ಇಬ್ಬರು ಮಹಾನ್ ಸಾಧಕರು ಮುಖಾಮುಖಿಯಾಗಿರುವ ಅಪರೂಪದ ಘಟನೆ ನಡೆದಿದೆ. ಅಲ್ಲೊಂದು ಆಪ್ತ ಮಾತುಕತೆ ನಡೆದಿದೆ. ಹೀಗೆ ಮುಖಾಮುಖಿಯಾದವರೇ ರಿಷಬ್ ಶೆಟ್ಟಿ (Rishab Shetty) ಹಾಗೂ ಜ್ಯೂ.ಎನ್‌ಟಿಆರ್. ಅದೊಂದು ದೊಡ್ಡ ವೇದಿಕೆಯಲ್ಲಿ ಇಬ್ಬರ ನಡುವೆ ಕನ್ನಡ ಭಾಷೆ ನಲಿದಾಡಿದೆ. ಸುಂದರ ನಗರ ಕುಂದಾಪುರ ನೆನಪಾಗಿದೆ.
ಕನ್ನಡ ಕರಾವಳಿಯ ಸಂಸ್ಕೃತಿ ಆಚರಣೆಯನ್ನ ದೇಶದಲ್ಲಿ ಮೆರೆಸಿದ ನಟ ರಿಷಬ್ ಶೆಟ್ಟಿ. ಇನ್ನೊಬ್ಬರು ಆಂಧ್ರದ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್. ಪ್ರತಿಷ್ಟಿತ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ(Siima Awards 2023) ಮುಖಾಮುಖಿಯಾದ್ರು. ಬಳಿಕ ನಡೆದಿದ್ದೇ ಬಾಂಧವ್ಯದ ಮಿಲನ. ಇದನ್ನೂ ಓದಿ:ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೃತಧಾರೆ’ ರಿಲೀಸ್ ಆಗಿ ಇಂದಿಗೆ 18 ವರ್ಷ
ಜ್ಯೂ.ಎನ್‌ಟಿಆರ್ (Jr.Ntr) ಹುಟ್ಟಿದ್ದು ಬೆಳೆದಿದ್ದೆಲ್ಲವೂ ಆಂಧ್ರದಲ್ಲೇ, ಟಾಲಿವುಡ್ ಸಿನಿಮಾ ನಟ. ಆದರೆ ಅವರು ಕನ್ನಡ ಭಾಷೆ ಅದ್ಭುತವಾಗಿ ಮಾತನಾಡುತ್ತಾರೆ. ಕಾರಣ ತಾಯಿ ಊರು ಕರ್ನಾಟಕದ ಕುಂದಾಪುರ. ಅಮ್ಮನ ಮಡಿಲಲ್ಲಿ ಕನ್ನಡ ಕಲಿತ ಜ್ಯೂ.ಎನ್‌ಟಿಆರ್ ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತಾಡ್ತಾರೆ. ಕರ್ನಾಟಕಕ್ಕೆ ಬಂದ್ರೆ ಸಾಕು ಕನ್ನಡವನ್ನೇ ಮಾತಿನಲ್ಲಿ ಬಳಸುತ್ತಾರೆ.
ರಿಷಬ್- ಜ್ಯೂ.ಎನ್‌ಟಿಆರ್ ನಡುವೆ ಸೈಮಾದಲ್ಲೊಂದು ಅದ್ಭುತ ಸಂಭಾಷಣೆ ನಡೆದಿದೆ. ಅದರ ತುಣುಕುಗಳು ಈಗಾಗ್ಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಿಷಬ್ ಶೆಟ್ಟಿ ಕುಂದಾಪುರದ (Kundapura) ಊರಿನವರು. ಅದೇ ಕುಂದಾಪುರ ಜ್ಯೂ.ಎನ್‌ಟಿಆರ್‌ಗೆ ಅಜ್ಜಿಮನೆ ಆಗಬೇಕು. ಅಂದ್ರೆ ತಾಯಿಯ ಊರದು. ಹೀಗಾಗಿ ಇಬ್ಬರೂ ಕುಂದಾಪುರವನ್ನ ನೆನೆದ್ರು.
‘ಕಾಂತಾರ’ (Kantara) ಚಿತ್ರಕ್ಕೆ ರಿಷಬ್ ಶೆಟ್ಟಿ, ಜ್ಯೂ.ಎನ್‌ಟಿಆರ್ ಕಡೆಯಿಂದಲೇ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಿಷಬ್ ಕನ್ನಡದಲ್ಲಿ ವೇದಿಕೆ ಮೇಲೆ ಮಾತನಾಡುತ್ತಿದ್ದಾಗ ಕೆಳಗೆ ಕುಳಿತಿದ್ದ ಜ್ಯೂ.ಎನ್‌ಟಿಆರ್ ತಾವಾಗಿಯೇ ಕನ್ನಡದಲ್ಲಿ ಮಾತನಾಡ್ತಾ ರಿಷಬ್ ಜೊತೆ ಪ್ರೀತಿಯಿಂದ ಮಾತನಾಡಿದ್ದಾರೆ. ಅಲ್ಲೊಂದು ಹಿತವಾದ ಸ್ನೇಹ ಎಲ್ಲರ ಗಮನ ಸೆಳೆಯಿತು.
ಜ್ಯೂ.ಎನ್‌ಟಿಆರ್, ಅಗಲಿದ ಅಪ್ಪುಗೆ ಆಪ್ತಮಿತ್ರ. ಆರ್‌ಆರ್‌ಆರ್ ಚಿತ್ರದ ಪ್ರಚಾರಕ್ಕೆ ಬಂದಾಗಲೂ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದಾಗಲೂ ಅಪ್ಪುವನ್ನ ನೆನೆದು ಭಾವುಕವಾಗಿದ್ರು. ಕನ್ನಡದಲ್ಲೇ ಮಾತನಾಡಿದ್ರು. ಇದೀಗ ಮತ್ತೊಬ್ಬ ಕನ್ನಡಿಗನ ಜೊತೆ ಸ್ನೇಹದಿಂದ ಮಾತನಾಡಿರುವುದು ಕನ್ನಡಿಗರ ಹೃದಯದಲ್ಲಿ ಜ್ಯೂ.ಎನ್‌ಟಿಆರ್‌ಗೆ ಇನ್ನಷ್ಟು ಭದ್ರಸ್ಥಾನ ಪಡೆಯುವಂತಾಗಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]