ಕಲ್ಪಾಂತ್ಯದಲ್ಲಿ ಮಹಾವಿಷ್ಣು (Maha Vishnu) ವಟಪತ್ರಶಾಯಿಯಾಗಿ ಯೋಗನಿದ್ರೆಯಲ್ಲಿದ್ದಾಗ ಆತನ ಕಿವಿಯ ಗುಗ್ಗೆಯಿಂದ (ಕರ್ಣಮಲ) ಇಬ್ಬರು ರಾಕ್ಷಸರು ಜನಿಸುತ್ತಾರೆ. ಬ್ರಹ್ಮನ ಪ್ರೇರಣೆಯಿಂದ ಅವರಲ್ಲಿ ವಾಯುಸಂಚಾರವಾಗುತ್ತದೆ. ರಕ್ಷಸರಾಗಿ ಬಲಶಾಲಿಗಳಾದ ಅವರು ಮಹಾಬಲರಾಗಿ ದೇವಲೋಕವನ್ನೇ ವಶಪಡಿಸುತ್ತಾರೆ. ಬ್ರಹ್ಮ ಅವರನ್ನು ಸ್ಪರ್ಶಿಸಿ ನೋಡಲು ಒಬ್ಬ ಮೃದುವಾಗಿ ಕಂಡ. ಅವನೇ ಮಧು. ಮತ್ತೊಬ್ಬ ಕಲ್ಲಿನಂತೆ ಕರ್ಕಶವಾಗಿ ಕಂಡ. ಅವನೇ ಕೈಟಭ.
ಪರಾಕ್ರಮಿಗಳಾದ ಮಧು ಕೈಟಭ (Madhu Kaitabha) ಇವರನ್ನು ವಿಷ್ಣು ಸಂಹರಿಸಿದ. ವೈಕುಂಠ ಲೋಕದ ಉತ್ತರ ದ್ವಾರದ ಮೂಲಕ ಅವರನ್ನು ಪ್ರವೇಶಿಸುವಂತೆ ಮಾಡಿ ಸದ್ಗತಿಯನ್ನು ಕರುಣಿಸುತ್ತಾನೆ. ಸದ್ಗತಿಯಲ್ಲಿ ಕರುಣಿಸಿದ್ದು ಏಕಾದಶಿಯಂದು. ಈ ಕಾರಣಕ್ಕೆ ವೈಕುಂಠ ಏಕಾದಶಿಯಂದು (Vaikuntha Ekadashi) ವಿಶೇಷ ದ್ವಾರವನ್ನು ನಿರ್ಮಿಸಿ, ಅದರ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆಯುವ ಆಚರಣೆ ಇಂದು ಪ್ರಚಲಿತಕ್ಕೆ ಬಂದಿದೆ. ಭಕ್ತಿಪೂರ್ವಕವಾಗಿ ದೇವರಿಗೆ ಶರಣಾದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆಯಿದೆ.
Advertisement
Advertisement
Advertisement
ಅಮೃತ ಸಿಕ್ಕಿದ ದಿನ:
ಒಂದು ದಿನ ಋಷಿ ದೂರ್ವಾಸ ಇಂದ್ರನ ಆಸ್ಥಾನಕ್ಕೆ ಬಂದು ಬಹಳ ಗೌರವದಿಂದ ಇಂದ್ರನಿಗೆ ಹೂವಿನ ಹಾರವನ್ನು ಅರ್ಪಿಸುತ್ತಾನೆ. ಇಂದ್ರನು ಆ ಹಾರವನ್ನು ತೆಗೆದುಕೊಂಡು ತನ್ನ ಆನೆಯ ಐರಾವತದ ಹಣೆಯ ಮೇಲೆ ಇಡುತ್ತಾನೆ. ಆನೆಯು ಹಾರವನ್ನು ಸೊಂಡಿಲಿನಿಂದ ತೆಗೆದುಕೊಂಡು ಭೂಮಿಯ ಮೇಲೆ ಎಸೆಯುತ್ತದೆ.
