Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Public TV
Last updated: July 13, 2025 5:56 pm
Public TV
Share
4 Min Read
sigandur bridge to be inaugurated today
SHARE

ರಾಜ್ಯದ ಅತೀ ದೊಡ್ಡ ಕೇಬಲ್‌ ಸೇತುವೆಯಾದ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆಯ (Sigandur Bridge) ಇಂದು (ಜು.13) ಲೋಕಾರ್ಪಣೆಯಾಗುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇತುವೆ ಉದ್ಘಾಟಿಸಲಿದ್ದಾರೆ. ಈ ಮೂಲಕ ಶರಾವತಿ ಮಡಿಲ ಮಕ್ಕಳ 6 ದಶಕಗಳ ಕನಸು ನನಸಾಗುತ್ತಿದೆ.

70ರ ದಶಕದಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಮ್ (Linganamakki Dam) ಕಟ್ಟಿದಾಗ ಅದರ ಹಿನ್ನೀರಿನಿಂದ ಸಾಗರ (Sagar) ತಾಲೂಕಿನ ಶರಾವತಿ ಕಣಿವೆ 2 ಭಾಗವಾಗಿ ವಿಭಜನೆಯಾಯಿತು. ಇದರಿಂದ ನದಿಯ ಒಂದು ಭಾಗದಲ್ಲಿ ಉಳಿದವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಬದುಕುವಂತಾಗಿತ್ತು. ಅಲ್ಲಿನ ಜನ 2 ಕಿಮೀ ಅಂತರದ ನದಿ ದಾಟಲು ವ್ಯವಸ್ಥೆ ಇಲ್ಲದೇ ಸಾಗರ ತಾಲೂಕು ಕೇಂದ್ರವನ್ನು ತಲುಪಬೇಕಾದರೆ ಸುಮಾರು 80 ರಿಂದ 100 ಕಿ.ಮೀ. ರಸ್ತೆ ಮಾರ್ಗದಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

Siganduru bridge

ಈ ಸಮಸ್ಯೆ ಬಗೆಹರಿಸಲು ಅಂಬಾರಗೊಡ್ಲು – ಕಳ್ಳಸವಳ್ಳಿ ದಡಕ್ಕೆ ಲಾಂಚ್‌ ವ್ಯವಸ್ಥೆ ಮಾಡಲಾಯಿತು. ಸಂಜೆ 6 ಗಂಟೆ ಬಳಿಕ ಲಾಂಚ್‌ ಸ್ಥಗಿತಗೊಳಿಸಲಾಗುತ್ತಿತ್ತು. ಈ ಸಮಯದಲ್ಲಿ ಶರಾವತಿ ಹಿನ್ನೀರಿನ ದಡದ ತುಮರಿ ಭಾಗದ ಜನರಿಗೆ ಏನಾದರೂ ಆರೋಗ್ಯ ಸಮಸ್ಯೆ, ಅಪಘಾತ ಆದರೆ ನಿಟ್ಟೂರು ಮೂಲಕ ಹೊಸನಗರ, ಶಿವಮೊಗ್ಗ ಅಥವಾ ಕೊಲ್ಲೂರು, ಕುಂದಾಪುರ ಇಲ್ಲವೇ ಕೋಗಾರು ಘಾಟಿ ಬಳಸಿ ಸಾಗರ, ಭಟ್ಕಳ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ತುಂಬ ವಿಳಂಬವಾಗಿ ಎಷ್ಟೋ ರೋಗಿಗಳು, ಅಪಘಾತದಲ್ಲಿ ಗಾಯಗೊಂಡವರು ಮೃತಪಟ್ಟ ಉದಾಹರಣೆ ಸಹ ಇದೆ. ಇದೇ ಕಾರಣಕ್ಕೆ ಶರಾವತಿ ನದಿಗೆ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿತ್ತು. ಇದಕ್ಕೆ ಹಲವಾರು ಹೋರಾಟಗಳು ಸಹ ನಡೆದಿದ್ದವು. ಇದೆಲ್ಲದರ ಫಲವಾಗಿ ಈ ದಿನ ಸೇತುವೆ ತಲೆ ಎತ್ತಿ ನಿಂತಿದೆ.

