ಚಂಡೀಗಢ: ಪಂಜಾಬ್‌ನ ಖ್ಯಾತ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ಕಾರಾಗೃಹದಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ.
ಪಂಜಾಬ್‌ನ ಲೂಧಿಯಾನಾ ಕಾರಾಗೃಹ ಸೇರಿದ್ದ ಆರೋಪಿ ಸತ್ಬೀರ್ ಸಿಂಗ್‌ಗೆ ಇತರ ಕೈದಿಗಳು ದೈಹಿಕವಾಗಿ ಹಲ್ಲೆ ನಡೆಸಿದ್ದು, ಆತನ ತಲೆಗೆ ಗಾಯಗಳಾಗಿವೆ. ಆತನನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಗಾಯಗಳಿಗೆ ಹೊಲಿಗೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಯಿಯಿಂದ ನೀರು ಉಗುಳಿ ಬಟ್ಟೆ ಇಸ್ತ್ರಿ – ವೃದ್ಧನ ವೀಡಿಯೋ ವೈರಲ್
ತಲ್ವಾಡಿಯ ಕುದುರೆ ವ್ಯಾಪಾರಿಯಾಗಿದ್ದ ಆರೋಪಿ ಸತ್ಬೀರ್, ಸಿಧು ಮೂಸೆವಾಲಾ ಹಂತಕರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವಲ್ಲಿ ಭಾಗಿಯಾಗಿದ್ದ. ಬಳಿಕ ಲೂಧಿಯಾನಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಭಾರೀ ಜನಪ್ರಿಯತೆ ಹೊಂದಿದ್ದ ಮೂಸೆವಾಲಾ ಹತ್ಯೆಯಿಂದ ಆಕ್ರೋಶಿತರಾಗಿದ್ದ ಕೈದಿಗಳು ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕೆ ಸತ್ಬೀರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಝೆಲೆನ್ಸ್ಕಿ
ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಕಿಡಿಗೇಡಿ ಗುಂಪೊಂದು ಗುಂಡಿಕ್ಕಿ ಹತ್ಯೆ ನಡೆಸಿತ್ತು. ಹತ್ಯೆಗೂ 1 ದಿನ ಮುನ್ನ ಸಿಧು ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊAಡಿತ್ತು. ಈ ಕಾರಣಕ್ಕೆ ಹಂತಕರು ಯೋಜಿತ ಕಾರ್ಯಾಚರಣೆ ಮೂಲಕ ಹತ್ಯೆ ನಡೆಸಿದ್ದಾರೆ.