ಸೌತ್‌ನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ (A.R. Murugadoss) ಸದ್ಯ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಮೀರ್ ಖಾನ್ ನಟನೆಯ ‘ಘಜಿನಿ’ ಚಿತ್ರದ ಸೀಕ್ವೆಲ್ ಬರಲಿದೆಯಾ? ಎಂಬುದಕ್ಕೆ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ. ‘ಘಜಿನಿ’ ಪಾರ್ಟ್ 2 ಬರೋದಾಗಿ ಅವರು ತಿಳಿಸಿದ್ದಾರೆ.
ಆಮೀರ್ ಖಾನ್ (Aamir Khan) ಸದ್ಯ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸೆಟ್‌ಗೆ ಇತ್ತೀಚೆಗೆ ಮುರುಗದಾಸ್ ಭೇಟಿ ನೀಡಿರೋದಾಗಿ ತಿಳಿಸಿದ್ದಾರೆ. ಈ ವೇಳೆ, ‘ಘಜಿನಿ 2’ (Ghajini 2) ಬಗ್ಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಬಳಿ ಕೆಲವು ಐಡಿಯಾಗಳಿವೆ. ಮತ್ತೊಮ್ಮೆ ಮಾತುಕತೆ ನಡೆಸೋದಾಗಿ ಹೇಳಿದ್ದಾರೆ. ‘ಘಜಿನಿ 2’ ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ತಿಳಿಸಿದ್ದಾರೆ. ಇದನ್ನೂ ಓದಿ:ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡುತ್ತೇನೆ: ಬ್ರೇಕಪ್ ಬಗ್ಗೆ ತಮನ್ನಾ ಮಾತು
ಇನ್ನೂ 2008ರಲ್ಲಿ ‘ಘಜಿನಿ’ (Ghajini) ಸಿನಿಮಾ ರಿಲೀಸ್ ಆಗಿತ್ತು. ಆಮೀರ್ ಖಾನ್ ಮತ್ತು ಆಸಿನ್ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ ಸಕ್ಸಸ್ ಕಂಡಿತ್ತು. ಇದೀಗ ಹಲವು ವರ್ಷಗಳ ನಂತರ ಇದರ ಸಿಕ್ವೇಲ್ ತರಲು ಪ್ಲ್ಯಾನ್ ನಡೆಯುತ್ತಿದೆ. ತೆರೆಮರೆಯಲ್ಲಿ ತಯಾರಿ ನಡೆಯುತ್ತಿದ್ದು, ಈ ಸುದ್ದಿ ತಿಳಿದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.