ಭಾರತದ 2ನೇ ಅತೀ ಉದ್ದದ ಕೇಬಲ್ ಬ್ರಿಡ್ಜ್
ಸಿಗಂದೂರು ಸೇತುವೆ ದೇಶದ 2ನೇ ಅತೀ ಉದ್ದದದ ಕೇಬಲ್ ಸೇತುವೆಯಾಗಿದೆ. ಗುಜರಾತ್‌ನ ಓಖಾ ಪ್ರದೇಶದಿಂದ ಬೇಯ್ ದ್ವಾರಕೆ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುದರ್ಶನ ಸೇತುವೆ ದೇಶದ ಅತೀ ಉದ್ದದ ಕೇಬಲ್ ಬ್ರಿಡ್ಜ್ ಆಗಿದೆ. ಸುದರ್ಶನ ಸೇತುವೆಯನ್ನು 2024ರಲ್ಲಿ ಉದ್ಘಾಟಿಸಲಾಗಿತ್ತು. 2.32 ಕಿ.ಮೀ. ಇರುವ ಈ ಸೇತುವೆ ಚತುಷ್ಪಥ ರಸ್ತೆ ಹೊಂದಿದೆ.

2 1

ಸಿಗಂದೂರು ಸೇತುವೆ 2.44 ಕಿ.ಮೀ. ಉದ್ದವಿದೆ. ಇದರಲ್ಲಿ 740 ಮೀಟರ್ ಮಾತ್ರ ಕೇಬಲ್ ಸೇತುವೆ ಇದೆ. 30ರಿಂದ 55 ಮೀಟ‌ರ್ ಎತ್ತರದ 17 ಪಿಲ್ಲರ್‌ಗಳಿವೆ. ಇದು ದ್ವಿಪಥ ಹೊಂದಿದ್ದು, 2 ಕಡೆ 1.5 ಮೀಟರ್ ಅಗಲದ ಪುಟ್ಪಾತ್ ಕೂಡ ಇದೆ. ಸೇತುವೆ ನಿರ್ಮಾಣಕ್ಕೆ 423.15 ಕೋಟಿ ರೂ. ವೆಚ್ಚವಾಗಿದೆ.

ಈ ಸೇತುವೆ ಕಾಮಗಾರಿಗೆ 2018ರ ಫೆ.19ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. 2019ರ ಡಿಸೆಂಬರ್‌ನಿಂದ ಕಾಮಗಾರಿ ಆರಂಭಗೊಂಡಿತ್ತು. ಇನ್ನೂ ಗೋವಾದ ಜೇರಿ ನದಿಗೆ ನಿರ್ಮಿಸಿರುವ 680 ಮೀ ಉದ್ದದ ಸೇತುವೆ ದೇಶದ 2ನೇ ಅತೀ ಉದ್ದದ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈಗ ಈ ಖ್ಯಾತಿ ಸಿಗಂದೂರು ಸೇತುವೆಗೆ ಲಭಿಸಲಿದೆ.

3

ಉದ್ದದ ಆಧಾರದ ಮೇಲೆ ದೇಶದ 2ನೇ ಅತೀ ಉದ್ದದ ಹಾಗೂ ರಾಜ್ಯದ ಮೊದಲ ಕೇಬಲ್ ಆಧಾರಿತ ಸೇತುವೆ ಇದಾಗಿದೆ. ಪ್ರತೀ ಪಿಲ್ಲರ್ ಫೌಂಡೇಶನ್ 177 ಮೀಟ‌ರ್ ಅಂತರ ಇದೆ. ಈ ಸೇತುವೆಗೆ 30 ಮೀಟ‌ರ್ ಅಂತರದಲ್ಲಿ 80 ಪಿಲ್ಲರ್ ಫೌಂಡೇಶನ್ ಹಾಕಬೇಕಿತ್ತು. ಆದರೆ ಇದನ್ನು 19 ಪಿಲ್ಲರ್ ಫೌಂಡೇಶನ್‌ನಲ್ಲೇ ಮುಗಿಸಲಾಗಿದೆ. 177, 105, 93 ಮೀಟರ್ ಅಂತರದಲ್ಲಿ ಪಿಲ್ಲರ್‌ಗಳಿವೆ. ಇದು 2019ರಲ್ಲಿ ಘೋಷಣೆ ಆಗಿದ್ದು ಆಗ ಇದು ನೂತನ ತಂತ್ರಜ್ಞಾನವಾಗಿತ್ತು. ಈಗ ಇದಕ್ಕಿಂತ ಸುಧಾರಿತ ತಂತ್ರಜ್ಞಾನಗಳು ಬಂದಿವೆ.

