ಚಿಕ್ಕಮಗಳೂರು: ಸಿದ್ರಾಮುಲ್ಲಾ ಖಾನ್ (Sidramulla Khan) ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಏಕೆ ಹೀಗೆ ಮೈ ಉರಿಯುತ್ತಿದೆ. ಹೀಗೆ ಉರಿಯುತ್ತೆ ಅಂತಾ ಗೊತ್ತಾಗಿದ್ದರೇ 10 ವರ್ಷದ ಮೊದಲೇ ಹೇಳುತ್ತಿದ್ದೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಮತ್ತೆ ಲೇವಡಿ ಮಾಡಿದ್ದಾರೆ.
Advertisement
ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, `ಸಿದ್ರಾಮುಲ್ಲಾ ಖಾನ್’ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಸಿದ್ರಾಮುಲ್ಲಾ ಖಾನ್ ಅನ್ನೋದು ಬೈಗುಳವಾ? ಅದು ಬೈಗುಳ ಅಲ್ಲಾ. ನಿಮಗೆ ಉರಿ ಹತ್ತಿದ್ಯಾಕೆ ಎಂದು ಕಾಂಗ್ರೆಸ್ಸಿಗರಿಗೆ (Congress Leaders) ಕಿಚಾಯಿಸಿದ್ದಾರೆ. ನೀವು ದೇಶದ ಪ್ರಧಾನಿಗೆ (PrimeMinister Of India) ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದೆಲ್ಲಾ ಕರೆದ್ರಿ. ಸಿದ್ರಾಮುಲ್ಲಾ ಖಾನ್ ಎಂಬ ಒಂದೇ ಒಂದು ಹೇಳಿಕೆಗೆ ಉರಿ ಹತ್ತಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹೆಸರು ದೇವರ ಹೆಸರಿನಿಂದ ಬಂದಿದೆ, ಟೀಕಿಸಿದ್ರೆ ಹುಷಾರ್: ಎಂ.ಬಿ ಪಾಟೀಲ್
Advertisement
Advertisement
`ಸಿದ್ರಾಮುಲಾ ಖಾನ್’ ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದಿತ್ತು. ಯಡಿಯೂರಪ್ಪನವರಿಗೆ ರಾಜಾಹುಲಿ ಅಂತಾರೆ. ಸಿದ್ದರಾಮಯ್ಯನವರಿಗೆ ಹುಲಿಯಾ ಅಂತಾರೆ. ಹಾಗೆ ಇದು ಕೂಡ ಒಂದು ಬಿರುದು. ನಾನಂತು ಹಿಂದೂಗಳಿಗೆ ಅನ್ಯಾಯ ಮಾಡಿದ್ದೆ, ದತ್ತಪೀಠಕ್ಕೆ ಅನ್ಯಾಯ ಮಾಡಿದ್ದೆ. ಟಿಪ್ಪು ಜಯಂತಿ ಪರ ಇದ್ದೆ ಎಂದು ಜನ ಕೊಟ್ಟ ಬಿರುದು ಅಂತಾ ಭಾವಿಸುತ್ತಾರೆ ಅಂದುಕೊಂಡಿದ್ದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ರಾಮುಲು ಗೈರು- ಮುರಿದು ಬಿತ್ತಾ ದಶಕಗಳ ಗೆಳೆತನದ ನಂಟು..?
Advertisement
ನಾವು ಪ್ರತಿಭಟನೆ ಪ್ರಾರಂಭಿಸಿದ್ರೆ ಸಿ.ಟಿ ರವಿ ಎಲ್ಲೂ ಓಡಾಡೋಕೆ ಆಗಲ್ಲ ಅನ್ನೋ ಎಂ.ಬಿ ಪಾಟೀಲ್ (MB Patil) ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೇನು ಬೆದರಿಕೆ ಹಾಕ್ತಾರಾ. ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯಲ್ಲ. ಅವರು ಶ್ರೀಮಂತರೇ ಇರಬಹುದು, ಪಾಳೇಗಾರರೇ ಇರಬಹುದು. ನಾನೊಬ್ಬ ಸಾಮಾನ್ಯ ರೈತನ ಮಗ, ಪಾಳೇಗಾರ ಮನೆತನದವನಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಂಬೇಡ್ಕರ್ ಕೊಟ್ಟಿದ್ದು ಒಂದೇ ಒಂದು ವೋಟು. ಈ ಪಾಳೇಗಾರಿಕೆ ಮನಸ್ಥಿತಿಯನ್ನು ಎಂ.ಬಿ.ಪಾಟೀಲರು ಬದಲಾಯಿಸಿಕೊಳ್ಳಬೇಕು. ನೀವು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ. ನಿಮ್ಮೂರಿಗೆ ಬರ್ತೀನಿ. ನಾನು ಏನ್ ಹೇಳಬೇಕು ಅಂದುಕೊಂಡಿದ್ದೇನೋ ಅದನ್ನ ನಿಮ್ಮೂರಿನಲ್ಲೇ ಹೇಳ್ತೀನಿ. ನಿಮ್ಮ ಮುಖದ ಎದುರೇ ಹೇಳ್ತೀನಿ ಎಂದು ತಿರುಗೇಟು ನೀಡಿದ್ದಾರೆ.