InternationalLatestMain Post

ಅಮೆರಿಕದಲ್ಲಿ ಸಿಖ್ ಪ್ರಜೆಯ ಮೇಲೆ ಗುಂಡಿನ ದಾಳಿ

– ದೇಶ ಬಿಟ್ಟು ಹೋಗುವಂತೆ ಘೋಷಣೆ

ನ್ಯೂಯಾರ್ಕ್: ಅಮೆರಿಕದ ಕಾನ್ಸಾಸ್ ಹಾಗೂ ಲ್ಯಾಂಕ್ಯಾಸ್ಟರ್‍ನಲ್ಲಿ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಇದೀಗ ಕೆಂಟ್ ನಗರದಲ್ಲಿ ಭಾರತೀಯ ಮೂಲದ ಸಿಖ್ ಪ್ರಜೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ.

39 ವರ್ಷದ ದೀಪ್ ರೈ ಅವರ ಮನೆಯ ಹೊರಗೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ನಿನ್ನ ದೇಶಕ್ಕೆ ವಾಪಸ್ ಹೋಗು ಎಂದು ಕೂಗಾಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

ಘಟನೆಯಲ್ಲಿ ದೀಪ್ ರೈ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ದೀಪ್ ರೈ, ಗುಂಡಿನ ದಾಳಿ ನಡೆಸಿದ ವ್ಯಕ್ತಿ 6 ಅಡಿ ಉದ್ದವಿದ್ದ. ಅರ್ಧ ಮುಖ ಮುಚ್ಚುವಂತೆ ಮಾಸ್ಕ್ ಧರಿಸಿದ್ದ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಕೆಂಟ್ ಪೊಲೀಸರು ಹೇಳಿದ್ದಾರೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತೀಯ ಮೂಲದ ಅಮೆರಿಕ ಪ್ರಜೆ ದೀಪ್ ರೈ ಮೇಲೆ ದಾಳಿ ನಡೆದಿರುವುದು ಕೇಳಿ ನೋವಾಯಿತು. ಅವರ ತಂದೆ ಸರ್ದಾರ್ ಹರ್ಪಲ್ ಜೊತೆ ಮಾತನಾಡಿದ್ದೇನೆ. ಅವರು ತಮ್ಮ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿಸಿದ್ದಾಗಿ ಹೇಳಿದ್ದಾರೆ.

ಕಳೆದ ತಿಂಗಳು ಕಾನ್ಸಾಸ್‍ನಲ್ಲಿ 32 ವರ್ಷದ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊತ್ಲಾ ಅವರು ಗುಂಡಿನ ದಾಳಿಗೆ ಬಲಿಯಾಗಿದ್ದರು. ಅಲ್ಲದೆ ಗುರುವಾರದಂದು ಸೌತ್ ಕ್ಯಾರೊಲಿನಾದ ಲ್ಯಾಂಕ್ಯಾಸ್ಟರ್‍ನಲ್ಲಿ 43 ವರ್ಷದ ಹರ್ನಿಶ್ ಪಟೇಲ್ ಅವರ ಮೇಲೆ ಗುಂಡಿನ ದಾಳಿ ನಡೆದು ಸಾವನ್ನಪ್ಪಿದ್ರು.

ಇದನ್ನೂ ಓದಿ: ಟೆಕ್ಕಿ ಆಯ್ತ, ಈಗ ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಹತ್ಯೆ

Leave a Reply

Your email address will not be published. Required fields are marked *

Back to top button