim youth who may have been lynched by a frenzied Hindutva mob had it not been for the courageous intervention of Gagandeep.
— Markandey Katju (@mkatju) May 25, 2018
Advertisement
ಏನಿದು ಘಟನೆ: ಮುಸ್ಲಿಂ ವ್ಯಕ್ತಿಯೊಬ್ಬ ಅನ್ಯಕೋಮಿನ ಯುವತಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಒಂದು ಕೋಮಿನ ಜನರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಸಾಕಷ್ಟು ಜನ ವ್ಯಕ್ತಿಯ ಸುತ್ತಲು ಸೇರಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.
Advertisement
ಈ ಕುರಿತು ಮಾಹಿತಿ ಪಡೆದ ಪೊಲೀಸ್ ಅಧಿಕಾರಿ ಗಗನ್ದೀಪ್ ಸಿಂಗ್ ಸ್ಥಳಕ್ಕೆ ಧಾವಿಸಿ ಉದ್ರಿಕ್ತ ಗುಂಪಿನ ಮಧ್ಯೆ ನುಗ್ಗಿ ಯುವಕನನ್ನು ರಕ್ಷಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Advertisement
https://twitter.com/akdwaaz/status/999687129797050370?