ಮುಂಬೈ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶೂಟರ್ ಸಂತೋಷ್ ಜಾಧವ್ ನನ್ನು ಪುಣೆ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಪುಣೆ ಗ್ರಾಮಾಂತರ ಪೊಲೀಸರು ಮೂಸೆವಾಲಾ ಹತ್ಯೆ ಪ್ರಕರಣದ ಶಂಕಿತ ಜಾಧವ್ ಅವರ ಸಹಾಯಕನನ್ನು ಸಹ ಬಂಧಿಸಿದ್ದಾರೆ. ಹೆಚ್ಚುವರಿ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಎಡಿಜಿಪಿ ಕುಲ್ವಂತ್ ಕುಮಾರ್ ಸರಂಗಲ್ ಅವರು ಬೆಳವಣಿಗೆಗಳ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ನೂಪೂರ್ ವಿರುದ್ಧ ಪ್ರತಿಭಟಿಸಿದವರು ಕುವೈತ್‍ನಿಂದ ಗಡಿಪಾರು – ನಮ್ಮಲ್ಲಿ ಕಠಿಣ ಕ್ರಮ ಯಾವಾಗ ಎಂದ ನೆಟ್ಟಿಗರು?
ಪುಣೆಯ ಮಂಚರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2021ರ ಕೊಲೆ ಪ್ರಕರಣದಲ್ಲಿ ಜಾಧವ್‍ನನ್ನು ಬಂಧಿಸಲಾಗಿದೆ. ಆತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‍ನ ಸದಸ್ಯನಾಗಿದ್ದನು. ಜಾಧವ್ ಪತ್ತೆಗಾಗಿ ಪುಣೆ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಹಲವು ತಂಡಗಳನ್ನು ಕಳೆದ ವಾರ ಗುಜರಾತ್ ಮತ್ತು ರಾಜಸ್ಥಾನಕ್ಕೆ ಕಳುಹಿಸಲಾಗಿತ್ತು. ಇದನ್ನೂ ಓದಿ: ದೊಡ್ಡ ಸಮುದಾಯಕ್ಕೆ ನೋವಾಗುತ್ತಿದೆ, ಬುಲ್ಡೋಜರ್‌ನಿಂದ ರಾಮ ರಾಜ್ಯದ ಕಲ್ಪನೆ ಧ್ವಂಸ: ಅಖಿಲೇಶ್ ಯಾದವ್
1 ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಜಾಧವ್ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಒಬ್ಬ ನಾಗನಾಥ್ ಸೂರ್ಯವಂಶಿ ಮತ್ತು ಜಾಧವ್ ಹೆಸರು ತನಿಖೆಯಲ್ಲಿ ಕೇಳಿ ಬಂದಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
2021ರಲ್ಲಿ ನಡೆದ ಕೊಲೆಯ ನಂತರ ಜಾಧವ್‍ಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಸಿದ್ದೇಶ್ ಕಾಂಬ್ಳೆ ಅಲಿಯಾಸ್ ಮಹಾಕಾಲ್ ಎಂಬುವವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆತನೂ ಬಿಷ್ಣೋಯಿ ಗ್ಯಾಂಗ್‍ನ ಸದಸ್ಯನಾಗಿದ್ದಾನೆ.
ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಮಹಾಕಾಲ್‍ನನ್ನು ದೆಹಲಿ ಪೊಲೀಸರು ಹಾಗೂ ಪಂಜಾಬ್ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಜೀವ ಬೆದರಿಕೆ ಪತ್ರ ಬರೆದಿರುವ ಪ್ರಕರಣದಲ್ಲಿ ಮುಂಬೈ ಪೊಲೀಸರು ಆತನ ತೀವ್ರ ವಿಚಾರಣೆ ನಡೆಸಿದ್ದಾರೆ.