CrimeLatestMain PostNational

ಸಿಧು ಮೂಸೆವಾಲಾ ಹತ್ಯೆ ಕೇಸ್ – ಮೂವರು ಅರೆಸ್ಟ್

ನವದೆಹಲಿ: ಖ್ಯಾತ ಪಂಜಾಬಿ ಗಾಯಕ (Punjabi Singer) ಹಾಗೂ ರಾಜಕೀಯ ನಾಯಕ ಸಿಧು ಮೂಸೆವಾಲಾ (Sidhu MooseWala) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.

ದೀಪಕ್, ಕಪಿಲ್ ಪಂಡಿತ್, ರಾಜೇಂದ್ರ ಬಂಧಿತ ಆರೋಪಿಗಳು. ಪಂಜಾಬ್, ದೆಹಲಿ (NewDelhi) ಹಾಗೂ ಕೇಂದ್ರದ ತನಿಖಾ ಏಜೆನ್ಸಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂಸೆವಾಲಾರನ್ನ ಹತ್ಯೆ ಮಾಡಿದ ಆರೋಪಿ ದೀಪಕ್ ಹಾಗೂ ಈತನಿಗೆ ಸಹಕಾರ ನೀಡಿದ್ದ ಇಬ್ಬರನ್ನೂ ಬಂಧಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಈ ಬಾರಿ ದಸರಾ ಉದ್ಘಾಟನೆ – ಸಿಎಂ

ಇತ್ತೀಚೆಗೆ ಸಿಧು ಮೂಸೆವಾಲಾರನ್ನ ಗುಂಡಿಕ್ಕಿ ಕೊಂದಿದ್ದ ಪ್ರಮುಖ ಆರೋಪಿಯನ್ನ ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿತು. ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗೋಲ್ಡಿ ಬ್ರಾರ್ ಗ್ಯಾಂಗ್‌ಗೆ ಸೇರಿದ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದು, ಇಬ್ಬರ ಪೈಕಿ ಆರೋಪಿ ಅಂಕಿತ್ ಸಿರ್ಸಾ ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್‌ಗಳಲ್ಲಿ ಒಬ್ಬನಾಗಿದ್ದ ಎಂದು ಪೊಲೀಸರ ತಂಡ ಹೇಳಿತ್ತು. ಇದನ್ನೂ ಓದಿ: ಜನಸ್ಪಂದನಕ್ಕೆ ಕರಾಳೋತ್ಸವದ ಬಿಸಿ – ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಇದಾದ ಬಳಿಕ ಪಂಜಾಬ್‌ನ ಅಮೃತಸರದ ಸಮೀಪ ಒಂಟಿ ಮನೆಯೊಂದರಲ್ಲಿ ಅವಿತು ಕುಳಿತಿದ್ದ ನಾಲ್ವರ ಮೇಲೆ ಪೊಲೀಸರು (Police) ಗುಂಡಿನ ದಾಳಿ ನಡೆಸಿದ್ದರು. ಪಾಕಿಸ್ತಾನ ಗಡಿಯಿಂದ ಕೇವಲ 10 ಕಿಮೀ ದೂರದ ಹಳ್ಳಿಯಲ್ಲಿ ಗುಂಡಿನ ಮಳೆಗರೆದು ಲಾರೆನ್ಸ್ ಬಿಷ್ಣೋಯ್ ಗೋಲ್ಡಿ ಬ್ರಾರ್ ಗ್ಯಾಂಗ್‌ನ ನಾಲ್ವರನ್ನು ಕೊಲ್ಲಲಾಗಿತ್ತು.

Live Tv

Leave a Reply

Your email address will not be published.

Back to top button