ಚಂಡೀಗಢ: ಪಂಜಾಬ್‌ನ ಖ್ಯಾತ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದುರಾನ್ ಮಂದೀಪ್ ತೂಫಾನ್, ಮನಮೋಹನ್ ಸಿಂಗ್ ಮತ್ತು ಕೇಶವ್ ಅವರ ನಡುವೆ ಘರ್ಷಣೆ ನಡೆದಿದ್ದು, ಪ್ರಮುಖ ಆರೋಪಿಗಳಾದ ಮಂದೀಪದ, ಮನಮೋಹನ್ ಸಿಂಗ್ ಸಾವನ್ನಪ್ಪಿದ್ದಾರೆ.
Advertisement
ಮೂವರು ಆರೋಪಿಗಳನ್ನು ಪಂಜಾಬ್‌ನ ಗೋಯಿಂದ್ವಾಲ್ ಜೈಲಿನಲ್ಲಿ ಇರಿಸಲಾಗಿದ್ದು, ಮೂವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜಗಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ಕೇಶವ್‌ನನ್ನ ಪೊಲೀಸರು ಅಮೃತ್‌ಸರದ ಗುರುನಾನಕ್ ದೇವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಪಾರ್ಟ್ಮೆಂಟ್‌ನ 10ನೇ ಮಹಡಿಯಿಂದ ಬಿದ್ದು ಯುವತಿ ಆತ್ಮಹತ್ಯೆ
Advertisement
ಪೊಲೀಸರ ಪ್ರಕಾರ, ಜೈಲಿನಲ್ಲಿ ಆರೋಪಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘರ್ಷಣೆಗೆ ಬಳಸಿದ ಹರಿತವಾದ ಆಯುಧಗಳನ್ನು ಆರೋಪಿಗಳು ಜೈಲಿನಲ್ಲಿಯೇ ತಯಾರಿಸಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
Advertisement
Advertisement
ಏನಿದು ಮೂಸೆವಾಲಾ ಹತ್ಯೆ ಕೇಸ್?
2022ರ ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಹತ್ಯೆಗೂ ಹಿಂದಿನ ದಿನ ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿತ್ತು. ಸಿಧು ಅವರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸೋದರ ಸಂಬಂಧಿ ಹಾಗೂ ಸ್ನೇಹಿತರು ಕೂಡಾ ದಾಳಿಯ ವೇಳೆ ಗಾಯಗೊಂಡಿದ್ದರು. ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ರಾಜ್ಯದ ಲಾಲಿಹಾಡು ಪ್ರಸಾರ – ʼಮಲಗು ಕಂದʼ ಹಾಡಿಗೆ ಪ್ರಧಾನಿ ಮೋದಿ ಪ್ರಶಂಸೆ
ಸಿಧು ಮೂಸೆವಾಲಾ ಹತ್ಯೆಯ ಹಿಂದೆ ಗ್ಯಾಂಗ್‌ಸ್ಟರ್ ಲಾರೆನಸ್ ಬಿಶ್ನೋಯಿ ಅವರ ತಂಡದ ಕೈವಾಡವಿದೆ ಎಂದು ಹೇಳಲಾಗಿತ್ತು. ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಗ್ಯಾಂಗ್‌ನ ಸದಸ್ಯರಾದ ಶಾರ್ಪ್ ಶೂಟರ್ ಅಂಕಿತ್, ಸಚಿನ್ ಭಿವಾನಿ ಎನ್ನುವ ಪ್ರಮುಖ ಆರೋಪಿಗಳನ್ನು ಮೊದಲು ಬಂಧಿಸಿದ್ದರು. ಆನಂತರ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.