ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಯುವಕರ ಗುಂಪು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿದ್ದಾರೆ. ಈ ವಿಷಯದ ಕುರಿತು ಯುವತಿಯ ಕುಟುಂಬಸ್ಥರು ಪ್ರಧಾನಿ ಇಮ್ರಾನ್ ಖಾನ್ ಅವರ ಮೊರೆ ಹೋಗಿದ್ದಾರೆ.
ಗುರುವಾರ ಶಿರೋಮಣಿ ಅಕಾಲಿ ದಳ ಶಾಸಕ ಮಂಜಿಂದರ್ ಎಸ್ ಸಿರ್ಸಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯುವತಿಯ ಕುಟುಂಬಸ್ಥರು, ತನ್ನ ಸಹೋದರ ಹಾಗೂ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಸಿ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ಗುರುವಾರ ಅಪಹರಣ ಆದ ಯುವತಿ ನನ್ನ ಸಹೋದರಿ. ಇಸ್ಲಾಂ ಧರ್ಮವನ್ನು ಒಪ್ಪಲಿಲ್ಲ ಎಂದು ತನ್ನ ತಂದೆ ಹಾಗೂ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಸಹೋದರಿಯನ್ನು ಹಿಂತಿರುಗಿ ಕರೆದುಕೊಂಡು ಬರಲು ನಾನು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಜ್ವಾ ಅವರ ಬಳಿ ಸಹಾಯ ಕೇಳುತ್ತೇನೆ ಎಂದು ಯುವತಿಯ ಸಹೋದರ ಮನ್‍ಮೋಹನ್ ಸಿಂಗ್ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
Advertisement
Sikhs of Pakistan seek help from @ImranKhanPTI
I urge @narendramodi Ji & @DrSJaishankar Ji to raise this issue at global level bcos forced conversions happening in Pakistan have angered all the Sikhs
This issue must be taken up at @UN as it threatens Sikhs freedom of religion pic.twitter.com/lsDsKg4ZHZ
— Manjinder Singh Sirsa (@mssirsa) August 29, 2019
Advertisement
ಶಾಸಕ ಮಂಜಿಂದರ್ ಅವರು ಈ ವಿಡಿಯೋ ಟ್ವೀಟ್ ಮಾಡಿ ಅದಕ್ಕೆ, ಬಾಲಕಿಯರನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವ ವಿಷಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂದು ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಪಾಕಿಸ್ತಾನದಲ್ಲಿ ಸಿಖ್ ಧರ್ಮಕ್ಕೆ ಅಪಾಯವಿದೆ. ಆದ್ದರಿಂದ ಈ ವಿಷಯವನ್ನು ವಿಶ್ವಸಂಸ್ಥೆಯಲ್ಲೂ ಧ್ವನಿ ಎತ್ತಬೇಕು ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Look!
The expressions & the fearful voice of the girl does not match the words she is saying
Minorities are forced to convert in Pakistan and how their media is covering up the forced conversions showing such doctored videos@ImranKhanPTI @DrSJaishankar @ANI @republic @ZeeNews pic.twitter.com/LpOV6jBnGy
— Manjinder Singh Sirsa (@mssirsa) August 29, 2019
ಯುವತಿಯ ತಂದೆ ಭಗವಾನ್ ಸಿಂಗ್ ಅವರು ಗುರುದ್ವಾರದ ತಂಬು ಸಾಹೇಬರ ಮುಖ್ಯ ಗ್ರಂಥಿ(ಗುರುದ್ವಾರದಲ್ಲಿ ಗುರು ಗ್ರಂಥ ಸಾಹೀಬ್ ಓದುವ ವ್ಯಕ್ತಿ) ಆಗಿ ಕೆಲಸ ಮಾಡುತ್ತಿದ್ದಾರೆ. ದೂರನ್ನು ಹಿಂಪಡೆಯದಿದ್ದರೆ ಭೀಕರ ಪರಿಣಾಮ ಅನುಭವಿಸುತ್ತೀರಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇತ್ತ ಯುವಕರ ಗುಂಪು ವಿಡಿಯೋವೊಂದನ್ನು ವೈರಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವತಿ ತನ್ನ ಧರ್ಮವನ್ನು ಬದಲಾಯಿಸಿ ಮುಸ್ಲಿಂ ಯುವಕನ ಜೊತೆ ಮದುವೆಯಾಗಿದ್ದೇನೆ. ಈ ಮದುವೆಗೆ ನನ್ನ ಒಪ್ಪಿಗೆ ಇದೆ ಎಂದು ಎಂದು ಮೂರು ಬಾರಿ ಹೇಳಿದ್ದಾಳೆ.
An 18-year old Sikh girl in Pakistan forced to convert to Islam! Yes, this incident happened in Nankana Sahib@ImranKhanPTI Ji should protect the interests of minorities in Pakistan. We condemn the action and urge @DrSJaishankar Ji to take up this issue with his Pak counterpart pic.twitter.com/XhXKD466iy
— Manjinder Singh Sirsa (@mssirsa) August 29, 2019