Advertisement
ನಾನು ನೀಡಿದ ಹಾರಕ್ಕೆ ಅಗೌರವ ತೋರಿದ್ದಕ್ಕೆ ಸಿಟ್ಟಾದ ದೂರ್ವಾಸ ಮುನಿ ಕೋಪಗೊಂಡು, ನಿನಗೆ ಅಹಂಕಾರ ಬಂದಿದೆ. ಹೇಗೆ ನನ್ನ ಹಾರವನ್ನು ನೆಲಕ್ಕೆ ಎಸೆದು ಹಾಳು ಮಾಡಿದೆಯೋ ಅದೇ ರೀತಿ ನಿನ್ನ ರಾಜ್ಯವು ಹಾಳಾಗಲಿ ಎಂದು ಇಂದ್ರನಿಗೆ ಶಾಪವನ್ನು ಕೊಡುತ್ತಾನೆ. ದೂರ್ವಾಸನ ಶಾಪದ ಪರಿಣಾಮ ದೇವತೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಎಲ್ಲಾ ತರಕಾರಿ ಉತ್ಪನ್ನಗಳು ಮತ್ತು ಸಸ್ಯಗಳು ಸಾಯಲು ಪ್ರಾರಂಭಿಸುತ್ತವೆ, ಪುರುಷರು ದಾನ ಮಾಡುವುದನ್ನು ನಿಲ್ಲಿಸುತ್ತಾರೆ, ಮನಸ್ಸುಗಳು ಭ್ರಷ್ಟವಾಗುತ್ತವೆ, ಜನರು ಅಂತಿಮ ಇಂದ್ರಿಯ ಸುಖಗಳಲ್ಲಿ ತೊಡಗಲು ಪ್ರಾರಂಭಿಸುತ್ತಾರೆ. ಅಮರಾವತಿಯಲ್ಲಿ ದೇವರುಗಳು ದುರ್ಬಲವಾಗುತ್ತಿದ್ದಂತೆ, ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸುತ್ತಾರೆ.
ಸೋತ ನಂತರ ಇಂದ್ರಾದಿ ದೇವತೆಗಳು ವಿಷ್ಣುವಿನ ಬಳಿ ಹೋಗಿ ಮೊರೆ ಇಡುತ್ತಾರೆ. ಆಗ ಆಮೃತ ಪಡೆಯಬೇಕೆಂದು ಹೇಳಿದ ವಿಷ್ಣು ನೀವು ಮತ್ತು ರಾಕ್ಷಸರು ಸಮುದ್ರ ಮಂಥನ (Samudra Manthan) ಮಾಡಬೇಕು ಎಂದು ಸೂಚಿಸುತ್ತಾನೆ. ವೈಕುಂಠ ಏಕಾದಶಿಯ ಪವಿತ್ರ ದಿನದಂದು ಸಾಗರ ಮಂಥನವನ್ನು ನಡೆಯಿತು. ದೇವರು ಮತ್ತು ರಾಕ್ಷಸರು ಅಮೃತಕ್ಕಾಗಿ ಕ್ಷೀರ ಸಮುದ್ರವನ್ನು ಮಥನ ಮಾಡಿದಾಗ ಮೊದಲು ಕಠೋರವಾದ ವಿಷ ಜನಿಸಿತು. ನಂತರ ಜೇಷ್ಠಾದೇವಿ ಜನಿಸಿದಳು. ಬಳಿಕ ಲಕ್ಷ್ಮೀ ಪಾಲ್ಗಡಲಿಂದ ಹೊರಬಂದಳು.ಕೊನೆಯದಾಗಿ ಸಿಕ್ಕಿದ್ದು ಅಮೃತ. ಕ್ಷೀರ ಸಾಗರದಲ್ಲಿ ಸಿಕ್ಕಿದ ಅಮೃತವನ್ನು ಮೋಹಿನಿ ರೂಪದಲ್ಲಿದ್ದ ವಿಷ್ಣು ದೇವತೆಗಳಿಗೆ ನೀಡಿದಳು. ಇದನ್ನೂ ಓದಿ: Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?
ಅಮೃತ ಸಿಕ್ಕಿದ ಈ ಮಂಗಳರ ದಿನದಂದು ಮೃತಪಡುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ನಿವಾಸ ಅಥವಾ ವೈಕುಂಠ ಧಾಮವನ್ನು ತಲುಪುತ್ತಾರೆ ಎಂಬುದು ನಂಬಿಕೆ.
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ದಿನ ಕಠಿಣ ಉಪವಾಸ ವ್ರತ ಆಚರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೆ ಆ ದಿನದಂದು ಭಗವಾನ್ ವಿಷ್ಣುವಿಗೆ ಭಕ್ತಿ ಹಾಗೂ ಸಮರ್ಪಣಾ ಭಾವದಿಂದ ಪೂಜೆ ಸಲ್ಲಿಸಲಾಗುತ್ತದೆ.
ಏಕಾದಶಿ ವ್ರತವನ್ನು ಯಾರು ಭಕ್ತಿಯಿಂದ ಆಚರಿಸುತ್ತಾರೋ ಅವರ ಎಲ್ಲಾ ಕಷ್ಟಗಳು ಹಾಗೂ ಸಮಸ್ಯೆಗಳನ್ನು ವಿಷ್ಣು ಪರಿಹಾರ ಮಾಡುತ್ತಾನೆ. ಅದರಲ್ಲೂ ವೈಕುಂಠ ಏಕಾದಶಿ ಸಮಯದಲ್ಲಿ ವಿಷ್ಣುವಿನ ನೆಲೆಯಾದ ವೈಕುಂಠದ ದ್ವಾರಗಳು ತೆರೆಯುತ್ತದೆ. ಈ ವಿಶೇಷ ದಿನದಂದು ವಿಷ್ಣು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.