ನೀರಿನೊಳಗೆ ಪಿಲ್ಲರ್‌ಗಳನ್ನು ನಿರ್ಮಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಈ ಕೆಲಸಕ್ಕೆ ಅನೇಕ ವರ್ಷಗಳು ಹಿಡಿಯುತ್ತದೆ. ಇದಕ್ಕಾಗಿ ನದಿಯ ನೀರನ್ನು ಖಾಲಿ ಮಾಡಬೇಕಾಗುತ್ತದೆ. ನೀರು ಖಾಲಿ ಮಾಡಲು ಆಗದೇ ಇದ್ದಿದ್ದರಿಂದ ಪಿಲ್ಲರ್‌ಗಳ ಸಂಖ್ಯೆ ಕಡಿಮೆ ಮಾಡಿಕೊಂಡು ಇಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಸೇತುವೆಯ 70% ಲೋಡ್ ಕೇಬಲ್ ತೆಗೆದುಕೊಳ್ಳುತ್ತದೆ. ಸೇತುವೆ ನಿರ್ಮಾಣಕ್ಕೆ ಬಳಸಿದ ಕೇಬಲ್ ಝಾರ್ಖಂಡ್ ಬಿಟ್ಟರೆ ಬೇರೆ ಎಲ್ಲೂ ಸಿಗುವುದಿಲ್ಲ ಎಂಬುದು ಮತ್ತೊಂದು ವಿಶೇಷ.

4

ಎರಡು ವರ್ಷವಾದ್ರೂ ತಗ್ಗದ ನೀರು!
ಲಿಂಗನಮಕ್ಕಿ ಜಲಾಶಯದ ನೀರು ತಾಂತ್ರಿಕ ಕಾರಣಗಳಿಂದ 2 ವರ್ಷ ಕಡಿಮೆ ಆಗಿರಲಿಲ್ಲ. ಹಳೆಯ ದಾಖಲೆಗಳ ಪ್ರಕಾರ, ಸೇತುವೆ ನಿರ್ಮಾಣಕ್ಕೆ ಈ ಸಮಯದಲ್ಲಿ 90 ದಿನ ಅವಕಾಶ ಸಿಗಲಿದೆ ಎಂದು ಯೋಜನೆ ರೂಪಿಸಲಾಗಿತ್ತು. ನೀರು ತಗ್ಗದ ಕಾರಣ ಕೆಲಸ ಆಗಿರಲಿಲ್ಲ. 2022ರಲ್ಲಿ ನೀರು ಕಡಿಮೆಯಾದಾಗ 40 ದಿನಗಳ ಅವಕಾಶ ಸಿಕ್ಕಿತ್ತು. ಈ ಸಮಯದಲ್ಲಿ ರಸ್ತೆ ಮಟ್ಟಕ್ಕಿಂತ 50 ಮೀಟರ್ ಎತ್ತರದಲ್ಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ. ಸೇತುವೆ ನಿರ್ಮಾಣಕ್ಕೆ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದ್ದು, ಸೇತುವೆಗಾಗಿ ಕಾರ್ಮಿಕರು ಬಹಳ ಶ್ರಮಪಟ್ಟಿದ್ದಾರೆ.

Sigandur Bridge

ಪ್ರವಾಸಿಗರಿಗೆ, ಸ್ಥಳೀಯರಿಗೆ ವರವಾದ ಸೇತುವೆ
ಸೇತುವೆಯಿಂದ ಪ್ರವಾಸೋದ್ಯಮಕ್ಕೆ ಭಾರೀ ಲಾಭವಾಗುವ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಸಾಧ್ಯವಾಗುವುದರಿಂದ ಈ ಭಾಗದ ಆರ್ಥಿಕ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಸಿಗಂದೂರು ಸೇತುವೆ ರಾಷ್ಟ್ರೀಯ ಹೆದ್ದಾರಿ 17 ಮತ್ತು 206ರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಸುಮಾರು 25 ಕಿ.ಮೀ.ನಷ್ಟು ದೂರ ಕಡಿಮೆಯಾಗುತ್ತದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ತೆರಳುವ ಭಕ್ತರಿಗೂ ಅನುಕೂಲವಾಗಲಿದೆ. ಶಿವಮೊಗ್ಗ, ಸಾಗರ ಮತ್ತು ಭಟ್ಕಳ, ಬೈಂದೂರು, ಕೊಲ್ಲೂರಿಗೆ ತೆರಳಲು ಮಾರ್ಗದ ದೂರವನ್ನು ಕಡಿತಗೊಳಿಸುತ್ತದೆ.

2010ರಲ್ಲಿ ಸೇತುವೆ ನಿರ್ಮಾಣಕ್ಕೆ ಯತ್ನ
2010ರಲ್ಲಿ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗಿತ್ತು. ಆಗ ಇದು ಜಿಲ್ಲಾ ಮುಖ್ಯರಸ್ತೆ ಆಗಿತ್ತು, ಜೊತೆಗೆ ವನ್ಯಜೀವಿ ಅರಣ್ಯ ಪ್ರದೇಶವೂ ಆಗಿದ್ದ ಕಾರಣ ಸೇತುವೆ ‌ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ರಸ್ತೆಯ ಮೂಲಕ ಸಿಗಂದೂರು ಹಾಗೂ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಜಿಲ್ಲಾ ಮುಖ್ಯರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಕೇಂದ್ರದ ವನ್ಯಜೀವಿ ವಿಭಾಗದಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ಪಡೆದು ಸೇತುವೆ‌ ನಿರ್ಮಾಣ ಮಾಡಲಾಗಿದೆ.

ಮುಂದೆ ಲಾಂಚ್‌ ಕತೆ ಏನು?
ಸಿಗಂದೂರಿಗೆ ಬರುತ್ತಿದ್ದವರಿಗೆ ಹೆಚ್ಚು ಖುಷಿ ಕೊಡುತ್ತಿದ್ದ ಲಾಂಚ್‌ ಪ್ರಯಾಣ ಇನ್ನುಮುಂದೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಪ್ರವಾಸಿಗರು ಒತ್ತಾಯ ಮಾಡಿದ್ರೆ ಲೋಕೋಪಯೋಗಿ ಇಲಾಖೆ ಮುಂದುವರಿಸಬಹುದು ಅಥವಾ ಪ್ರವಾಸೋದ್ಯಮ ಇಲಾಖೆಗೆ ಅದನ್ನು ನಿರ್ವಹಿಸಲು ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

TAGGED:Linganamakki damSagarshivamoggaSigandur Bridgesigandur chowdeshwari temple
Share This Article
Facebook Whatsapp Whatsapp Telegram

Cinema News

Abhiman Studio where Vishnu Samadhi was located was confiscated forest department
ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?
Bengaluru City Cinema Districts Karnataka Latest Main Post Sandalwood
Dhruva Sarja helped Harish Roy of KGF fame
ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ
Cinema Latest Sandalwood
Harish Rai
ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ
Cinema Latest Sandalwood Top Stories
Bili Chukki Halli Hakki Movie
ಅಕ್ಟೋಬರ್ 24 ರಂದು `ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ!
Cinema Latest Main Post Sandalwood
Janhvi Kapoor
`ಪರಮ್ ಸುಂದರಿ’ ಪ್ರೀಮಿಯರ್‌ನಲ್ಲಿ ಪರಮ ಸುಂದರಿಯಾಗಿ ಮಿಂಚಿದ ಜಾನ್ವಿ
Bollywood Cinema Latest Top Stories

You Might Also Like

Armed Reserve Force Personal
Kolar

ಜೀವನದಲ್ಲಿ ಜಿಗುಪ್ಸೆ; ಸಶಸ್ತ್ರ ಮೀಸಲು ಪಡೆಯ ಪೇದೆ ಆತ್ಮಹತ್ಯೆ

Public TV
By Public TV
24 minutes ago
Urjit Patel
Latest

IMF ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ನೇಮಕ

Public TV
By Public TV
34 minutes ago
rajasthan driver
Latest

ಹೆಲ್ಪರ್‌ಗೆ ಬಸ್ ‌ಚಾಲನೆ ಮಾಡಲು ಕೊಟ್ಟು ಸ್ವಲ್ಪ ಹೊತ್ತಲ್ಲೇ ಚಾಲಕ ಸಾವು

Public TV
By Public TV
46 minutes ago
Prahlad Joshi and ashwini vaishnaw
Dharwad

ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ

Public TV
By Public TV
1 hour ago
POWER CUT
Bengaluru City

ನಗರದ ಹಲವೆಡೆ ನಾಳೆ, ನಾಳಿದ್ದು ವಿದ್ಯುತ್ ವ್ಯತ್ಯಯ

Public TV
By Public TV
2 hours ago
Mahesh Shetty Thimarodi 5
Dakshina Kannada

ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ ಮಹೇಶ್ ಶೆಟ್ಟಿ ತಿಮರೋಡಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?